ಮಾವು ಮೇಳಕ್ಕೆ ಜಿ.ಪಂ. ಅಧ್ಯಕ್ಷರಿಂದ ಚಾಲನೆ

9ಜನರಿಂದ ನೈಸರ್ಗಿಕವಾಗಿ ಪಕ್ವಗೊಳಿಸಿದ ಮಾವು ಖರೀದಿ ಬಲು ಜೋರು
ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಕೊಪ್ಪಳ ಜಿಲ್ಲೆಯಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಆಯೋಜಿಸಲಾಗಿರುವ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.

8ಕೊಪ್ಪಳದಲ್ಲಿ ಇದೇ ಮೊದಲ ಬಾರಿಗೆ ಮಾವು ಮೇಳ ಆಯೋಜಿಸಿರುವುದು. ಮಾವು ಮೇಳದಲ್ಲಿ ಜಿಲ್ಲೆಯ ಹಲವೆಡೆಗಳಿಂದ ರೈತರು ಆಸಕ್ತಿಯಿಂದ ಬಂದು ಪಾಲ್ಗೊಳ್ಳುತ್ತಿದ್ದಾರೆ. ರೈತರೇ ನೇರವಾಗಿ ಗ್ರಾಹಕರಿಗೆ ಮಾವು ಮಾರಾಟ ಮಾಡುವುದರಿಂದ ಅವರಿಗೂ ಮೇಳ ಲಾಭದಾಯಕವಾಗಲಿದೆ.
1ಮಾವು ಮೇಳದಲ್ಲಿ ವಿವಿಧೆಡೆಗಳಿಂದ ಬರುವ ರೈತರು ಒಂದೆಡೆ ಸೇರುವುದರಿಂದ, ಮಾವಿನ ತಳಿಗಳು, ತೋಟಗಾರಿಕೆಯಲ್ಲಿ ಹೊಸ ತಂತ್ರಜ್ಞಾನಗಳ ಬಳಕೆ, ಹೆಚ್ಚು ಬೇಡಿಕೆಯಿರುವ ಮಾವು ತಳಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದು, ಮಾರುಕಟ್ಟೆ, ಮೌಲ್ಯವರ್ಧನೆ ಹೀಗೆ ಅನೇಕ ವಿಷಯಗಳ ಬಗ್ಗೆ ವಿಚಾರಗಳ ವಿನಿಮಯವಾಗಲು ಸಹಕಾರಿಯಾಗಲಿದೆ.
ಮಾವು ಮೇಳದಲ್ಲಿ ಕಾರ್ಬೈಡ್ ಎಂಬ ವಿಷಯುಕ್ತ ರಾಸಾಯನಿಕದಿಂದ ಪಕ್ವಗೊಳಿಸಿದ ಹಣ್ಣುಗಳ ಮಾರಾಟಕ್ಕೆ ಅವಕಾಶವಿಲ್ಲ. 2ಈ ಮೂಲಕ ಸಾರ್ವಜನಿಕರಿಗೆ ರಾಸಾಯನಿಕ ಮುಕ್ತ ಉತ್ತಮ ಗುಣಮಟ್ಟದ ಮಾವು ಹಣ್ಣುಗಳನ್ನು ಹಾಗೂ ವಿವಿಧ ತಳಿಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ನಿಗಮವು ತೋಟಗಾರಿಕೆ ಇಲಾಖೆ ಸಹಕಾರದೊಂದಿಗೆ ಮಾಡುತ್ತಿದೆ  ಮಾವು ಮೇಳದಲ್ಲಿ ರೈತರೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದರಿಂದ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಹಲವು ತಳಿಯ ಮಾವು ಹಣ್ಣು ಲಭ್ಯವಾಗಲಿದ್ದು, ರೈತರಿಗೂ ಇದರಿಂದ ಲಾಭತರಲಿದೆ. ಮೇಳ ಆಯೋಜನೆಯಿಂದ ಮಾವು ಬೆಳೆ ವಿಸ್ತರಣೆಗೆ ಹಾಗೂ ಗುಣಮಟ್ಟದ ಬೆಳೆಗೆ ಉತ್ತೇಜನ ದೊರೆಯಲಿದೆ .

