ಖಾದಿ ಮತ್ತು ಗ್ರಾಮೋದ್ಯೋಗ ಮಾರಾಟಕ್ಕೆ ಹೊಸ ಸ್ಪರ್ಶ

ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಕೇಂದ್ರ ಸರ್ಕಾರದ ಶೇ 75 ಹಾಗೂ ರಾಜ್ಯ ಸರ್ಕಾರದ ಶೇ 25 ಅನುದಾನಗಳ ಸಹಭಾಗಿತ್ವದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಖಾಯಂ ಮಾರಾಟಕ್ಕಾಗಿ ಖಾದಿ ಪ್ಲಾಜಾ ವಿಶೇಷ ಮಾರಾಟ ಮಳಿಗೆಗಳನ್ನು ರಾಜ್ಯದ ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ತೆರೆಯಲು ಉದ್ದೇಶಿಸಿದ್ದು,  ಮಳಿಗೆಗಾಗಿ   ಜಾಗವನ್ನು ಗುರುತಿಸುವ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲುವಹಳ್ಳಿ ಎನ್. ರಮೇಶ್ ಅವರು ತಿಳಿಸಿದರು.

ಖಾದಿ ಮಂಡಳಿ ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸಹಯೋಗದೊಂದಿಗೆ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕಳೆದ ಏಪ್ರಿಲ್ 24 ರಿಂದ ಒಂದು ತಿಂಗಳ ಕಾಲ ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಖಾದಿ ಉತ್ಸವ – 2017 ರ ವಿವರ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿದರು.

ಮಾರಾಟಕ್ಕೆ ಉತ್ತೇಜನ:

ರಾಜ್ಯದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಮಾರಾಟಕ್ಕಾಗಿ ಮಾಲ್‍ಗಳ ರೀತಿಯಲ್ಲಿ ಖಾಯಂ ಮಳಿಗೆಯನ್ನು ತೆರೆಯಲು ಮಂಡಳಿ ಉದ್ದೇಶಿಸಿದ್ದು,  ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಜೊತೆಗೂಡಿ ತಲಾ 10 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದ್ದು,  ಕನಿಷ್ಠ 2 ಎಕರೆ ಪ್ರದೇಶದಲ್ಲಿ ವಿಶಾಲವಾದ ಖಾಯಂ ಮಳಿಗೆಯನ್ನು ತೆರೆದು ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡಲು ಯೋಜಿಸಲಾಗಿದೆ ಎಂದು ತಿಳಿಸಿದರು.

4 ಕೋಟಿ ರೂ. ಅನುದಾನ:

ಈ ಸಾಲಿನ ರಾಜ್ಯ ಆಯವ್ಯಯದಲ್ಲಿ ಮಂಡಳಿಗೆ ಹೆಚ್ಚಿನ ಅನುದಾನ ದೊರೆತಿದ್ದು,  ರಾಜ್ಯದ ವಿವಿಧ ಆರು ಜಿಲ್ಲೆಗಳಲ್ಲಿ ಖಾದಿ ಉತ್ಸವವನ್ನು ಹಮ್ಮಿಕೊಳ್ಳಲು 2 ಕೋಟಿ ರೂ. ಅನುದಾನ ನೀಡಲಾಗಿದೆ.   ಮಂಡಳಿಯಡಿಯಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಕುರಿತಂತೆ ಸಾಮೂಹಿಕ ಕಾರ್ಯಾಗಾರ ಹಾಗೂ ಇತರೆ ಯೋಜನೆಗಳಿಗಾಗಿ 4 ಕೋಟಿ ರೂ. ಅನುದಾನ ದೊರೆತಿದೆ ಎಂದರು.

ವಿಶೇಷ ಮಾರಾಟ ಮಳಿಗೆ:

ಪ್ರತಿ ಜಿಲ್ಲೆಗೊಂದು ಖಾಯಂ ವಿಶೇಷ ಮಾರಾಟ ಮಳಿಗೆ ತೆರೆಯಲು 30 ಕೋಟಿ ರೂ. ಗಳ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮಂಡಳಿ ತೀರ್ಮಾನಿಸಿದ್ದು, ಜೊತೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಖಾದಿ ಮತ್ತು ಗ್ರಾಮೋದ್ಯೋಗದಲ್ಲಿ ತೊಡಗಿಸಿಕೊಂಡಿರುವ   ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೆರವಾಗಲು   100 ಕೋಟಿ ರೂ. ಪ್ರಸ್ತಾವನೆ ಕಳುಹಿಸಲು ಉದ್ದೇಶಿಸಲಾಗಿದೆ ಎಂದು ಎನ್. ರಮೇಶ್ ತಿಳಿಸಿದರು.

ರಾಷ್ಟ್ರಮಟ್ಟದ  ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಖಾದಿ ಉತ್ಸವ   2017

ಕಳೆದ ಏಪ್ರಿಲ್ 24 ರಿಂದ ಈ ತಿಂಗಳ 23 ರವರೆಗೆ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಂಡಿರುವ ಖಾದಿ ಉತ್ಸವ – 2017 ರಲ್ಲಿ ಇಂದಿನವರೆಗೆ ಒಟ್ಟು 19.62 ಕೋಟಿ ರೂ. ವಹಿವಾಟು ನಡೆದಿದ್ದು ಇನ್ನೂ ಆರು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಕೊನೆಯ ವಾರ ಹೆಚ್ಚಿನ ವಹಿವಾಟನ್ನು ನಿರೀಕ್ಷಿಸಲಾಗುತ್ತಿದೆ.

ಖಾದಿ ಉತ್ಪನ್ನಗಳ ಈ ವಸ್ತು ಪ್ರದರ್ಶನದಲ್ಲಿ ಕರ್ನಾಟಕ ರಾಜ್ಯದ 61 ಹಾಗೂ ಹೊರ ರಾಜ್ಯದ 35 ಖಾದಿ ಉತ್ಪನ್ನಗಳ ಮಳಿಗೆಗಳು ತೆರೆದಿದೆ.  ಗ್ರಾಮೋದ್ಯೋಗ ಉತ್ಪನ್ನಗಳ ಕರ್ನಾಟಕ ರಾಜ್ಯದ 49 ಹಾಗೂ ಹೊರ ರಾಜ್ಯದ 44 ಮಳಿಗೆಗಳು ತೆರೆದಿದ್ದು, ಆಹಾರ ಹಾಗೂ ಇನ್ನಿತರ ಮಳಿಗೆಗಳು ಸೇರಿದಂತೆ ಒಟ್ಟು 205 ಮಳಿಗೆಗಳು ಈ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದು ಯಾವುದೇ ಅನಾಹುತವಾದಲ್ಲಿ ಪರಿಹಾರವಾಗಿ 3 ಕೋಟಿ ರೂ. ಗಳ ವಿಮೆಯನ್ನು ಮಾಡಿಸಿರುವುದು ವಿಶೇಷ ಎಂದು ಮಂಡಳಿಯ ಅಧ್ಯಕ್ಷರು ತಿಳಿಸಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s