ರಾಷ್ಟ್ರ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಖಾದಿ ಉತ್ಸವಕ್ಕೆ ಬೆಂಗಳೂರಿನಲ್ಲಿ ಚಾಲನೆ

DSC_011460ನೇ ವರ್ಷದ ಹಾದಿಯಲ್ಲಿರುವ  ಖಾದಿ ಮಂಡಳಿ ರಾಷ್ಟ್ರ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಖಾದಿ ಉತ್ಸವ ಏಪ್ರೀಲ್ 24ರಂದು  ಉದ್ಘಾಟನೆಗೊಂಡು ಮೇ 25 ರವರೆಗೆ ನಡೆಯಲಿದೆ. ಮರೆಯಾಗುತ್ತಿರುವ ಗುಡಿಕೈಗಾರಿಕೆಗಳನ್ನು ಉಳಿಸುವ ಮತ್ತು ನಗರದ ಜನರಿಗೆ ಹೊಸ ರೀತಿಯ ಉತ್ಪನ್ನಗಳನ್ನು ತಲುಪಿಸುವ ನಿಟ್ಟಿನಲ್ಲಿ  ಖಾದಿ ಉತ್ಸವನ್ನು ಆಯೋಜಿಸಿದೆ. ದೇಶದ ಬೇರೆ ಬೇರೆ ರಾಜ್ಯಗಳಿಂದ ನವನವೀನ ರೀತಿಯ ಕರಕುಶಲ ವಸ್ತುಗಳು ಕಾಣಬಹುದಾಗಿದೆ. ಒಂದು ತಿಂಗಳುಗಳ ಕಾಲ ನಡೆಯಲಿರುವ  ಉತ್ಸವಕ್ಕೆ  ಹೆಚ್ಚಿನ ಸಂಖ್ಯೆಯಲ್ಲಿ ಜನ ಭೇಟಿ ನೀಡುತ್ತಿದ್ದಾರೆ.

ಪ್ರತೀ ವರ್ಷ ಜಿಲ್ಲಾಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ಮತ್ತು ರಾಷ್ಟ್ರಮಟ್ಟದಲ್ಲಿ ವಸ್ತುಪ್ರದರ್ಶನವನ್ನು ಏರ್ಪಡಿಸುತ್ತಿದ್ದು ಪ್ರಸ್ತುತ ವಸ್ತು ಪ್ರದರ್ಶನವನ್ನು ಮಂಡಳಿಯು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಸರ್ಕಾರ ಇವರ ಸಹಯೋಗದೊಂದಿಗೆ ಸ್ವಾತಂತ್ರ್ಯ ಉದ್ಯಾನವನದ ಪೀಪಲ್ ಪ್ಲಾಜಾದಲ್ಲಿ ಆಯೋಜಿಸಿದೆ.

DSC_0184ಉತ್ಸವದಲ್ಲಿ ಎನೇನಿದೆ?

