ಹುದಲಿಯ ಖಾದಿ ಯಶೋಗಾಥೆ

ಗುರುನಾಥ ಕಡಬೂರ
ಹಿರಿಯ ಸಹಾಯಕ ನಿರ್ದೇಶಕರು 
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಳಗಾವಿ

ಹುದಲಿ ಗಂಗಾಧರರಾವ್ ದೇಶಪಾಂಡೆ ಅಪ್ಪಟ ಗಾಂಧಿವಾದಿ ಹಾಗೂ ಖಾದಿಪ್ರೇಮಿಯಾಗಿದ್ದರು. ದೇಶಪಾಂಡೆ ಅವರ ಪರಿಶ್ರಮದ ಫಲವಾಗಿ 1923ರಲ್ಲಿ ಹುದಲಿಯಲ್ಲಿ ಖಾದಿ ಕೆಲಸ ಆರಂಭಗೊಂಡಿತು.

picಆ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿ (ಸಾಬರಮತಿ), ಸರ್ದಾರ ವಲ್ಲಭಭಾಯಿ ಪಟೇಲ್ (ಬಾರ್ಡೋಲಿ), ರಾಜಾಜಿ (ತ್ರಿಚುನಗೂಡ), ಆಚಾರ್ಯ ಕೃಪಾಲಿನಿ (ಸೇವಾಪುರಿ) ರಾಜೇಂದ್ರ ಪ್ರಸಾದ (ಸದಾಕತ) ಹಾಗೂ ಗಂಗಾಧರರಾವ್ ದೇಶಪಾಂಡೆ (ಹುದಲಿ) ಅವರ ನೇತೃತ್ವದಲ್ಲಿ ದೇಶದಾದ್ಯಂತ ಆರು ಆಶ್ರಮಗಳು ಆರಂಭಗೊಂಡವು.

1923ರಲ್ಲಿ ಕುಮರಿ ಆಶ್ರಮದಲ್ಲಿ ಖಾದಿ ಬೀಜಾಂಕುರಗೊಂಡರೂ 1925ರಿಂದ ಹುದಲಿ ಗ್ರಾಮದಲ್ಲಿ ಖಾದಿ ಉತ್ಪಾದನೆಗೆ ಚಾಲನೆ ದೊರಕಿತು. ರಾಮಚಂದ್ರ ವಡವಿ, ಪುಂಡಲೀಕಜಿ ಕಾತಗಡೆ, ತಿಮ್ಮಪ್ಪ ನಾಯಕ, ಅಣ್ಣಾ ಬಸಪ್ಪ, ವಾಮನರಾವ್ ಬಿದರಿ, ಅಣ್ಣು ಗುರೂಜಿ, ಗಂಗಪ್ಪಾ ಯಮಕನಮರ್ಡಿ ಸೇರಿದಂತೆ ಅನೇಕ ಗಾಂಧಿವಾದಿಗಳು ಖಾದಿ ಪ್ರಚುರಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

09430822-9df8-4a8b-bbbd-999e8d4b3243ಈ ಸಂದರ್ಭದಲ್ಲಿ ನಡೆದ ಕಾಯ್ದೆ ಭಂಗ ಚಳವಳಿ ಹಾಗೂ ಉಪ್ಪಿನ ಸತ್ಯಾಗ್ರಹದ ಪರಿಣಾಮ ಕುಮರಿ ಆಶ್ರಮದ ಮೇಲೆ ಬ್ರಿಟೀಷ್ ರ ಕಣ್ಣುಬಿತ್ತು. ಆಶ್ರಮ ಜಪ್ತು ಮಾಡಿದ ಬ್ರಿಟೀಷರು ಅನೇಕ ಮುಖಂಡರನ್ನು ಜೈಲಿಗೆ ಕಳುಹಿಸಿದರು.

ಈ ಘಟನೆಯ ಬಳಿಕ ಕುಮರಿ ಆಶ್ರಮದ ಖಾದಿ ಕೆಲಸವು 1934ರಿಂದ 1944 ರವರೆಗೆ ಚರಕಾ ಸಂಘದಿಂದ ಮುಂದುವರೆಸಲ್ಪಟ್ಟಿತು. ಪುಂಡಲೀಕಜಿ ಕಾತಗಡೆ ಅವರು 1944ರಲ್ಲಿ ಗ್ರಾಮ ಸೇವಾ ಸಮಿತಿ ಸ್ಥಾಪಿಸಿ ಅದರ ಮೂಲಕ ಖಾದಿ ಉತ್ಪಾದನೆಯನ್ನು ಆರಂಭಿಸಿದರು. ಹುದಲಿಯಲ್ಲಿ ಖಾದಿ ಕೆಲಸವು ಈಗಲೂ ಯಶಸ್ವಿಯಾಗಿ ನಡೆದಿದೆ.

