ಹಿಂದುಳಿದ ವರ್ಗಗಳ ಅಭಿವೃದ್ದಿಗಾಗಿ ಕಾದಿವೆ ಸಾವಿರ ಅವಕಾಶಗಳು

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಹಿಂದುಳಿದ ವರ್ಗಗಳ ಜನರ ಆರ್ಥಿಕ ಅಭಿವೃದ್ದಿಗಾಗಿ 2017-18 ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಕೆಳಕಂಡ ಯೋಜನೆಗಳಲ್ಲಿ ಸೌಲಭ್ಯ ಪಡೆಯ ಬಯಸುವವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನಿಗದಿತ ಅರ್ಜಿ ನಮೂನೆಗಳನ್ನು ದಿನಾಂಕ : 31-5-2017 ರೊಳಗಾಗಿ ನಿಗಮದ ಜಿಲ್ಲಾ ಕಛೇರಿಯಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ದಿ:09-6-2017 ರೊಳಗಾಗಿ ಸಲ್ಲಿಸಬೇಕು.

ಒಂದು ಬಾರಿ ನಿಗಮದ ಯಾವುದಾದರು ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮೊತ್ತೊಮ್ಮೆ ಸೌಲಬ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ನಿಗಮದ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಹೊಂದಿರಬೇಕಾದ ಸಾಮಾನ್ಯ ಅರ್ಹತೆಗಳು:-

(1) ಅರ್ಜಿದಾರರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. (ವಿಶ್ವಕರ್ಮ ಮತ್ತು ಅದರ ಉಪ ಸಮುದಾಯಗಳನ್ನು ಮತ್ತು ಮತಿಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ) (2) ರಾಜ್ಯ ಸರ್ಕಾರದ ಯೋಜನೆಗಳಿಗೆ ಅವರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.40,000/-ಗಳು ಪಟ್ಟಣ ಪ್ರದೇಶದವರಿಗೆ ರೂ.55,000/-ಗಳ ಒಳಗಿರಬೇಕು, (3) ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿದಾರರ ಮತ್ತು ಅವರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.98,000/-ಗಳು ಪಟ್ಟಣ ಪ್ರದೇಶದವರಿಗೆ ರೂ.1,20,000/-ಗಳು. ಹಾಗೂ (4) ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು.5) ಅರ್ಜಿದಾರರ ಐ.ಎಫ್.ಸಿ.ಕೋಡ್ ಹೊಂದಿರುವ ರಾಷ್ಟ್ರೀಕೃತ, ಗ್ರಾಮೀಣ ಬ್ಯಾಂಕ್ ಖಾತೆಗಳನ್ನು ಹೊಂದಿರಬೇಕು.,

ರಾಜ್ಯ ಸರ್ಕಾರದ ಯೋಜನೆಗಳು:

ಚೈತನ್ಯ ಸಬ್ಸಿಡಿ ಕಂ ಸಾಫ್ಟ್ ಲೋನ್ ಯೋಜನೆ:-

ಬ್ಯಾಂಕುಗಳ ಸಹಯೋಗದೊಂದಿಗೆ ಕೃಷಿ, ವ್ಯಾಪಾರ, ಸಾರಿಗೆ, ಕೈಗಾರಿಕೆ, ಸೇವಾ ವಲಯದಲ್ಲಿ ಬರುವ ಆರ್ಥಿಕ ಚಟುವಟಿಕೆಗಳಿಗೆ ಗರಿಷ್ಟ ರೂ.5.00 ಲಕ್ಷಗಳವರೆಗೆ ಸಾಲ ಹಾಗೂ ನಿಗಮದಿಂದ ಶೇ20ರಷ್ಟು ಗರಿಷ್ಠ ರೂ.1.00ಲಕ್ಷಗಳ ಶೇಕಡ 4ರ ಬಡ್ಡಿದರದಲ್ಲಿ ಮಾರ್ಜಿನ್ ಹಣ. ರೂ.1.00 ಲಕ್ಷಕ್ಕಿಂತ ಕಡಿಮೆ ಇರುವ ಸಾಲಕ್ಕೆ ಶೇ.30ರಷ್ಟು, ಅಥವಾ ಗರಿಷ್ಟ ರೂ. 10,000/-ಗಳ ಸಹಾಯಧನ (ಸಬ್ಸಿಡಿ).

ಅರಿವು-ಶೈಕ್ಷಣಿಕ ನೇರ ಸಾಲ ಯೋಜನೆ:-

ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದ್ದು, ಕುಟುಂಬದ ವಾರ್ಷಿಕ ಆದಾಯ ರೂ.3.50ಲಕ್ಷಗಳ ಮಿತಿಯಲ್ಲಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೊರತುಪಡಿಸಿ ಇತರೆ ಪ್ರವೇಶ ಪರೀಕ್ಷೆ ಮುಖಾಂತರ ಮೆರಟಿ ಆಧಾರದ ಮೇಲೆ ಈ ಕೆಳಕಂಡ ಕೊರ್ಸ್ ಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕೊರ್ಸ್‍ನ ಅವಧಿಗೆ ಶೇಕಡ 2ರ ಬಡ್ಡಿ ದರದಲ್ಲಿ ಗರಿಷ್ಠ ವಾರ್ಷಿಕ 1.00 ಲಕ್ಷಗಳ ವರೆಗೆ ಸಾಲ ಒದಗಿಸಲಾಗುವುದು.

(1) ಬಿ.ಇ.(ಸಿ.ಇ.ಟಿ), (2) ಎಂ.ಬಿ.ಬಿ.ಎಸ್., (3) ಬಿ.ಯೂ.ಎಂ.ಎಸ್., (4) ಬಿ.ಡಿ.ಎಸ್. (5) ಬಿ.ಎ.ಎಂ.ಎಸ್. (6) ಬಿ.ಎಚ್.ಎಂ.ಎಸ್. (7) ಎಂ.ಬಿ.ಎ. (8) ಎಂ.ಟೆಕ್. (9) ಎಂ.ಇ., (10) ಎಂ.ಡಿ., (11) ಪಿ.ಹೆಚ್‍ಡಿ. (12) ಬಿ.ಸಿ.ಎ./ಎಂ.ಸಿ.ಎ (13) ಎಂ.ಎಸ್.ಆಗ್ರ್ರಿಕಲ್ಚರ್ (14)ಬಿ.ಎಸ್.ಸಿ. ನರ್ಸಿಂಗ್, (15)ಬಿ.ಫಾರಂ/ಎಂ.ಫಾರಂ (16) ಬಿ.ಎಸ್.ಸಿ. ಪ್ಯಾರಾ ಮೆಡಿಕಲ್ (17) ಬಿ.ಎಸ್.ಸಿ. ಬಯೋ ಟೆಕ್ನಾಲಜಿ (18) ಬಿ.ಟೆಕ್ (19) ಬಿ.ಪಿ.ಟಿ. (20) ಬಿ.ವಿ.ಎಸ್.ಸಿ/ಎಂ.ವಿ.ಎಸ್.ಸಿ. (21)ಬಿ.ಎನ್.ಎಂ. (22)ಬಿ.ಹೆಚ್.ಎಮ್. (23)ಎಂ.ಡಿ.ಎಸ್. (24) ಎಂ.ಎಸ್.ಡಬ್ಲ್ಯೂ (25) ಎಲ್.ಎಲ್.ಎಂ. (26)ಎಂ.ಎಫ್.ಎ. (27) ಎಂ.ಎಸ್.ಸಿ. ಬಯೋ ಟೆಕ್ನಾಲಜಿ ಮತ್ತು (28) ಎಂ.ಎಸ್.ಸಿ.(ಎ.ಜಿ.)

ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಬಡ್ಡಿರಹಿತ ಸಾಲ ಯೋಜನೆ:-

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ವಿದೇಶ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣಗಳಾದ ಪೋಸ್ಟ್‍ ಡಾಕ್ಟ್ರಲ್, ಪಿಹೆಚ್.ಡಿ ಮಾಸ್ಟರ್ ಡಿಗ್ರಿ, ಕೊರ್ಸ್ ಗಳಲ್ಲಿ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ 3.50 ಲಕ್ಷಗಳಂತೆ, 03 ವರ್ಷಗಳ ಕೊರ್ಸ್ ನ ಅವಧಿಗೆ ಗರಿಷ್ಠ ರೂ 10.00 ಲಕ್ಷಗಳ ಬಡ್ಡಿರಹಿತ ಸಾಲ ಮಂಜೂರು.
ಅರ್ಜಿದಾರರು ಗರಿಷ್ಠ 35 ವರ್ಷಗಳ ವಯೋಮಿತಿಯಲ್ಲಿರಬೇಕು. ವಾರ್ಷಿಕ ವರಮಾನ ರೂ 3.50 ಲಕ್ಷಗಳನ್ನು ಮೀರಿರಬಾರದು ಹಾಗೂ ಶೇ60ಕ್ಕಿಂತ ಹೆಚ್ಚಿನ ಅಂಕಗಳಿಸಿರಬೇಕು.

ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ:-

ಹಿಂದುಳಿದ ವರ್ಗಗಳ ಜನರು ಸ್ವಯಂ ಉದ್ಯೋಗಕ್ಕೆ ಆರ್ಥಿಕ ಚಟುವಟಿಕೆ ಅನುಸಾರ ಗರಿಷ್ಠ ರೂ 2,00,000/-ಗಳ ವರೆಗೆ ಆರ್ಥಿಕ ನೆರವು. ಇದರಲ್ಲಿ ಗರಿಷ್ಠ ಶೇ1.5 ರಷ್ಟು ಸಹಾಯಧನ, ಉಳಿಕೆ ಮೊತ್ತ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲವಾಗಿರುತ್ತದೆ.

ಕಿರುಸಾಲ ಯೋಜನೆಯಲ್ಲಿ ಸೌಲಭ್ಯ:-

ಸ್ವ ಸಹಾಯ ಗುಂಪುಗಳ ಸದಸ್ಯರು ಕೈಗೊಳ್ಳುವ ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರದ ಚಟುವಟಿಕೆಗಳಿಗೆ ಅಂದರೆ, ಹಣ್ಣು, ತರಕಾರಿ ಮಾರುವವರು, ಹಾಲು ಮಾರುವವರು, ಹೂ ಮಾರುವವರು, ತಳ್ಳುವ ಗಾಡಿ ವ್ಯಾಪಾರಿಗಳು ಮುಂತಾದ ಸಣ್ಣ ಪ್ರಮಾಣದ ವ್ಯಾಪಾರ ಚಟುವಟಿಕೆಗಳಿಗೆ ವಾರ್ಷಿಕ ಶೇಕಡ 4ರ ಬಡ್ಡಿ ದರದಲ್ಲಿ ಗರಿಷ್ಠ ರೂ. 10,000ಸಾಲ ಹಾಗೂ ರೂ.5000/-ಗಳ ಸಹಾಯಧನ. ಅರ್ಜಿದಾರರು ಬಿ.ಪಿ.ಎಲ್ ಕುಟುಂಬಕ್ಕೆ ಸೇರಿರಬೇಕು ಹಾಗೂ ಸರ್ಕಾರಿ/ಅರೆ ಸರ್ಕಾರಿ ಉದ್ಯೋಗದಲ್ಲಿ ಇರಬಾರದು.

ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ವೃತ್ತಿ ಕಸುಬುದಾರರಿಗೆ ಸಾಲ ಮತ್ತು ಸಹಾಯಧನ :- ಹಿಂದುಳಿದ ವರ್ಗಗಳ ಸಾಂಪ್ರದಾಯಿಕ ವೃತ್ತಿದಾರರು ಅಥವಾ ವೃತ್ತಿ ಕಸುಬುದಾರರು ತಮ್ಮ ವೃತ್ತಿಯ ಅಭಿವೃದ್ಧಿಗಾಗಿ, ಆಧುನಿಕ ಉಪಕರಣಗಳನ್ನು ಖರೀದಿಸಲು, ತಾಂತ್ರಿಕತೆಯನ್ನು ಮೇಲ್ದರ್ಜೆಗೇರಿಸಲು, ವೃತ್ತಿ ಅನುಸಾರ ಗರಿಷ್ಠ ರೂ.2,00,000/- ಗಳ ವರೆಗೆ ಆರ್ಥಿಕ ನೇರವು ಇದರಲ್ಲಿ ಗರಿಷ್ಠ ಶೇ 1.5 ರಷ್ಟು ಸಹಾಯಧನ. ಉಳಿಕೆ ಮೊತ್ತ ಶೇ.2ರ ಬಡ್ಡಿದರದಲ್ಲಿ ಸಾಲವಾಗಿರುತ್ತದೆ.

ಗಂಗಾ-ಕಲ್ಯಾಣ ಯೋಜನೆ:-

(ಅ) ವೈಯಕ್ತಿಕ ಕೊಳವೆಬಾವಿ ಯೋಜನೆ:-

ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು. ಘಟಕ ವೆಚ್ಚ ರೂ.2.50ಲಕ್ಷಗಳಲ್ಲಿ ಒಂದು ಕೊಳವೆ ಬಾವಿ ಕೊರೆಯಿಸಿ, ಪಂಪ್‍ಸೆಟ್ಟು ಮತ್ತು ಉಪಕರಣಗಳನ್ನು ಸರಬರಾಜು ಮಾಡಿ ನೀರಾವರಿ ಸೌಲಭ್ಯ ಒದಗಿಸುವುದು. ರೂ.2.05ಲಕ್ಷ ಗಳಲ್ಲಿ ರೂ.1.50/-ಲಕ್ಷಗಳ ಸಹಾಯಧನದಲ್ಲಿ ಬೋರ್‍ವೆಲ್ ಪರಿಕರಗಳು ಹಾಗೂ ರೂ.50,000/-ಗಳ ಸಾಲ ಶೇ.4ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು.

(ಆ) ಸಾಮೂಹಿಕ ನೀರಾವರಿ ಯೋಜನೆ:-

ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, 3ಬಿಗೆ ಸೇರಿದ ಸಣ್ಣ ಮತ್ತು ಅತಿಸಣ್ಣ ರೈತರಾಗಿರಬೇಕು. ಕನಿಷ್ಠ 3 ಜನರು ಹೊಂದಿರುವ 8 ರಿಂದ 15 ಎಕರೆ ಜಮೀನಿಗೆ ರೂ.4.00 ಲಕ್ಷಗಳ ವೆಚ್ಚದಲ್ಲಿ 02 ಕೊಳವೆ ಬಾವಿ, 15 ಎಕರೆಗಿಂತ ಹೆಚ್ಚಿನ ಜಮೀನಿಗೆ ರೂ.6.00 ಲಕ್ಷಗಳ ವೆಚ್ಚದಲ್ಲಿ 03 ಕೊಳವೆಬಾವಿ ಕೊರೆಯಿಸಿ ಪಂಪ್ ಸೆಟ್ ಮತ್ತು ಉಪಕರಣಗಳನ್ನು ಸರಬರಾಜು ಮಾಡಿ ನೀರಾವರಿ ಸೌಲಭ್ಯ ಒದಗಿಸಲಾಗುವುದು. ವಿದ್ಯುದ್ದೀಕರಣಕ್ಕೆ ಪ್ರತಿ ಕೊಳವೆಬಾವಿಗೆ ರೂ.50,000/-ಗಳನ್ನು ವಿದ್ಯುತ್ ಸರಬರಜು ಕಂಪನಿಗೆ ಪಾವತಿಸಲಾಗುವುದು.

ಮಲೆನಾಡು ಪ್ರದೇಶಗಳಲ್ಲಿ ವೈಯಕ್ತಿಕ ಕೊಳವೆ ಬಾವಿ ಘಟಕ ವೆಚ್ಚದಲ್ಲಿ ತೆರದ ಬಾವಿಗಳ ಮಂಜೂರು.
ಭೂ ಮಟ್ಟದಲ್ಲಿ ದೊರೆಯುವ ನದಿ ಮತ್ತು ಜಲಾಶಯಗಳ ನೀರಾವರಿ ಸಂಪನ್ಮೂಲಗಳಿಂದ ಏತ ನೀರಾವರಿ ಮೂಲಕ ನೀರಾವರಿ ಸೌಲಭ್ಯ.

2016-17 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ಮಡಿವಾಳ, ಸವಿತ, ಕುಂಬಾರ, ತಿಗಳ ಮತ್ತು ಉಪ್ಪಾರ ಸಮುದಾಯಗಳ ಅಭಿವೃದ್ದಿಗೆ ವಿಶೇಷ ಆರ್ಥಿಕ ನೆರವು.

ಮಡಿವಾಳ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮಗಳು:

ದೋಬಿ ವೃತ್ತಿ ನಿರ್ವಹಣೆ ಗರಿಷ್ಠ ರೂ.2.00 ಲಕ್ಷಗಳ ವರೆಗೆ, ಶೇ.2ರ ಬಡ್ಡಿದರದಲ್ಲಿ ಸಾಲ. ಇದರಲ್ಲಿ ಶೇ.15ರಷ್ಟು ಸಹಾಯಧನ. ಮಡಿವಳ ಸಮಾದ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ರೂ.3.00 ಲಕ್ಷಗಳ ವರೆಗೆ ಆರ್ಥಿಕ ನೆರವು, ವೈಯಕ್ತಿಕ ಗಂಗಾ ಕಲ್ಯಾಣ ನೀರಾವರಿ ಸೌಲಭ್ಯ. ಅರಿವು -ಶೈಕ್ಷಣಿಕ ಸಾಲ ಹಾಗೂ ಕೌಶಲ್ಯಾಭಿವೃದ್ಧಿ ತರಬೃತಿ: ಡಿ.ಟಿ.ಪಿ. ತರಬೇತಿ, ವಾಹನ ಚಾಲನೆ ತರಬೇತಿ, ಬ್ಯೂಟಿಷಿಯನ್, ರೆಡಿಮೇಡ್ ಗಾರ್ಮೆಂಟ್ಸ್ ತರಬೇತಿ ಇತ್ಯಾದಿ.

ಸವಿತ ಸಮಾಜದ ಅಭಿವೃದ್ಧಿ ಕಾರ್ಯಕ್ರಮಗಳು:

ಕ್ಷೌರಿಕ ವೃತ್ತಿ ನಿರ್ವಹಣೆಗೆ ಗರಿಷ್ಠ ರೂ.2.00 ಲಕ್ಷಗಳ ವರೆಗೆ ಶೇ.2ರ ಬಡ್ಡಿದರದಲ್ಲಿ ಸಾಲ. ಇದರದಲ್ಲಿ ಶೇ.15 ರಷ್ಟು ಸಹಾಯಧನ. ಸ್ವಯಂ ಉದ್ಯೋಗ ಕೈಗೊಳ್ಳಲು ಗರಿಷ್ಠ ರೂ.2.00 ಲಕ್ಷಗಳ ವರೆಗೆ ಶೇ.4ರ ಬಡ್ಡಿದರದಲ್ಲಿ ಸಾಲ. ಇದರಲ್ಲಿ ಶೇ.ರಷ್ಟು ಸಹಾಯಧನವಾಗಿರುತ್ತದೆ. ನಾಧಸ್ವರ ಮತ್ತು ಡೋಲು ಉಪಕರಣ ಕೊಳ್ಳಲು ವೈಕ್ತಿಕ ರೂ.10,000ಗಳಿಂದ ರೂ.25,000ಗಳ ವರೆಗೆ ಆರ್ಥಿಕ ನೆರವು ಇದರಲ್ಲಿ ಶೇ.30ರಷ್ಟು ಸಹಾಯಧನವಾಗಿರುತ್ತದೆ. ವೈಯಕ್ತಿಕ ಗಂಗಾ ಕಲ್ಯಾಣ ನೀರಾವರಿ ಸೌಲಭ್ಯ, ಅರಿವು -ಶೈಕ್ಷಣಿಕ ಸಾಲ, ಬೇಸಿಕ್ ಸೌಂದರ್ಯವರ್ಧಕ ತರಬೇತಿ: ಬ್ಯೂಟಿಷಿಯನ್ ತರಬೇತಿ ಸಂಸ್ಥೆಗಳ ಮೂಲಕ ