‘ವರುಣ’ ಪ್ರವೇಶ..

 

ಮಾಧ್ಯಮದವರ ಜೊತೆ ಮುಖ್ಯಮಂತ್ರಿ ಸಂವಾದಕ್ಕೆ ನೂತನ ವೇದಿಕೆ ಕೃಷ್ಣಾದಲ್ಲಿ ವರುಣ !

ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾ ಪ್ರಾಂಗಣಕ್ಕೆ ಈಗ ಹೊಸ ಸೇರ್ಪಡೆ.

ಇಲ್ಲಿ ಈಗ ‘ವರುಣ’ ನ ಆಗಮನ

ಮುಖ್ಯಮಂತ್ರಿಯವರ ಸಂದೇಶಗಳ ಧ್ವನಿಮುದ್ರಣಕ್ಕೆ, ಮಾಧ್ಯಮದವರೊಂದಿಗೆ ಸಂವಾದ ಹಾಗೂ ಸಂದರ್ಶನಗಳಿಗೆ ಅನುವಾಗುವಂತೆ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸೌಲಭ್ಯಗಳನ್ನು ಒಳಗೊಂಡಿರುವ ‘ವರುಣ’ ಸ್ಟುಡಿಯೋವನ್ನು ಸಜ್ಜುಗೊಳಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸ್ಟುಡಿಯೋಗೆ ಚಾಲನೆ ನೀಡಿದರು. ಸ್ಟುಡಿಯೋದ ಮುಂಭಾಗದಲ್ಲಿ ಸಸಿ ನೆಟ್ಟಿದು ಮತ್ತೊಂದು ವಿಶೇಷ.

 

ಬೆಳಕಿನ ಸೌಲಭ್ಯ (LIGHTING FACILITY),
ಧ್ವನಿಜ್ಞಾನ (ACOUSTICS)
ಧ್ವನಿಗ್ರಹಣ (RECORDING) ವ್ಯವಸ್ಥೆ,
ಅವಶ್ಯಕತೆಗೆ ಅನುಗುಣವಾಗಿ ಬದಲಾಯಿಸಬಹುದಾದ ಪರದೆ (BACKDROP, CHANGEABLE ACCORDING TO REQUIREMENT)
ಮೂಡುವ ಅಕ್ಷರಗಳ ನೋಡುವ ತೆರೆ (TELEPROMPTER)
ಗಣಕಗಳು (COMPUTERS)
ಸುಖಾಸೀನ ಆಸನಗಳು,
ತಂಪೆರೆವ ಹವಾನಿಯಂತ್ರಿತ ವ್ಯವಸ್ಥೆ
-ಈ ‘ವರುಣ’ ಸ್ಟುಡಿಯೋದ ಆಕರ್ಷಣೆಗಳಾಗಿವೆ.

ಮಳೆಯ ದೇವರ ಹೆಸರಿನಲ್ಲಿ ನಿರ್ಮಿಸಿರುವ ಈ ಸ್ಟೂಡಿಯೋದಲ್ಲಿ ಮುಖ್ಯಮಂತ್ರಿಯವರೊಂದಿಗೆ ಸಂದರ್ಶನ ನಡೆಸುವಾಗ ಮಾಧ್ಯಮದವರು ಪ್ರಶ್ನೆಗಳ ಮಳೆಗೆರೆಯಲು ಹಿತಕರ ವಾತಾವರಣವಿದೆ. ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿಯಲ್ಲಿನ ಸ್ಥಳಾಭಾವ ಹಾಗೂ ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿನ ಖಾಸಗಿತನದ ಕೊರತೆ ಇವೆರಡನ್ನೂ ‘ವರುಣ’ ಸರಿದೂಗಿಸಲಿದೆ.

ವರುಣಾದ ಉದ್ಘಾಟನೆಯ ಸಂದರ್ಭದಲ್ಲಿ ರಾಜ್ಯ ವಿಧಾನ ಪರಿಷತ್ ಸದಸ್ಯ ಹೆಚ್ ಎಂ ರೇವಣ್ಣ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿಗಳಾದ ಎಲ್ ಕೆ ಅತೀಕ್ ಹಾಗೂ ತುಷಾರ್ ಗಿರಿನಾಥ್ ಅವರೂ ಸೇರಿದಂತೆ ಗಣ್ಯರು ಹಾಗೂ ಅಧಿಕಾರಿಗಳು ಹಾಜರಿದ್ದರು

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s