ಏನಿದು ‘ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ’ ಕಾರ್ಯಕ್ರಮ

088d82bb-bf6c-4c75-b665-7b298dd4aceaಉದ್ಯೋಗವಕಾಶಗಳನ್ನು ಹೆಚ್ಚಿಸಲು ಮತ್ತು ಎಲ್ಲಾ ಕೌಶಲ್ಯಾಭಿವೃದ್ದಿ ಕಾರ್ಯಕ್ರಮಗಳನ್ನು ಒಂದೇ ಛಾವಣಿಯಲ್ಲಿ ತರುವ ಉದ್ದೇಶದಿಂದ ಕೌಶಲ್ಯಾಭಿವೃದ್ದಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆಯನ್ನು ರಚಿಸಲಾಗಿದೆ. ಕರ್ನಾಟಕವನ್ನು ಮಹತ್ವಾಕಾಂಕ್ಷಿಯಾಗಿ ರೂಪಿಸಲು ‘ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ’ ಕಾರ್ಯಕ್ರಮವನ್ನು ಜಾರಿಗೊಳಿಸಿದೆ.

ಈ ಕಾರ್ಯಕ್ರಮದಡಿಯಲ್ಲಿ ಶಾಲೆಯಿಂದ ಹೊರಗುಳಿದ ಮತ್ತು ಕೌಶಲ್ಯ ವಂಚಿತರಾದ ಯುವಕ ವತಿಯರಿಗೆ ಕೌಶಲ್ಯಗಳ ಕೊರತೆಯಿಂದಾಗಿ ಲಾಭದಾಯಕ ಉದ್ಯೋಗವನ್ನು ಪಡೆಯುವುದು ಕಷ್ಟವಾಗಿದೆ. ಆದ್ದರಿಂದಲೇ ರಾಜ್ಯ ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ 2016ರಿಂದಲೇ ಈ ಯೋಜನೆಯನ್ನು ರೂಪಿಸಿದ್ದು ಯುವಜನರ ಸ್ವಂತ ಸ್ವಾವಲಂಬಿ ಬದುಕಿಗೆ, ಮಹತ್ವಕಾಂಕ್ಷಿ ಸಾಧನೆಗೆ ಆಸರೆಯಾಗಿದೆ.

ಯುವಜನರ ಸಮಸ್ಯೆಗಳನ್ನು ಪರಿಹರಿಸಲು ಏಕೀಕೃತ ನಿಯಂತ್ರಣ, ಗುಣಮಟ್ಟ ಪ್ರಮಾಣೀಕರಣ ಪ್ರೋತ್ಸಾಹ, ಯೋಜನೆ ತಯಾರಿಕೆ ಅನುಷ್ಠಾನ ಉಸ್ತುವಾರಿ ಮೌಲ್ಯಮಾಪನ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯನ್ನು ಸೃಷ್ಟಿಸಲಾಗಿದೆ.

ಕುಶಲತೆಯ ಬೆಂಬಲ ಯುವ ಕೈಗಳಿಗೆ ಬಲ:

ವಿವಿಧ ಯೋಜನೆಗಳನ್ನು ಯುವಜನರಿಗೆ ಒದಗಿಸಲು ಎಲ್ಲಾ ಇಲಾಖೆಗಳನ್ನು ಒಟ್ಟುಗೂಡಿಸಿ “ಕುಶಲತೆಯ ಬೆಂಬಲ ಯುವ ಕೈಗಳಿಗೆ ಬಲ” ಎನ್ನುವ ಘೋಷಣೆಯೊಂದಿಗೆ “ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯನ್ನು ರೂಪಿಸಲಾಗಿದೆ. ಮಾರುಕಟ್ಟೆ ಆಧಾರಿತ ಪಠ್ಯಕ್ರಮ, ಮೌಲ್ಯಮಾಪನ ಮತ್ತು ಪಠ್ಯಕ್ರಮ ಇವು ಈ ಯೋಜನೆಯಡಿ ಕೈಗೊಂಡಿರುವ ವೃತ್ತಿ ತರಬೇತಿಗಳು.

5 ಲಕ್ಷ ಯುವಜನತೆಗೆ ತರಬೇತಿ ನೀಡುವುದು ಕೌಶಲ್ಯ ಕರ್ನಾಟಕದ ಮುಖ್ಯ ಗುರಿಯಾಗಿದೆ. ಮತ್ತು ಎಲ್ಲಾ ಆಕಾಂಕ್ಷಿಗಳಿಗೆ ಉಚಿತ ನೊಂದಣಿ ಮತ್ತು ಉಚಿತ ತರಬೇತಿ ನೀಡಲಾಗುವುದು.
ನೋಂದಣಿ ಮಾಡಿಕೊಳ್ಳಲು ಕೌಶಲಕಾರ್ ಆಪ್ ಅನ್ನು ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s