ಟೆಂಡರ್ ಶ್ಯೂರ್ ಯೋಜನೆಯ ಬಗ್ಗೆ ನಿಮಗೆಷ್ಟು ಗೊತ್ತು?

unnamedಯಾವುದೇ ಕಾರಣಕ್ಕೂ ಮತ್ತೆ ಮತ್ತೆ ಅಗೆಯಲು ಅವಕಾಶ ಇಲ್ಲದಂತೆ ರಸ್ತೆಗಳನ್ನು ವಿನ್ಯಾಸಗೊಳಿಸುವ ವ್ಯವಸ್ಥೆಯೇ ಟೆಂಡರ್‌ ಶ್ಯೂರ್‌. ಇದು ಭಾರತದ ಪ್ರಪ್ರಥಮ ಮಾರ್ಗಸೂಚಿ ಪ್ರಕಟನೆ ಇದಾಗಿದ್ದು ಅಂತರರಾಷ್ಟ್ರೀಯ ಗುಣಮಟ್ಟದ ವ್ಯವಸ್ಥೆ ಇದಾಗಿದೆ.

ಜಗತ್ತಿನ ಬಹುತೇಕ ಪ್ರಮುಖ ನಗರಗಳ ರಸ್ತೆಗಳು ಟೆಂಡರ್‌ ಶ್ಯೂರ್‌ ಸೌಲಭ್ಯವನ್ನು ಪಡೆದಿವೆ.

ಸೇವಾ ಸಂಸ್ಥೆಗಳು:

18425549_1578576262153058_1914431033351401649_nಬಿಬಿಎಂಪಿ, ಬಿಎಂಟಿಸಿ, ಬೆಸ್ಕಾಂ, ಜಲಮಂಡಳಿ ಮತ್ತು ಪೊಲೀಸ್‌ ಇಲಾಖೆ ಸೇರಿದಂತೆ ಎಲ್ಲ ಸೇವಾ ಸಂಸ್ಥೆಗಳನ್ನು ಒಳಗೊಂಡ ಏಕಗವಾಕ್ಷಿ ವ್ಯವಸ್ಥೆ ಟೆಂಡರ್‌ ಶ್ಯೂರ್‌ನಲ್ಲಿ ಇರುತ್ತದೆ. ಆಯಾ ಸೇವಾ ಸಂಸ್ಥೆಗಳು ತಮ್ಮ ಪಾಲಿನ ಹೊಣೆಯನ್ನು ಹೊರಬೇಕಾಗುತ್ತದೆ.

ಕುಡಿಯುವ ನೀರಿನ ಕೊಳವೆ, ಒಳಚರಂಡಿ ಮಾರ್ಗ, ಬೆಸ್ಕಾಂ ಸಂಪರ್ಕ ಜಾಲ, ಆಪ್ಟಿಕಲ್‌ ಫೈಬರ್‌ ಕೇಬಲ್‌ (ಒಎಫ್‌ಸಿ), ಬೀದಿದೀಪ, ಸಿಗ್ನಲ್‌ ದೀಪ, ಸಿಸಿ ಟಿ.ವಿ ಕೇಬಲ್‌, ಗ್ಯಾಸ್‌ ಸಂಪರ್ಕ ಜಾಲ ಎಲ್ಲದಕ್ಕೂ ರಸ್ತೆ ಬದಿಯಲ್ಲಿ ಯುಟಿಲಿಟಿ ಡಕ್ಟ್‌ (ಸೇವಾ ಸಂಪರ್ಕ ಜಾಲದ ನೆಲದಡಿ ಮಾರ್ಗ) ವ್ಯವಸ್ಥೆ ರೂಪಿಸಲಾಗುತ್ತದೆ.