ಸ್ವಾವಲಂಬನೆಯ ಪ್ರತೀಕವಾಗಿರುವ ಖಾದಿ ಉತ್ಪಾದನೆಯ ಉದ್ದೇಶದೊಂದಿಗೆ ಆರಂಭಗೊಂಡಿರುವ ಹುದಲಿಯ ಸಂಘವು ಗುಣಮಟ್ಟದ ಖಾದಿಯ ಜತೆಗೆ ರುಚಿಕರ ಉಪ್ಪಿನಕಾಯಿ, ಆರೋಗ್ಯ ಸ್ನೇಹಿ ಸಾಬೂನು, ಪರಿಸರ ಸ್ನೇಹಿ ಗೋಬರ್ ಗ್ಯಾಸ್ ಮತ್ತು ಅಗರಬತ್ತಿ ಉತ್ಪಾದನೆಯಲ್ಲೂ ಸೈ ಎನಿಸಿಕೊಂಡಿದೆ.

ಎಂಭತ್ತೈದು ವರ್ಷದ ಗಂಗಪ್ಪ ಮಾಳಗಿ ಅವರು ಗಾಂಧೀಜಿ ಹುದಲಿ ಗ್ರಾಮಕ್ಕೆ ಭೇಟಿ ನೀಡಿದಾಗಿನ ಸಂಭ್ರಮವನ್ನು ಈ ರೀತಿ ಮೆಲುಕು ಹಾಕುತ್ತಾರೆ.

‘ಸಮೀಪದ ಸುಣಧಾಳ ರೈಲು ನಿಲ್ದಾಣದಲ್ಲಿ ಬಂದಿಳಿದ ಗಾಂಧೀಜಿ ಹುದಲಿ ಗ್ರಾಮದ ಕಡೆ ಬಂಡಿಯಲ್ಲಿ ಬರುವಾಗ ಇಡೀ ಊರಿಗೆ ಊರೇ ಅವರ ಸ್ವಾಗತಕ್ಕೆ ಕಾದು ನಿಂತಿತ್ತು. ಗಾಂಧೀಜಿ ಹಾಗೂ ಅವರ ಜತೆಗೆ ಆಗಮಿಸಿದ್ದ ಸುಮಾರು ಎರಡು ನೂರು ಜನರ ವಸತಿಗಾಗಿ ತಾತ್ಕಾಲಿಕವಾಗಿ ಜೋಳದ ದಂಟು ಹಾಗೂ ಹುಲ್ಲಿನ ಮನೆಗಳನ್ನು ನಿರ್ಮಿಸಲಾಗಿತ್ತು. ನೂಲುವುದಕ್ಕೆ ಹಂಚಿ ನೀಡಲು ಹೋದಾಗ ಗಾಂಧೀಜಿ ಅವರು ನನ್ನ ಬೆನ್ನು ಚಪ್ಪರಿಸಿದ್ದು ಈಗಲೂ ನೆನಪಿದೆ’ ಎನ್ನುತ್ತಾರೆ ಗಂಗಪ್ಪ ಮಾಳಗಿ.

ಹುದಲಿ ಗ್ರಾಮದ ಪ್ರತಿ ಕುಟುಂಬದ ಹಿರಿಯರು ಗಾಂಧೀಜಿಯವರ ಜತೆ ಏಳೂ ದಿನಗಳನ್ನು ಕಳೆದಿರುವುದರಿಂದ ಹುದಲಿಯ ಮನೆ ಮನೆಗಳಲ್ಲಿ ಖಾದಿ ಬಗ್ಗೆ ಈಗಲೂ ಅಭಿಮಾನ ಹುದುಗಿದೆ.

ಪ್ರತಿ ದಿನ ಬೆಳಿಗ್ಗೆ ಹುದಲಿ ಖಾದಿ ಗ್ರಾಮೋದ್ಯೋಗಕ್ಕೆ ಬರುವ ಎಂಭತ್ತೈದು ವರ್ಷದ ಬಸಮ್ಮ ಶಂಕ್ರಪ್ಪ ಬನದವರ ಈಗಲೂ ಚರಕಾದಲ್ಲಿ ಖಾದಿ ನೂಲುವ ಮೂಲಕ ದಿನಕ್ಕೆ ಕನಿಷ್ಠ 160 ರೂಪಾಯಿ ಗಳಿಸುತ್ತಾರೆ ! ಇದು ಗಾಂಧಿಗ್ರಾಮ ಎಂದು ಕರೆಯಲ್ಪಡುವ ಹುದಲಿ ಜನರ ಖಾದಿ ಪ್ರೇಮಕ್ಕೆ ಸಾಕ್ಷಿ.

                                   

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s