ಕರಕುಶಲ ಕಲೆಗೆ ಬೆನ್ನೆಲುಬಾಗಿದೆ ಕರಕುಶಲ ನಿಗಮ

4c2290ef-a87d-4e14-a7d7-01cafdadad4eಕರಕುಶಲ ಕಲೆಯನ್ನು ಉಳಿಸಿ ಪ್ರೋತ್ಸಾಹಿಸುವ, ಕರಕುಶಲ ಕರ್ಮಿಗಳಿಗೆ ಸೂಕ್ತ ಮಾರುಕಟ್ಟೆಯ ವ್ಯವಸ್ಥೆ ಒದಗಿಸಲು. ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಸಾಕಷ್ಟು ಯೋಜನೆಗಳನ್ನು ರೂಪಿಸಿ ಕೊಂಡು ಬಂದಿದೆ.

ಕುಶಲಕರ್ಮಿ ಕಲೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕರ ಕುಶಲ ಅಭಿವೃದ್ದಿ ನಿಗಮ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯಾಧ್ಯಂತ 13 ಕರಕುಶಲ ಕೇಂದ್ರಗಳು ಕುಶಲ ಕರ್ಮಿಗಳ ಚಟುವಟಿಕೆ, ವಹಿವಾಟಿಗೆ ಅವಕಾಶ ಒದಗಿಸಿವೆ.

ಸುವರ್ಣ ಮಹೋತ್ಸವ ಭವನ:

unnamed (1)ಕರ್ನಾಟಕ ಕೈಗಾರಿಕೆಯಲ್ಲಿ ಮುಂದಿದೆ. 1913 ರಲ್ಲಿ ನಾಲ್ವಡಿ ಕೃಷ್ಣರಾಜ್ ಒಡೆಯರ್ ಆರ್ಟ್ ಮತ್ತು ಕ್ರಾಫ್ಟ್ ಸಂಸ್ಥೆಯನ್ನು ಆರಂಭಿಸಿದ್ದು 1964ರಲ್ಲಿ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮವಾಗಿ ಬದಲಾಯಿತು.  ಇದೀಗ ನಿಗವು 52 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸುಮಾರು 6 ಕೋಟಿ ವೆಚ್ಚದಲ್ಲಿ ಸುವರ್ಣ ಮಹೋತ್ಸವ ಭವನ ನಿರ್ಮಿಸಲಾಗಿದೆ. ಈ ಭವನದಿಂದ ಕರಕುಶಲ ಕರ್ಮಿಗಳಿಗೆ ಉಪಯೋಗವಾಗಲಿದೆ.

ನಿಗಮದಲ್ಲಿ ಈಗಾಗಲೇ 4544 ಕುಶಲಕರ್ಮಿಗಳು ನೊಂದಣಿ ಮಾಡಿಸಿದ್ದಾರೆ, ಮತ್ತು 50ಸಾವಿರಕ್ಕೂ ಹೆಚ್ಚು ಕುಶಲಕರ್ಮಿಗಳು ಪರೋಕ್ಷವಾಗಿ ನಿಗಮದ ಪ್ರಯೋಜನ ಪಡೆಯುತ್ತಿದ್ದಾರೆ. ರಾಜ್ಯದ 1222 ಕುಶಲ ಕರ್ಮಿಗಳಿಗೆ ವಾಸದ ಮನೆ ಮತ್ತು ಕಾರ್ಯಾಗಾರ ಕೇಂದ್ರಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ಒದಗಿಸಲಾಗಿದೆ.

7f89ae20-b944-4962-852b-f304e7f86cecಈಗಾಗಲೇ ಕರಕುಶಲ ಕರ್ಮಿಗಳಿಗೆ, ಕೈ ಮಗ್ಗ ನೇಕಾರರಿಗೆ, ಗುಡಿ ಕಸುಬುದಾರರ ಉತ್ಪನ್ನಗಳಿಗೆ ನಿರಂತರ ಮಾರುಕಟ್ಟೆ ಕಲ್ಪಿಸುವ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರೇರೇಪಣೆ ಒದಗಿಸುವ ಉದ್ದೇಶದಿಂದಲೇ ಸರ್ಕಾರ ಹರ್ಬನ್ ಹತ್ ಯೋಜನೆಯನ್ನು ಹಲವು ರಾಜ್ಯಗಳಲ್ಲಿ ಜಾರಿಗೆ ತಂದಿದೆ.