ಸುರಕ್ಷಿತ ಸ್ಥಳವಕಾಶ:

18447482_1578603475483670_4988647485436310097_nಟೆಂಡರ್ ಶ್ಯೂರ್ ರಸ್ತೆಗಳು ಬಳಕೆದಾರನ ಸ್ವಾಭಾವಿಕ ಬದಲಾವಣೆಗೆ ಅನುಗುಣವಾಗಿ ಯಾವುದೇ ಸಮತಟ್ಟು ಅಥವಾ ದಿಣ್ಣೆ ಪ್ರದೇಶಗಳನ್ನು ಬೆಸೆದು ಸುಂದರವಾಗಿ ಕಾಣುವಂತೆ ಮಾಡಲಾಗುತ್ತದೆ. ನಗರದ ರಸ್ತೆಗಳ ಸಮಸ್ಯೆಗಳ ಗೋಳು ತಪ್ಪಿಸಲು ಬಂದ ಟೆಂಡರ್ ಶ್ಯೂರ್ ಯಾವುದೇ ಕಾರಣಕ್ಕೂ ರಸ್ತೆ ಹಾಳಾಗದಂತೆ ಕಾಪಾಡುತ್ತದೆ. ಪಾದಚಾರಿಗಳು ಮತ್ತು ಸೈಕಲ್ ಸವಾರರಿಗೂ ಸುರಕ್ಷಿತ ಸ್ಥಳವಕಾಶ ಮಾಡಿಕೊಟ್ಟಿದೆ.

ಪ್ರಮುಖ ರಸ್ತೆಗಳು:

ವಿಶ್ವದಲ್ಲಿಯೆ ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಈ ಯೋಜನೆಯನ್ನು ಮಾಡಲಾಗಿದ್ದು. ಈವರೆಗೆ ವಿವಿಧ ರಸ್ತೆಗಳ ಕಾಮಗಾರಿ ಅಭಿವೃದ್ದಿಗೆ 700 ಕೋಟಿ ವೆಚ್ಚ ನೀಡಲಾಗಿದೆ. ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಈ ವ್ಯವಸ್ಥೆಯನ್ನು ಅನುಷ್ಟಾನಕ್ಕೆ ತರಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಈ ಯೋಜನೆಯನ್ನು 2014 ರಲ್ಲಿ ಬೆಂಗಳೂರಿ 7 ರಸ್ತೆಗಳ ಕಾಮಗಾರಿಯಿಂದ ಆರಂಭಗೊಂಡು ಕಳೆದ ವರ್ಷ ಮೊದಲ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸಿದೆ.

ಇದೀಗ 2017ರಲ್ಲಿ ಮೊದಲ ಹಂತದ 4 ಹಾಗೂ 2ನೇ ಹಂತದ ಕಾಮಗಾರಿಯಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ, ಕಮಿಷನರೇಟ್ ರಸ್ತೆ, ಮ್ಯೂಸಿಯಂ ರಸ್ತೆ, ಮತ್ತು ನೃಪತುಂಗಾ ರಸ್ತೆಗಳು ಪೂರ್ಣಗೊಂಡು ಉದ್ಘಾಟನೆಗೊಂಡಿದೆ.

18447024_1578576398819711_588351646260772144_nನಿಗದಿಗಿಂತ ಹೆಚ್ಚು ವೆಚ್ಚ:

ಬಿಬಿಎಂಪಿ ಯೋಜನೆಯಂತೆ ಮೊದಲನೇ ಹಂತದ 7 ರಸ್ತೆಗಳ ಅಭಿವೃದ್ಧಿಗಾಗಿ 115.33 ಕೋಟಿ ರೂ. ನಿಗದಿ ಮಾಡಲಾಗಿತ್ತು. ನಂತರ ಕಾಮಗಾರಿ ವೆಚ್ಚ ಹೆಚ್ಚಳವಾಗುತ್ತಿದೆ ಎಂಬ ಕಾರಣ ನೀಡಿ ಅದನ್ನು 130 ಕೋಟಿ ರೂ.ಗೆ ಹೆಚ್ಚಿಸಲಾಯಿತು;.

ಟೆಂಡರ್ ಶ್ಯೂರ್ ವೆಚ್ಚ:

ಈವರೆಗೆ 13 ರಸ್ತೆಗಳಿಗೆ 200ಕೋಟಿ ವೆಚ್ಚ ಮಾಡಲಾಗಿದೆ. ಸದ್ಯ ಲೋಕಾರ್ಪಣೆಗೊಂಡ ರಸ್ತೆಗಳು 1ಕೋಟಿ 25 ಲಕ್ಷ ವೆಚ್ಚದಾಗಿದೆ. ಮುಂದೆ 25 ರಸ್ತೆಗಳನ್ನು 700 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಸಾಧ್ಯತೆಗಳಿವೆ.

 

 

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s