ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಳ್ಳುವ ರೈತರಿಗೆ ಪ್ರೋತ್ಸಾಹಧನ-ಕೃಷಿ ಸಚಿವ ಕೃಷ್ಣಬೈರೇಗೌಡ

ಸುಧಾರಿತ ತಂತ್ರಜ್ಞಾನವನ್ನು ಕೃಷಿ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಇಳವರಿ ಮತ್ತು ಆರ್ಥಿಕ ಲಾಭವನ್ನು ರೈತರು ಪಡೆಯಬಹುದಾಗಿದ್ದು, ಅಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು  ಕೃಷಿಯಲ್ಲಿ  ತೊಡಗುವ ರೈತರಿಗೆ ಎಕರೆಗೆ ಇಂತಿಷ್ಟು ಎಂದು ಪ್ರೋತ್ಸಾಹಧನವನ್ನು ನೀಡುವ  ನೂತನ ಪ್ರಯೋಗಕ್ಕೆ ಕೃಷಿ ಇಲಾಖೆ ಮುಂದಾಗಲಿದೆ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ಅವರು  ತಿಳಿಸಿದರು.

ವಿಕಾಸಸೌಧದ ಸಭಾಂಗಣದಲ್ಲಿ ಇಂದು ಕೃಷಿ ಇಲಾಖೆ ಆಧಿಕಾರಿಗಳಿಗೆ ಏರ್ಪಡಿಸಲಾಗಿದ್ದ “2017-18ನೇ ಸಾಲಿನ ಮುಂಗಾರು ಹಂಗಾಮಿನ ಕಾರ್ಯಾಗಾರ’’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.  ಈ ಹೊಸ ಕಾರ್ಯಕ್ರಮ ಪ್ರಸಕ್ತ ಸಾಲಿನಿಂದಲೇ ಜಾರಿಯಾಗಲಿದ್ದು,ಇದಕ್ಕಾಗಿ ಆಯವ್ಯಯದಲ್ಲಿ ಒಂದು ಕೋಟಿ ರೂ ಅನುದಾನವನ್ನು  ಮೀಸಲಿರಿಸಲಾಗಿದೆ ಈ ನಿಟ್ಟಿನಲ್ಲಿ ವಿಜ್ಞಾನಿಗಳೊಂದಿಗೆ  ಹಲವು ಸುತ್ತಿನ ಮಾತುಕತೆ ಸಹ ನಡೆಸಲಾಗಿದೆ ಎಂದರು.

ನೀರಿನ ಜಾಗೃತಿ:

ಹವಾಮಾನ ಅನಿಶ್ಚಿತತೆಯಿಂದ ಕೂಡಿರುವ ಇಂದಿನ ದಿನಗಳಲ್ಲಿ ಕೃಷಿಗೆ ಮುಖ್ಯ ಸಂಪನ್ಮೂಲ ಎಂದರೆ ನೀರು, ನೀರಾವರಿ ಇರುವಂತಹ ಪ್ರದೇಶಗಳಲ್ಲಿ ಇಂದಿಗೂ ಸಹ ನೀರಿನ ದುರುಪಯೋಗ ಸತತವಾಗಿ ಆಗುತ್ತಿದೆ ಎಂದ ಸಚಿವರು, ನಮ್ಮ ದೇಶದ ಕೃಷಿ ಭವಿಷ್ಯ ನೀರಿನ ಸದ್ಬಳಕೆ ಮೇಲೆ ನಿಂತಿದ್ದು, ರೈತರಲ್ಲಿ ಹನಿಹನಿ ನೀರಿನ ಸದ್ಬಳಕೆಯ ಜಾಗೃತಿ ಅತ್ಯವಶ್ಯಕವಾಗಿದ್ದು ,ಕೃಷಿ ಇಲಾಖೆ ಅಧಿಕಾರಿಗಳು ಇಲಾಖೆಯ ಎಲ್ಲ ಕಾರ್ಯಕ್ರಮಗಳಲ್ಲಿ ಜನರಿಗೆ ನೀರಿನ ಜಾಗೃತಿ ಮೂಡಿಸುವ ಕಾರ್ಯಕ್ರಮ ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದರು.

