ಹೀಗೊಂದು ಅಪರೂಪದ ಮದುವೆ

ಅದೊಂದು ಅಪರೂಪದ ಮದುವೆ ಹಾಗೂ ಮಾನವೀಯ ತುಡಿತವನ್ನು ಸಾಕ್ಷೀಕರಿಸಿದ ಕ್ಷಣವೂ ಹೌದು. ಆಕೆ ಬಾಲಕಾರ್ಮಿಕ ಪದ್ದತಿಗೆ ಸಿಲುಕಿ ಸಂಕಷ್ಟದಿಂದ ಪಾರಾಗಿ ಬಾಲಮಂದಿರ ಸೇರಿದ ಅನಾಥೆ ಹೆಣ್ಣುಮಗಳು. ಈತ ಸಾಮಾಜಿಕ ತುಡಿತ ಇಟ್ಟುಕೊಂಡ ಸಹೃದಯ ಯುವಕ. ಅನಾಥೆಗೆ ಬಾಳು ಕೊಡ ಬೇಕೆಂಬ ಸಂಕಲ್ಪ ಮಾಡಿದ. ಪೋಷಕರು ಪುತ್ರನ ಅಪೇಕ್ಷೆಗೆ ತೆಗೆದು ಕೊಂಡ ನಿರ್ಧಾರವೇನು . ಮುಂದೇನಾಯ್ತು ಎಂಬ ಕುತೂಹಲಕ್ಕೆ ಉತ್ತರ ಇಲ್ಲಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಹಿಳೆಯರಿಗೆ ಶಿಕ್ಷಣ ಹಾಗೂ ಉದ್ಯೋಗ ಅವಕಾಶಗಳನ್ನು ನೀಡಿ ಅವರನ್ನು ಆರ್ಥಿಕವಾಗಿ ಮುಖ್ಯವಾಹಿನಿಗೆ ತರುವ ಸಬಲೀಕರಣ ಕೆಲಸಗಳನ್ನು ಮಾಡುತ್ತಾ ಬಂದಿದೆ. ಜೊತೆಗೆ ಆರೋಗ್ಯ, ಸಾಮಾಜಿಕ ಹಾಗೂ ಮಾನಸಿಕ ಬೆಳವಣಿಗೆಗಳನ್ನ ಬೆಳೆಸಲು ವಿವಿಧ ಯೋಜನೆಗಳನ್ನು ಅನುಷ್ಟಾನಗೊಳಿಸಿದೆ. ಮತ್ತು ಮಹಿಳೆಯರಿಗೆ ಉತ್ತಮ ಜೀವನವನ್ನು ಕಟ್ಟಿ ಕೊಡುವ ಕೆಲಸವನ್ನು ಮಾಡುತ್ತಿದೆ. ಅಂತಹವುಗಳಲ್ಲಿ ಬಾಲ ಕಾರ್ಮಿಕತೆಯನ್ನು ತೊರೆದು ಬಂದ ಹೆಣ್ಣು ಮಕ್ಕಳನ್ನು ಬೆಳೆಸಿ ಮದುವೆ ಮಾಡಿ ಕೊಡುವ ಕೆಲಸವು ಕೂಡ.

ಬಾಲಕಾರ್ಮಿಕ ಪದ್ದತಿಯ  ಶೋಷಣೆಗೊಳಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸ್ವೀಕಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ  ವಧು ಕು.ಚೈತ್ರಾ ಕೆ.ಎಸ್ ಮತ್ತು  ಅನಾಥೆಗೆ ಬಾಳು ಕೊಡಬೇಕೆಂಬ ದೃಢ ಸಂಕಲ್ಪ ಕೈಗೊಂಡಿದ್ದಂತಹ  ವರ ರೂಪೇಶಕುಮಾರ ಕೆ.ಸಿ ಇವರ ವಿವಾಹ  ಬೆಂಗಳೂರಿನ ಹೊಸೂರು ರಸ್ತೆಯ  ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ  ಇಲಾಖೆಯ ಸ್ವೀಕಾರ ಕೇಂದ್ರದ ಆವರಣದಲ್ಲಿರುವ  ಗಣಪತಿ ದೇವಾಲಯದಲ್ಲಿ  ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗ ಮತ್ತು  ವರನ ಬಂಧುಬಳಗದ ಸಮ್ಮುಖದಲ್ಲಿ  ಸಾಂಪ್ರದಾಯಿಕವಾಗಿ ನೆರವೇರಿತು.