ಕರಕುಶಲ ವಸ್ತುಗಳು:

ಬೆತ್ತದ ಪೀಟೋಪಕರಣಗಳು, ಬಿದಿರಿನಿಂದ ತಯಾರಿಸಿದ ಬುಟ್ಟಿಗಳು, ವಿವಿಧ ವಿನ್ಯಾಸದ ಬೆಡ್ ಕವರ್ ಗಳು, ಎಂಬ್ರಾಡರಿ ವಸ್ತುಗಳು, ವಿವಿಧ ವಿನ್ಯಾಸಗಳ ಮರದ ಕೆತ್ತನೆಗಳು, ಜ್ಯವೆಲ್ಲರಿಗಳು, ಮಣ್ಣಿನಿಂದ ತಯಾರಿಸಿದ ಕಲಾಕೃತಿಗಳು, ಕಸೂಥಿ ಉಡುಪಗಳು, ಲೋಹದ ಕಲಾಕೃತಿಗಳು ಸೇರಿದಂತೆ ಎಲ್ಲವೂ ಕರಕುಶಲ ವಸ್ತುಗಳಾಗಿವೆ.

ಕಾರ್ಯಗಾರ:

a0aba79f-6d8b-42df-9688-224d9cb3d017ಕುಶಲ ಕೈಗಾರಿಕೆಗೆ ಬೇಕಾಗುವ ಕಚ್ಚಾಪದಾರ್ಥಗಳಾದ ಗಂಧದ ಮರ, ಸಿಲ್ವರ್ ಮತ್ತು ಜಿಂಕ್ ಗಳನ್ನು ರಿಯಾಯ್ತಿ ದರದಲ್ಲಿ ಒದಗಿಸುವುದು, ವೃತ್ತಿ ತರಬೇತಿ ನೀಡುವುದು, ಉನ್ನತ ತಂತ್ರಜ್ಞಾನದ ಕೌಶಲ್ಯಗಳ ಬಳಕೆ ಕುರಿತು ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ. ಸಾಂಪ್ರದಾಯಿಕ ಕುಶಲ ಕಲೆಗಳನ್ನು ಉಳಿಸಿ ಕೊಳ್ಳುವ ನಿಟ್ಟಿನಲ್ಲಿಯೂ ತರಬೇತಿ ಶಿಕ್ಷಣವನ್ನು ನೀಡುವ ಮೂಲಕ ಆಸಕ್ತರನ್ನು ಉತ್ತೇಜಿಸಲಾಗುತ್ತಿದೆ.

ಸರ್ಟಿಫಿಕೇಟ್ ಕೋರ್ಸ್:

ನಿಗಮವು ಗುರುಕುಲ ಎಂಬ ಎರಡು ವರ್ಷಗಳ ಸರ್ಟಿಫಿಕೆಟ್ ಕೋರ್ಸನ್ನು ಅನುಷ್ಠಾನಕ್ಕೆ ತಂದಿದ್ದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಶಾಲೆಯನ್ನು ತೆರೆಯಲಾಗಿದೆ. ನಿಗಮದ ಉತ್ಪನ್ನಗಳ ವಹಿವಾಟು ನಡೆಸಲು ಕಾವೇರಿ, ಕರ್ನಾಟಕ ಸ್ಟೇಟ್ ಆರ್ಟ್ಸ್ ಮತ್ತು ಕ್ರಾಪ್ಟ್ಸ್ ಎಂಪೋರಿಯಂ ಕೇಂದ್ರಗಳನ್ನು ಪ್ರಮುಖ ನಗರಗಳಲ್ಲಿ ತೆರೆದಿದೆ. ರಾಜ್ಯದಲ್ಲಿ ಅಲ್ಲದೇ ದೆಹಲಿ, ಸಿಕಂದರಾಬಾದ್, ಚೆನ್ನೈಗಳಲ್ಲಿಯೂ ನಿಗಮದ ವಾಣಿಜ್ಯ ವಹಿವಾಟು ಕೇಂದ್ರಗಳು ಇವೆ.

ಆನ್ ಲೈನ್ ಮಾರುಕಟ್ಟೆ:

9d971628-e061-4ae4-b4bc-ed06a2b74239ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ನಿಗಮದ ವತಿಯಿಂದ ಒಳನಾಡು ಸಾರಿಗೆ ರಸ್ತೆಯನ್ನು ನಿರ್ಮಿಸಲಾಗಿದೆ. ನಿಗಮದ ಉತ್ಪನ್ನಗಳಿಗೆ ಭಾರೀ ಬೇಡಿಕೆ ಇದ್ದು ದೇಶ-ವಿದೇಶಗಳಲ್ಲಿಯೂ ಮನ್ನಣೆಗಳಿಸಿವೆ. ನಿಗಮವು ವಾಣಿಜ್ಯ ವಹಿವಾಟು ವಿಸ್ತರಿಸುವ ನಿಟ್ಟಿನಲ್ಲಿ ಆನ್ ಲೈನ್ ಮಾರುಕಟ್ಟೆಯನ್ನು ಸಹಾ ಸೃಜಿಸಿದ್ದು ಅಲ್ಲಿಯೂ ತನ್ನ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಅವಕಾಶ ಮಾಡಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s