ವಾಟ್ಸಾಪ್ ಮಾಹಿತಿ:

ಸುಧಾರಿತ ತಂತ್ರಜ್ಞಾನ ಬಳಕೆ, ಹವಾಮಾನ ಮಾಹಿತಿ, ಇಲಾಖೆಯ ಕಾರ್ಯಕ್ರಮಗಳ ಕುರಿತು ರಾಜ್ಯದ ರೈತರಿಗೆ ಕಾಲಕಾಲಕ್ಕೆ  ಮಾಹಿತಿ ಒದಗಿಸುವುದು ಕೃಷಿ ಇಲಾಖೆ ಅಧಿಕಾರಿಗಳ  ಆದ್ಯತೆಯ ಕೆಲಸ. ಆದರೆ ಕ್ಷೇತ್ರ ಭೇಟಿ ಕಾರ್ಯಕ್ರಮಗಳಲ್ಲಿ ದಿನವೊಂದಕ್ಕೆ ಕನಿಷ್ಠ 10 ರೈತರನ್ನು ಭೇಟಿ ಮಾಡಲು ಮಾತ್ರ ಸಾಧ್ಯ. ಇದರೊಂದಿಗೆ ಕೃಷಿ ಇಲಾಖೆ ಅಧಿಕಾರಿಗಳು ವಾಟ್ಸ್‍ಆಪ್, ಎಸ್‍ಎಂಎಸ್ ಮುಂತಾದ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ರೈತರನ್ನು ತಲುಪಬೇಕು. ಈಗಾಗಲೇ ಇಲಾಖೆಯಲ್ಲಿ ಸಮಾರು  4 ಲಕ್ಷ ರೈತರ ವಾಟ್ಸ್‍ಅಪ್ ನಂಬರ್ ಸೇರಿದಂತೆ ಒಟ್ಟು 27 ಲಕ್ಷ ರೈತರ ಮೊಬೈಲ್ ಅಂಕಿಗಳಿದ್ದು, ವಾಟ್ಸಾಪ್  ಮೂಲಕ ರಾಜ್ಯದ ರೈತರಿಗೆ ಕಾಲಕಾಲಕ್ಕೆ  ಕೃಷಿ ಇಲಾಖೆ ಕಾರ್ಯಕ್ರಮಗಳ ಕುರಿತ  ಭಿತ್ತಿಪತ್ರ, ವಿಡಿಯೋ ತುಣುಕುಗಳನ್ನು   ನೀಡಬೇಕಿದೆ ಮತ್ತು ಎಸ್‍ಎಂಎಸ್ ಮೂಲಕ ರೈತರಿಗೆ ಅರ್ಥವಾಗುವ ರೀತಿಯಲ್ಲಿ ಕೃಷಿ ಕಾರ್ಯಕ್ರಮಗಳ ಮೆಸೇಜ್ ಕಳುಹಿಸುವ ಕೆಲಸ ಆಗಬೇಕು ಎಂದರು.

ಶೇ. 15-20ಕ್ಕೆ:

’ ನೀರಿನ ಸದ್ಬಳಕೆ ಮತ್ತು ಸಿರಿಧಾನ್ಯಗಳ ಉತ್ತಮ   ಇಳುವರಿ” ಈ ವರ್ಷದ ಕೃಷಿ ಇಲಾಖೆಯ ಘೋಷಣೆಯಾಗಿದೆ ಎಂದು ತಿಳಿಸಿದ ಸಚಿವರು,  ಸಿರಿಧಾನ್ಯಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿರುವ ಕಾರಣ  ನವಣೆ, ಬರಗು,ಅರ್ಕ ಮುಂತಾದ ಕಿರು ಧಾನ್ಯಗಳ ಉತ್ಪಾದನೆಗೆ  ಈ ವರ್ಷ  40 ಸಾವಿರ ಹೆಕ್ಟೇರ್ ಗುರಿ ನಿಗದಿಪಡಿಸಲಾಗಿದ್ದು, ಅಂತೆಯೇ ರಾಗಿ, ಜೋಳ, ಸಜ್ಜೆ ಬೆಳೆಯುವ ಪ್ರದೇಶದ ವಿಸ್ತರಣೆಯನ್ನು ಶೇ. 15-20ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.

ಕೃಷಿ ಅಭಿಯಾನ, ಕೃಷಿ ಭಾಗ್ಯ, ಕೃಷಿ ಯಂತ್ರಧಾರೆ ಮುಂತಾದ  ಜನಪ್ರಿಯ ಯೋಜನೆಗಳ ಮೂಲಕ ಕೃಷಿ ಇಲಾಖೆ ಮತ್ತು ರೈತರ ನಡುವಿನ ಅಂತರ ಕಡಿಮೆಯಾಗಿದ್ದು, ರೈತರು ಕೃಷಿ ಇಲಾಖೆಯ ಮೇಲೆ ಅಪಾರ ನಂಬಿಕೆ ಹೊಂದುವಂತಾಗಿದ್ದು, ಇದಕ್ಕೆಲ್ಲ ಕೃಷಿ ಇಲಾಖೆಯ ಅಧಿಕಾರಿಗಳ ಅವಿರತ ಶ್ರಮವೇ ಕಾರಣ ಎಂದು ಸಚಿವರು ಶ್ಲಾಘಿಸಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s