7ಕೊಪ್ಪಳದಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ : ಖರೀದಿಗೆ ಮುಗಿಬಿದ್ದ ಜನ
ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಕೊಪ್ಪಳ ನಗರದಲ್ಲಿ ಆಯೋಜಿಸಲಾಗಿರುವ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ನೈಸರ್ಗಿಕವಾಗಿ ಪಕ್ವಗೊಳಿಸಿದ ಬಗೆ, ಬಗೆಯ ತಳಿಗಳ ಮಾವು ಹಣ್ಣುಗಳನ್ನು ಮುಗಿಬಿದ್ದು ಖರೀದಿಸಿದರು.
6ಕೊಪ್ಪಳ ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಆಯೋಜಿಸಲಾಗಿರುವ ಮಾವು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಸಾರ್ವಜನಿಕರು ಮತ್ತು ರೈತರಿಂದ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಮಾವು ಪ್ರದರ್ಶನ ಮೇಳದಲ್ಲಿ ಸುಮಾರು 100 ಕ್ಕೂ ಹೆಚ್ಚು ಬಗೆಯ ಮಾವು ತಳಿಯ ಹಣ್ಣುಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದ್ದು, ಸಾರ್ವಜನಿಕರು ಆಸಕ್ತಿಯಿಂದ, ಪ್ರದರ್ಶನವನ್ನು ವೀಕ್ಷಿಸಿದರು. ಹಂಪಿ ವಿರೂಪಾಕ್ಷ ದೇವಾಲಯ ಬಳಿ ಇರುವ 500 ವರ್ಷಗಳ ಹಳೆಯದೆನ್ನಲಾದ ಮಾವಿನ ಮರದ ಹಣ್ಣುಗಳನ್ನು ಸಹ ಪ್ರದರ್ಶನಕ್ಕೆ ಇರಿಸಲಾಗಿದೆ. ಮಂಡಪ್ಪ, ಚಿನ್ನರಸಂ, ಪೆದ್ದರಸಂ, ಬಪ್ಪೆಕಾಯಿ, ಮಲ್ಲಿಕಾ, ಕೇಸರ್, ಇಮಾಂಪಸಂದ್, ಆಮಲೆಟ್, ರೋಮೇನಿಯಾ, ತೋತಾಪುರಿ, ನೀಲಂ, ಮಲ್ಲಿಕಾ, ಕಾಲಪಾಡ, ರಸಪೂರಿ, ಮಲಗೋಬ, ಕರಿ ಈಶಗಿಡ, ಕಲಮೀ, ಸುವರ್ಣರೇಖಾ, ಕ್ರಿಪ್ಲಿಂಗ, ಕರಿ ಇಶಾಡ್, ಆ್ಯಪಲ್ ಮಾವು, ತೆಂಗಿನ ಮಾವು ಸೇರಿದಂತೆ ಸುಮಾರು 100 ಕ್ಕೂ ಬಗೆ ಬಗೆಯ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

3ತರೇವಾರಿ ಮಾವಿನ ತಳಿಯನ್ನು ವೀಕ್ಷಿಸಿದ ಜನರು, ಕೊಪ್ಪಳ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಂತಹ ಮೇಳವನ್ನು ಆಯೋಜಿಸಲಾಗಿದೆ. ಇಷ್ಟೊಂದು ಬಗೆಯ ಮಾವು ಹಣ್ಣುಗಳ ತಳಿಗಳು ಇವೆ ಎಂಬುದೇ ತಮಗೆ ತಿಳಿದಿರಲಿಲ್ಲ. ತೋಟಗಾರಿಕೆ ಇಲಾಖೆಯು ಇಂತಹ ನೂರಾರು ತಳಿಗಳನ್ನು ಪ್ರದರ್ಶನಕ್ಕೆ ಇಡುವ ಮೂಲಕ, ಮಾವಿನ ತಳಿಗಳ ಪರಿಚಯ ಮಾಡಿಸಿದೆ. ರಾಸಾಯನಿಕ ಮುಕ್ತವಾಗಿ ಪಕ್ವಗೊಳಿಸಿದ ಹಣ್ಣುಗಳನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ರೈತರಿಂದಲೇ ನೇರವಾಗಿ ಹಣ್ಣುಗಳನ್ನು ಖರೀದಿಸುವ ಅವಕಾಶವನ್ನು ಜನರಿಗೆ ಕಲ್ಪಿಸಲಾಗಿದೆ ಇದಕ್ಕಾಗಿ ಸರ್ಕಾರಕ್ಕೆ ಅಭಿನಂದಿಸುತ್ತೇವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

4ಮಾವು ಮಾರಾಟ ಮೇಳದಲ್ಲಿ ಕೊಪ್ಪಳ ತಾಲೂಕಿನ ಕೂಕನಪಳ್ಳಿ, ಕಲ್ತಾವರಗೇರಾ, ಕಲಕೇರಿ, ಮೈನಳ್ಳಿ, ಇಂದರಗಿ, ಮಾದಿನೂರು ಗ್ರಾಮಗಳ ರೈತರು ಅಲ್ಲದೆ ಯಲಬುರ್ಗಾ ತಾಲೂಕಿನ ಹೊನ್ನುಣಸಿ, ತಳಕಲ್, ಭಾನಾಪುರ, ಮುರಡಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಆಸಕ್ತಿಯಿಂದ ಪಾಲ್ಗೊಂಡು, ಹಣ್ಣುಗಳನ್ನು ಗ್ರಾಹಕರಿಗೆ ಮಾರಾಟ ಮಾಡಿ ಸಂತಸಪಟ್ಟರು .
ಮೇಳದಲ್ಲಿ ದಿನನಿತ್ಯ ವಿವಿಧ ತಳಿಗಳ ಮಾವಿನ ಹಣ್ಣುಗಳು ಜನರಿಗೆ ಲಭ್ಯವಾಗಲಿವೆ. ಮಾರಾಟ ದರವು ಕೂಡ ನಿತ್ಯ ಪರಿಷ್ಕರಣೆಗೊಳ್ಳುವ ಸಾಧ್ಯತೆ ಇರುತ್ತದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s