ಸ್ವಯಂ ಸೇವಕರ ಸಂಖ್ಯೆಯನ್ನು ಹತ್ತು ಲಕ್ಷಕ್ಕೆ ಹೆಚ್ಚಿಸುವ ಗುರಿ: ಸಚಿವ ಪ್ರಮೋದ್ ಮಧ್ವರಾಜ್

ಎನ್.ಎಸ್.ಎಸ್. ಸ್ವಯಂ ಸೇವಕರ ಸಂಖ್ಯೆಯನ್ನು ಮುಂದಿನ ವರ್ಷ ಹತ್ತು ಲಕ್ಷಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎನ್‍ಎಸ್‍ಎಸ್ ಪ್ರಶಸ್ತಿ ಪ್ರಕಟಿಸಿ ಮಾತನಾಡಿದ ಸಚಿವರು, ಕಳೆದ ಸಾಲಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಗಳಿಗೆ 5.60 ಕೋಟಿ ರೂ. ಅನುದಾನ ನೀಡಿದ್ದು, 2017-18 ನೇ ಸಾಲಿಗೆ 13.65 ಕೋಟಿ ಅನುದಾನವನ್ನು ನೀಡುವ ಮೂಲಕ ಸರ್ಕಾರವು ಅನುದಾನವನ್ನು ದ್ವಿಗುಣಗೊಳಿಸಿದೆ ಎಂದರು.

ಹೈಸ್ಕೂಲ್ ಗಳಲ್ಲಿ ಎನ್.ಎಸ್.ಎಸ್:

ಇತರೆ ರಾಜ್ಯಗಳಲ್ಲಿ ಕೇಂದ್ರ ಅನುದಾನದಲ್ಲಿ ಮಾತ್ರ ಈ ಯೋಜನೆ ನಡೆಯುತ್ತಿದ್ದರೆ, ನಮ್ಮ ರಾಜ್ಯದಲ್ಲಿ ವಿಶೇಷ ಚಟುವಟಿಕೆಗಳಿಗೆ ರಾಜ್ಯ ಸರ್ಕಾರ ಅನುದಾನ ನೀಡುತ್ತಿರುವುದರಿಂದ ಕರ್ನಾಟಕ ರಾಷ್ಟ್ರೀಯ ಸೇವಾ ಯೋಜನೆಗೆ ದೇಶದಲ್ಲೇ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ.

ಪಿ.ಯುಸಿ ಯಿಂದ ಸ್ನಾತಕೋತ್ತರ ಪದವಿವರೆಗೆ ಮಾತ್ರ ಇದ್ದ ಎನ್.ಎಸ್.ಎಸ್. ಕಾರ್ಯಕ್ರಮವನ್ನು ಈ ವರ್ಷದಿಂದ ಹೈಸ್ಕೂಲಿಗೂ ವಿಸ್ತರಿಸಲು ಯೋಜನೆಯನ್ನು ಹಾಕಿಕೊಳ್ಳಲಾಗಿದ್ದು, ಇದಕ್ಕಾಗಿ ಇಲಾಖೆಯ ಕ್ರಿಯಾ ಯೋಜನೆಯಲ್ಲಿ 1 ಕೋಟಿ ರೂ. ಮೀಸಲಿಡಲಾಗಿದೆ ಎಂದು ತಿಳಿಸಿದರು.

ಅತ್ಯುತ್ತಮ ಪ್ರಶಸ್ತಿ:

ಪ್ರತಿ ವರ್ಷ ಅತ್ಯುತ್ತಮ ವಿಶ್ವವಿದ್ಯಾಲಯ ಪ್ರಶಸ್ತಿ ಕರ್ನಾಟಕ್ಕೆ ಲಭಿಸುತ್ತಿದ್ದು, ಈ ವರ್ಷ ರಾಷ್ಟ್ರದ ಅತ್ಯುತ್ತಮ ಎನ್.ಎಸ್.ಎಸ್. ವಿಶ್ವವಿದ್ಯಾಲಯ ಪ್ರಶಸ್ತಿಯು ಬೆಂಗಳೂರು ಮತ್ತು ಮೈಸೂರು ವಿಶ್ವವಿದ್ಯಾಲಯಕ್ಕೆ  ಲಭಿಸಿರುವುದು ಹೆಮ್ಮೆಯ ವಿಷಯ.  12 ಕಾಲೇಜುಗಳು ಅತ್ಯುತ್ತಮ ಘಟಕ 12 ಯೋಜನಾಧಿಕಾರಿಗಳು ಅತ್ಯುತ್ತಮ ಯೋಜನಾಧಿಕಾರಿ ಪ್ರಶಸ್ತಿ ಪಡೆದಿದ್ದು, 12 ಸ್ವಯಂ ಸೇವಕರು ಉತ್ತಮ ಸ್ವಯಂ ಸೇವಕ/ ಸ್ವಯಂ ಸೇವಕಿಯರು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ನೀಡಿದರು.

ಪ್ರಶಸ್ತಿ ಪ್ರದಾನ:

ಪ್ರಶಸ್ತಿ ಪುರಸ್ಕೃತರಿಗೆ ಇಂದು ಸಂಜೆ 4-30 ಗಂಟೆಗೆ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಚಿವರು ತಿಳಿಸಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s