 ಇಲಾಖೆಯ  ಉಪನಿರ್ದೇಶಕಿ ರತ್ನಾ ಬಿ. ಕಲಮದಾನಿ,   ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಗೀತಾ ಪಾಟೀಲ್ ಮತ್ತು  ಸ್ವೀಕಾರ ಕೇಂದ್ರದ  ಅಧೀಕ್ಷಕಿ ಪುಟ್ಟರತ್ನ ಜಿ ಸೇರಿದಂತೆ ವರನ ತಂದೆ, ತಾಯಿ ಬಂಧು ಬಳಗ, ಸ್ವೀಕಾರ ಕೇಂದ್ರದ  ಸಿಬ್ಬಂದಿಗಳೂ ಸೇರಿದಂತೆ ಸುಮಾರು ನೂರು ಮಂದಿ ಈ ಅಪರೂಪದ ಮದುವೆಗೆ ಸಾಕ್ಷಿಯಾದರು.

 ಹಿನ್ನಲೆ:

ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ನೌಕರಿಯಲ್ಲಿರುವ ಮತ್ತು ಸ್ವಂತ ಮನೆಯನ್ನೂ ಸಹ ಹೊಂದಿರುವ ರೂಪೇಶ್ ಕುಮಾರ್ ಅವರಿಗೆ ಬಹಳ ಹಿಂದಿನಿಂದಲೂ  ಓರ್ವ ಅನಾಥೆಗೆ ಬಾಳು ಕೊಡಬೇಕೆಂಬ ಬಲವಾದ ಇಚ್ಚೆ ಇತ್ತು. ಅಂತೆಯೇ ತಮ್ಮ  ಮನದ ಇಂಗಿತವನ್ನು ತಮ್ಮ ಪೋಷಕರ ಮುಂದೆ ತೋಡಿಕೊಂಡಿದ್ದರು.  ಮಗನ ಮನದಾಸೆಯನ್ನು ಅರ್ಥ ಮಾಡಿಕೊಂಡ  ಪೋಷಕರು   ಕಿಂಚಿತ್ತೂ ವಿರೋಧ  ವ್ಯಕ್ತಪಡಿಸದೆ  ತಮ್ಮ ಮಗನ ಮನೋಭಿಲಾಷೆಯನ್ನು ಸಾಕಾರಗೊಳಿಸಲು  ನಿರ್ಧರಿಸಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸ್ವೀಕಾರ ಕೇಂದ್ರದಲ್ಲಿರುವ ತಮ್ಮ  ಸಂಬಂಧಿಕರೊಬ್ಬರಿಗೆ ಈ  ವಿಚಾರವನ್ನು ತಿಳಿಸಿದ್ದರು. ಅದರಂತೆ  ಒಂದು ದಿನ  ಸ್ವೀಕಾರ ಕೇಂದ್ರಕ್ಕೆ ಭೇಟಿ  ನೀಡಿ ಕು. ಚೈತ್ರಳನ್ನು ನೋಡಿದ್ದರು. ಬಲಕಾರ್ಮಿಕ ಪದ್ದತಿಯ ಶೋಷಣೆಗೊಳಪಟ್ಟು  ತಾನು ಕೆಲಸ ಮಾಡುತ್ತಿದ್ದ ಮನೆಯಿಂದ  ತಪ್ಪಿಸಿಕೊಂಡು  ಹೊರಬಂದು ಸಾರ್ವಜನಿಕರು, ಪೊಲೀಸರ ಮುಖಾಂತರ  ಬಾಲಕಿಯರ ಬಾಲ ಮಂದಿರಕ್ಕೆ,  ತದನಂತರ ಸ್ವೀಕಾರ ಕೇಂದ್ರಕ್ಕೆ ದಾಖಲೆಗೊಂಡಿದ್ದ ಕು. ಚೈತ್ರಳನ್ನು  ರೂಪೇಶ್ ಕುಮಾರ್ ಅವರು ಒಪ್ಪಿದ್ದರು. ಪರಸ್ಪರ  ಇಬ್ಬರೂ ಒಪ್ಪಿಗೆ ವ್ಯಕ್ತಪಡಿಸಿದ ನಂತರ ಕಾನೂನಾತ್ಮಕ ಪ್ರಕ್ರಿಯೆ ಪೂರ್ಣಗೊಂಡು  ವಿವಾಹ  ಏರ್ಪಡಿಸಲಾಗುತ್ತದೆ.

