ಸಚಿವ ಸಂಪುಟ ಉಪ ಸಮಿತಿಯಿಂದ ಗದಗ, ಹಾವೇರಿ ಜಿಲ್ಲೆಯಲ್ಲಿ ಬರಸ್ಥಿತಿ ಪರಿಶೀಲನೆ

ಸಚಿವರಾದ ಆರ್ ವಿ. ದೇಶ್ ಪಾಂಡೆ ನೇತೃತ್ವದ ಸಚಿವ ಸಂಪುಟ  ಉಪ ಸಮಿತಿ ತಂಡವು ಹಾವೇರಿ ಮತ್ತು ಗದಗ  ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬರ ನಿರ್ವಹಣೆಯ ಕುರಿತು ಪರಿಶೀಲನೆ ನಡೆಸಿತು.

ಹಾವೇರಿ ಜಿಲ್ಲೆಯಲ್ಲಿ ಇಂದು ಸಂದರ್ಶನ ನಡೆಸಿದ ತಂಡ ಹಾವೇರಿ ಜಿಲ್ಲೆಯ ಆಯ್ದ ಸ್ಥಳಗಳಿಗೆ ಭೇಟಿ ನೀಡಿದರು. ನಂತರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬರ ನಿರ್ವಹಣೆ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು. ಮದ್ಯಾಹ್ನದ ನಂತರ ಗದಗ ಜಿಲ್ಲೆಗೆ ಪ್ರಯಾಣ ಬೆಳೆಸಿದ ತಂಡ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಗುಲಗಂಜಿ ಕೊಪ್ಪ ಗ್ರಾಮದಲ್ಲಿ ಮಹತ್ಮಾಗಾಂಧಿ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿಯನ್ನು  ವೀಕ್ಷಿಸಿತು.

100 ಜನರಿಗೆ ಉದ್ಯೋಗ:

ಗುಲಗಂಜಿಕೊಪ್ಪದ 20 ಎಕರೆ ವಿಸ್ತೀಣ೯ದ ಕೆರೆಯನ್ನು 4ಲಕ್ಷ ರೂ. ವೆಚ್ಚದಲ್ಲಿ 1600 ಮಾನವ ದಿನಗಳ ಉದ್ಯೋಗ ಒದಗಿಸುವ ಮೂಲಕ ಕೆರೆ ಹೂಳೆತ್ತುವ ಕಾಯ೯ ಕಳೆದ 3 ವಾರಗಳಿಂದ ನಡೆದಿದ್ದು ನೂರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸಲಾಗಿದೆ.

ಉದ್ಯೋಗ ನಿರತರೊಂದಿಗೆ ಮಾತನಾಡಿದ ಸಚಿವ ದೇಶಪಾಂಡೆ ಅವರು ಕೂಲಿ ಪಾವತಿ, ಇತರ ಸೌಲಭ್ಯಗಳ ಕುರಿತು ಮಾತನಾಡಿ ಮಾಹಿತಿ ಪಡೆದರು.

ಸೌಲಭ್ಯಗಳ ಪರಿಶೀಲನೆ:

ಶೆಟ್ಟಿಕೇರಿಯಲ್ಲಿ ಗೋಶಾಲೆಗೆ ಭೇಟಿ ನೀಡಿ ಜಾನುವಾರಗಳಿಗೆ ಮೇವು, ನೀರು ಹಾಗೂ ಇತರೆ ಸೌಲಭ್ಯಗಳನ್ನು ಪರಿಶೀಲಿಸಿತು. ಪ್ರಸಿದ್ದ ಮಾಗಡಿ ಕೆರೆಯಲ್ಲಿ ಉದ್ಯೋಗ ಖಾತ್ರಿ ಮತ್ತು ಅರಣ್ಯ ಇಲಾಖೆ ಅನುದಾನದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಮತ್ತು ಮೇವು ಬ್ಯಾಂಕನ್ನು ಪರಿಶೀಲಿಸಿದರು. ತದನಂತರ ಗದಗ ಜಿ.ಪಂ.ಸಭಾಂಗಣದಲ್ಲಿ  ಗದಗ ಜಿಲ್ಲೆಯ ಬರ ನಿವ೯ಹಣೆ ಮತ್ತು ಪರಿಹಾರ ಕಾಮಗಾರಿಗಳ ಪ್ರಗತಿ ಕುರಿತು ಸಭೆ ಜರುಗಿತು

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s