ಕೆರೆ ಕಾಯಕಲ್ಪಕ್ಕೆ ಸಜ್ಜು

ಸತತ ಬರಗಾಲದ ಹಿನ್ನೆಲೆಯಲ್ಲಿ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದ ಐದು ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಅತಿ ಶೀಘ್ರದಲ್ಲಿ ಆದೇಶ ಹೊರಡಿಸಲಾಗುವುದು ಎಂದು ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಅವರು ತಿಳಿಸಿದ್ದಾರೆ.

100 ಕೋಟಿ ರೂ ಅನುದಾನ:
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆರೆಗಳ ಹೂಳೆತ್ತುವ ಯೋಜನೆಗೆ 100 ಕೋಟಿ ರೂ. ಹಣವನ್ನು ಮೀಸಲಿಟ್ಟಿದ್ದು, ಒಂದೆರಡು ದಿನಗಳಲ್ಲಿ ಹಣಕಾಸಿನ ಇಲಾಖೆಯ ಅನುಮತಿ ಪಡೆದು ಅಂತಿಮ ಆದೇಶ ಹೊರಡಿಸಲಾಗುವುದು. ಈಗಾಗಲೇ ಶಾಸಕರ ಅಧ್ಯಕ್ಷತೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಗಳ ಐದು ಕೆರೆಗಳ ಹೂಳೆತ್ತುವ ಪ್ರಸ್ತಾವನೆ ಸರ್ಕಾರಕ್ಕೆ ಬಂದಿದೆ.

ಮಳೆಗಾಲದ ಆರಂಭದ ಮುನ್ನವೇ ಕೆರೆಗಳ ಹೂಳೆತ್ತುವ ಪ್ರಸ್ತಾವನೆ ಸರ್ಕಾರಕ್ಕೆ ಬಂದಿದೆ. ಮಳೆಗಾಲದ ಆರಂಭದ ಮುನ್ನವೇ ಕೆರೆಗಳ ಹೂಳೇತ್ತುವುದರಿಂದ ಹೆಚ್ಚು ನೀರನ್ನು ಸಂಗ್ರಹ ಮಾಡಲು ಅನುಕೂಲವಾಗಲಿದೆ ಎಂದರು.

ವೆಂಟೆಡ್ ಡ್ಯಾಂ:
ಕರಾವಳಿ ಜಿಲ್ಲೆಗಳಾದ ಉಡುಪಿ, ಮಂಗಳೂರು ಹಾಗೂ ಉತ್ತರ ಕನ್ನಡದಲ್ಲಿ ಸಮುದ್ರಕ್ಕೆ ವ್ಯರ್ಥವಾಗಿ ಹೋಗುವ ನೀರನ್ನು ದಾಸ್ತಾನು ಮಾಡಲು 100 ಕೋಟಿ ರೂ ವೆಚ್ಚದಲ್ಲಿ ವೆಂಟೆಡ್ ಡ್ಯಾಂಗಳನ್ನು ನಿರ್ಮಿಸಲು ಚಾಲನೆ ನೀಡಲಾಗುವುದು ಎಂದು ತಿಳಿಸಿದ ಜಯಚಂದ್ರ ಅವರು ಮೇಲ್ಮೈ ನೀರನ್ನು ಹೆಚ್ಚು ಸಂಗ್ರಹ ಮಾಡಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.

ಶೀಘ್ರ ಅನುಷ್ಠಾನ:(ಸಾಂದರ್ಭಿಕ ಚಿತ್ರ)
ಬಡ್ತಿ ಮೀಸಲಾತಿ ವಿಷಯ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಜ್ಯ ಸರ್ಕಾರದ ಮೇಲ್ಮನವಿ ಜೊತೆಗೆ ಹಲವಾರು ಖಾಸಗಿ ಅರ್ಜಿಗಳು ನ್ಯಾಯಲಯದ ಮುಂದೆ ಸಲ್ಲಿಕೆಯಾಗಿದೆ. ನ್ಯಾಯಲಯ ಯಾವುದೇ ಸಂದರ್ಭದಲ್ಲಿ ತೀರ್ಪು ಪ್ರಕಟಿಸುವ ನಿರೀಕ್ಷೆ ಇದೆ. ಈಗಾಗಲೇ ಸುಪ್ರಿಂಕೋರ್ಟ್‍ನ ನಿರ್ದೇಶನದಲ್ಲಿ ಸರ್ಕಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ರಚಿತವಾಗಿರುವ ಸಮಿತಿ ವರದಿ ನೀಡಿದ್ದು, ಆಡಳಿತ, ಸಿಬ್ಬಂದಿ ಸುಧಾರಣಾ ಇಲಾಖೆ ಶೀಘ್ರದಲ್ಲಿ ಅನುಷ್ಠಾನಗೊಳಿಸುವ ಸಿದ್ದತೆಮಾಡಿ ಕೊಂಡಿದೆ ಎಂದು ಸಚಿವರು ತಿಳಿಸಿದರು.

ಆಸ್ತಿ ಮುಟ್ಟುಗೋಲು:

ಕಡು ಬಡವರನ್ನು ವಂಚಿಸಿರುವ ಅಗ್ರಿಗೋಲ್ಡ್ ಮತ್ತು ಮೈತ್ರಿ ಪ್ಲಾಂಟೇಷನ್ ಹಾರ್ಟಿಕಲ್ಚರ್ ಲಿಮಿಟೆಡ್ ಸಂಸ್ಥೆ, ತುಮಕೂರು, ರಾಯಚೂರು, ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಠೇವಣಿ ರೂಪದಲ್ಲಿ ಸಂಗ್ರಹಣೆ ಮಾಡಿ ಸಾರ್ವಜನಿಕರಿಗೆ ಮೋಸ ಮಾಡಿರುವ ಸಂಸ್ಥೆಯ ಆಸ್ತಿಗಳನ್ನು ಕಂದಾಯ ಇಲಾಖೆ ಮುಟ್ಟುಗೋಲು ಹಾಕಿಕೊಳ್ಳುವಂತೆ ಇಲಾಖೆ ಮುಖ್ಯಸ್ಥರಿಗೆ ಸೂಚಿಸುವುದಾಗಿ ತಿಳಿಸಿದ ಸಚಿವರು ತಮಿಳುನಾಡು, ತೆಲಂಗಾಣ, ಕೇರಳ ರಾಜ್ಯಗಳಲ್ಲೂ ವಂಚನೆ ಮಾಡಿರುವ ಸಂಸ್ಥೆಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಸರ್ಕಾರ ಆಯಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ ಎಂದು ಸಚಿವರು ತಿಳಿಸಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s