 ‘ಹದಿನೆಂಟು ವರ್ಷ ಪೂರ್ತಿಗೊಳಿಸಿ ಆರೋಗ್ಯವಂತಳಾದ  ಕು.ಚೈತ್ರಗಳಿಗೆ  ನಿಯಮಾನುಸಾರ  ವಿವಾಹ ಮಾಡಲು  ನಿಶ್ಚಯಿಸಿ ವರಾನ್ವೇಷಣೆ  ನಡೆಸಿದ್ದು ಅದರಂತೆ ಈ ಸಂಸ್ಥೆಗೆ  ರೂಪೇಶ್ ಕುಮಾರ್ ಎಂಬುವರು ಅವರ ತಂದೆ ತಾಯಿ ಜೊತೆ ಈ ಸಂಸ್ಥೆಗೆ ಬಂದು ಕು.ಚೈತ್ರಳನ್ನು  ನೋಡಿ ಮದುವೆಯಾಗಲು ಸಮ್ಮತಿ ನೀಡಿರುತ್ತಾರೆ. ಸರ್ಕಾರದ  ನಿಯಮಾನುಸಾರ ಪ್ರಸ್ತಾವನೆ ಸಲ್ಲಿಸಿ ಸರ್ಕಾರದ ಅನುಮತಿ  ಪಡೆದು ಈ ವಿವಾಹ ನಡೆಸಲಾಗಿದೆ   ಎಂದು ಸ್ವೀಕಾರ ಕೇಂದ್ರದ ಅಧೀಕ್ಷಕಿ  ಪುಟ್ಟರತ್ನ ಅವರು ತಿಳಿಸಿದರು.

ಫಿಕ್ಸೆಡ್ ಡೆಪಾಸಿಟ್:

ನಿಯಮನುಸಾರ ಸರ್ಕಾರ ನೀಡುವ  ಇಪ್ಪತ್ತು ಸಾವಿರ ಅನುದಾನದಲ್ಲಿ ಹದಿನೈದು ಸಾವಿರ ರೂ.ಗಳನ್ನು ನೂತನ  ದಂಪತಿಗಳಿಬ್ಬರ ಹೆಸರಿನಲ್ಲಿ ಫಿಕ್ಸೆಡ್ ಡೆಪಾಸಿಟ್ ಇಡಲಿದ್ದು, ಉಳಿದ ಐದು ಸಾವಿರದಲ್ಲಿ ವಿವಾಹದ ಖರ್ಚುವೆಚ್ಚ ನೋಡಿಕೊಳ್ಳಲಾಗುವುದು.  ಸಾಂಪ್ರದಾಯಿಕ ಮದುವೆಯ ನಂತರ ವಿವಾಹ ನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹವನ್ನು ನೋಂದಣಿ ಮಾಡಿಸಲಾಗುವುದು ಎಂದು ಅವರು  ತಿಳಿಸಿದರು.

ವರ ಪರೀಕ್ಷೆ:

ವಿವಾಹವಾಗಲು ಅಪೇಕ್ಷಿಸಿ ಬರುವ ವರನ ಸಂಪೂರ್ಣ ವಿವರವನ್ನು ಮೊದಲಿಗೆ ಕಲೆ ಹಾಕಲಾಗುತ್ತದೆ. ವರ ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿದ್ದು. ತಾವು ವಿವಾಹವಾಗುವ ಹುಡುಗಿಯನ್ನು ಸಾಕಲು ಆರ್ಥಿಕವಾಗಿ ಸಬಲರಾಗಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ಅಪರಾಧ ಹಿನ್ನಲೆಯುಳ್ಳವನಾಗಿರಬಾರದು ಮತ್ತು ಈ ಕುರಿಂತಂತೆ ಪೊಲೀಸ್ ಇಲಾಖೆಯಿಂದ ಪ್ರಮಾಣ ಪತ್ರ ತರಬೇಕು. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ನಂತರ  ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳಿಗೆ  ಪ್ರಸ್ತಾವನೆ ಸಲ್ಲಿಸಿ ಅನುಮತಿ  ಪಡೆಯಲಾಗುತ್ತದೆ. ಒಪ್ಪಿಗೆ ದೊರೆತ ನಂತರ  ಉಳಿದಂತೆ ವಿವಾಹ ಪ್ರಕ್ರಿಯೆ  ಎಂದು ಅವರು ವಿವರಿಸಿದರು.

ಇದುವರೆಗೆ ಸ್ವೀಕಾರ ಕೇಂದ್ರದಲ್ಲಿ  ನಾಲ್ಕು ವಿವಾಹಗಳು ನಡೆದಿದ್ದು, ಚೈತ್ರ ಮತ್ತು ರೂಪೇಶ್‍ಕುಮಾರ್ ಅವರದ್ದು ಈ ಸಾಲಿನ ಮೊದಲ ಮದುವೆ.   ಸ್ವೀಕಾರ ಕೇಂದ್ರದ  ಮತ್ತಿಬ್ಬರು ಯೋಗ್ಯ ಹುಡುಗಿಯರಿಗೆ ಸಧ್ಯದಲ್ಲೇ ಕಂಕಣಬಲ ಕೂಡಿಬರಲಿದ್ದು, ಈ ನಿಟ್ಟಿನಲ್ಲಿ  ಸರ್ಕಾರದ ನಿಯಮಾನುಸಾರ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s