ಖಾದಿ ಮಂಡಳಿಯು ಪ್ರತೀಬಾರಿ ಜನರಿಗೆ ಬೇಕಾದ ಪರಿಸರ ಸ್ನೇಹಿಯಾಗಿರುವ ವಸ್ತುಗಳ ಮಾರಾಟ ಮಾಡುತ್ತಿದ್ದು ಉತ್ಸವದಲ್ಲಿ ಆಕರ್ಶನೀಯವಾದ ಅರಳೆ ಖಾದಿ, ರೇಷ್ಮೆ ಖಾದಿ, ಉಣ್ಣೆ ಬಟ್ಟೆಗಳು ಹಾಗೂ ಖಾದಿಯ ವೈವಿಧ್ಯಮಯ  ಉತ್ಪನ್ನಗಳು, ಗ್ರಾಮೀಣ ಗುಡಿಕೈಗಾರರಿಂದ ಮಾಡಿದ ಮರದ ಕೆತ್ತನೆಗಳು, ಪೀಠೋಪಕರಣಗಳು, ಕೈಯಿಂದಲೇ ತಯಾರಿಸಿದ ಭರಣಗಳು, ಮಹಿಳೆಯರ ಪುರುಷರ ಬಟ್ಟೆಗಳು,  ಆಕರ್ಶಕ ಹಾಗೂ ನೈಸರ್ಗಿಕ ಸೆಣಬಿನ ಉತ್ಪನ್ನಗಳು , ಬಾಳಿಕೆ ಬರುವಂತಹ ಚರ್ಮದ ಪಾದರಕ್ಷೆಗಳು, ಕಣ್ಣು ಮಿಟುಕಿಸುವಂತಹ ಕುಂಬಾರಿಕೆಯ ಕುಶಲ ವಸ್ತುಗಳು , ಕೈ ಚೀಲಗಳು, ಮಹಿಳೆಯರ ಆಕರ್ಶನೀಯ ವ್ಯಾನಿಟಿ ಬ್ಯಾಗ್ ಗಳು  ಪರ್ಸ್ ಗಳು ನಾನ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳು, ಕೈ ಕಾಗದ ವಸ್ತುಗಳು, ಆರೋಗ್ಯಕರವಾದ ನಿಸರ್ಗದಿಂದ ನೇರವಾಗಿ ಸಿಗುವ ಆಹಾರ ಪದಾರ್ಥಗಳನ್ನು ಉತ್ಸವದಲ್ಲಿ ಮಾರಾಟ ಮಾಡಲಾಗುತ್ತಿದೆ.

DSC_0187

 ಜನರಿಗೆ ಅರಿವು:

ದೇಶದಲ್ಲಿ ಹೇರಳವಾದ ಸಂಪನ್ಮೂಲಗಳನ್ನು ಇಟ್ಟುಕೊಂಡು ಜನರೆಲ್ಲಾ ಇನ್ನಾವುದೋ ಸಂಸ್ಕೃತಿಗೆ ಕಳೆದು ಹೋಗಿರುವಾಗ ಖಾದಿ ಮಂಡಳಿಯು ಜನರಿಗೆ ಉಪಯೋಗವಾಗುವ ಮತ್ತು ಕಡಿಮೆ ಬೆಲೆಯಲ್ಲಿ ಸಿಗುವ ಖಾದಿ ಮತ್ತು ಗ್ರಾಮೀಣ ಗುಡಿಕೈಗಾರಿಕೆಗಳನ್ನು ಬೆಳೆಸುತ್ತಾ ಬಂದಿದೆ. ಖಾದಿ ಮಂಡಳಿ ಹಾಗೂ ಖಾದಿ ಆಯೋಗದಿಂದ ಧನ ಸಹಾಯ ಪಡೆದ ಕಸುಬುದಾರರು ಮತ್ತು ಸಂಘ ಸಂಸ್ಥೆಗಳಿಂದ ಅವರು ಉತ್ಪಾದಿಸುವ  ಉತ್ಪನ್ನಗಳ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದ್ದು ಇದರಿಂದ  ಗ್ರಾಮೀಣ ಮತ್ತು ಗುಡಿಕೈಗಾರಿಕೆ ಉದ್ದಿಮೆಗಳ ಕುರಿತು    ನಗರದ ಜನತೆಗೆ ಅರಿವು ಮೂಡಿಸುವುದು ಖಾದಿ ಮಂಡಳಿಯ ಮುಖ್ಯ  ಉದ್ದೇಶವಾಗಿರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ತಯಾರಾದ ಖಾದಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಉತ್ಪನ್ನವಾಗುವ ವಸ್ತುಗಳಿಗೆ ಮಾರುಕಟ್ಟೆ ಇರುವುದು ನಗರ ಪ್ರದೇಶಗಳಲ್ಲಿಯಾಗಿರುವುದರಿಂದ ಕಸುಬುದಾರರಿಗೆ ನಿರಂತರ ಕೆಲಸಗಳಿರುತ್ತದೆ ಮತ್ತು ಖಾದಿ ಪ್ರೀಯರಿಗೆ ಕಡಿಮೆ ಬೆಲೆ ಮತ್ತು ವಿವಿಧ ಹೊಸ ರೀತಿಯ ವಸ್ತುಗಳನ್ನು ಒಂದೇ ಕಡೆ ಕೊಂಡುಕೊಳ್ಳಲು ಸಹಕಾರಿಯಾಗಿದೆ.

ಉದ್ದೇಶ ಏನು?

DSC_0142ಖಾದಿ ಉತ್ಸವದಲ್ಲಿ  ಕಸುಬುದಾರರು ತಾವು ಉತ್ಪಾದಿಸಿದ ವಸ್ತುಗಳನ್ನು ನೇರವಾಗಿ ಗ್ರಾಹಕರಿಗೆ ತಲುಪುವಂತೆ ಮಾಡಲು ದಾರಿ ಮಾಡಿದೆ ಮತ್ತು ಮಾರಟಗಾರರಿಗೆ ಮತ್ತು ಗ್ರಾಹಕರ ನಡುವೆ ಉತ್ತಮ ಸಂಪರ್ಕ ಬೆಳೆಸಲು ಸಹಾರಿಯಾಗಿದೆ.  ಗ್ರಾಮೀಣ ಪ್ರದೇಶದಲ್ಲಿ ತಯಾರಾದ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳನ್ನು ನಗರದ ಜನತೆಗೆ ಪರಿಚಯಿಸಿ ಈ ಉತ್ಪನ್ನಗಳಿಗೆ ವ್ಯಾಪಕ ಪ್ರಚಾರ ನೀಡುವುದು. ತನ್ಮೂಲಕ ಉದ್ದಿಮೆದಾರ ಆರ್ಥಿಕ ಸ್ಥಿತಿಗಳನ್ನು ಉತ್ತಮಪಡಿಸುವುದು ಮತ್ತು ಗ್ರಾಮೀಣ ವಲಸೆಯನ್ನು ಕಡಿಮೆ ಮಾಡಲು ವಸ್ತುಪ್ರದರ್ಶನಗಳನ್ನು ಏರ್ಪಡಿಸುವ ಮೂಲ ಉದ್ದೇಶವಾಗಿದೆ. ಪಂಜಾಬ್, ಮಹರಾಷ್ಟ್ರ, ಉತ್ತರ ಪ್ರದೇಶ, ಕಾಸ್ಮೀರ ದೇಶದ ಮೂಲೆ ಮೂಲೆಗಳಿಂದಳು ಬಂದು ತಮ್ಮ  ಉತ್ಪನ್ನಗಳನ್ನು ಮಾರಾಟಕ್ಕೆ ಇಡುತ್ತಾರೆ.

 ಉದ್ಯೋಗವಕಾಶ:

DSC_0167ಇದಕ್ಕಾಗಿಯೇ ಕರ್ನಾಟಕ ಸರ್ಕಾರವು ಖಾದಿ ಕ್ಷೇತ್ರಕ್ಕೆ ಉತ್ತಮ ಮಾರುಕಟ್ಟೆ, ತರಬೇತಿ, ವಿನೂತನ ವಿನ್ಯಾಸಗಾರರಿಗೆ ಕೌಶಲ್ಯ ತರಬೇತಿಯನ್ನು ನೀಡುವ ಮೂಲಕ ಖಾದಿಯಲ್ಲಿ ಸಮಗ್ರವಾದ ಬದಲಾವಣೆ ತರಲು ಖಾದಿ ಬ್ರಾಂಡಿಂಗ್ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಜನರು ಬೇಸಯ ಮಾಡುವ ಜೊತೆ ಜೊತೆಯಾಗಿ ಸ್ವಂತ ಉದ್ದಿಮೆಗಳನ್ನು ಸೃಷ್ಟಿಸಲೆಂದೆ  ಖಾದಿ ಮತ್ತು ಗ್ರಾಮೋದ್ಯಮಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯಮ ಮಂಡಳಿ ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಒದಗಿಸಿದೆ. ಮತ್ತು ಮಂಡಳಿಯು ಇದರಡಿಯಲ್ಲಿ ಉದ್ಯೋಗವಕಾಶವನ್ನು ಕಲ್ಪಿಸಿ ಗ್ರಾಮೀಣ ಕಸುಬುದಾರರ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸಿದೆ.ಮತ್ತು ತಮ್ಮ ಆಸಕ್ತಿಗಳನ್ನು ಇಟ್ಟುಕೊಂಡು ಅದನ್ನೇ ಸ್ವಂತ ಉದ್ದಿಮೆಯನ್ನಾಗಿ ಮಾಡಲು ಸಹಕಾರಿಯಾಗಿದೆ.

ಖಾದಿ ಉತ್ಸವದಲ್ಲಿ ವಿಶೇಷವಾಗಿ

 ಸಾಂಸ್ಕೃತಿಕ  ಕಾರ್ಯಕ್ರಮ:

ಈ ಬಾರಿ ರಾಷ್ಟ್ರಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನದಲ್ಲಿ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬಂದು ಹೋಗುವುದರಿಂದ ಸಂಧರ್ಭದಲ್ಲಿ ರಜಾ ದಿನಗಳಲ್ಲಿ ಸಂಜೆ ನಾಡಿನ ಸಂಸ್ಕೃತಿ, ಕಲೆ, ಹಾಗೂ ಸಾಹಿತ್ಯವನ್ನು ಪ್ರತಿಬಿಂಬಿಸುವ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹಾಗೂ ಖಾದಿ ಫ್ಯಾಷನ್ ಶೋ ಏರ್ಪಡಿಸಲಾಗಿದೆ.

 DSC_0237ಮುಂಜಾಗ್ರತಾ ಕ್ರಮಗಳು:

ಮಳೆ ಬೆಂಕಿಯಿಂದ ಉತ್ಸವಕ್ಕೆ ಹಾನಿಯಾಗದಂತೆ ಮಳಿಗೆಗಳ  ಛಾವಣಿಯನ್ನು ಹಾಸಲಾಗಿದೆ, ನೆಲಕ್ಕೆ ಪ್ಲ್ಯಾಟ್ ಫಾರ್ಮ್  ಹಾಕಲಾಗಿದ್ದು, ಬೆಂಕಿ ಅನಾಹುತದಿಂದ ತಡೆಯಲು 30 ದಿನಗಳಿಗೆ ಅಗ್ನಿಶಾಮಕ ವಾಹನದ ವ್ಯವಸ್ಥೆ ಮಾಡಲಾಗಿದೆ. ವಸ್ತು ಪ್ರದರ್ಶನಕ್ಕೆ ಆಗಮಿಸುವ ಸಾರ್ವಜನಿಕರಿಗೆ ಉಚಿತ ರಕ್ತದಾನ ಶಿಬಿರವನ್ನು ರೆಡ್ ಕ್ರಾಸ್ ಸಂಸ್ಥೆಯಿಂದ ಆಯೋಜಿಸಲಾಗಿದೆ. ಉಚಿತವಾಗಿ ಕಿಮ್ಸ್ ಸೆಂಟ್ ಮಾರ್ಥಾಸ್ ಮುಂತಾದ  ಆಸ್ಪತ್ರೆಗಳಿಂದ  ವೈದ್ಯಕೀಯ ತಪಾಸಣೆ ಏರ್ಪಡಿಸಲಾಗಿದೆ. ಅನಾಹುತಗಳಾದಾಗ ಪರಿಹಾರವಾಗಿ ರೂ. 3 ಕೋಟಿ ವಿಮೆಯನ್ನು ಮಾಡಿಸಲಾಗಿದೆ.

 

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s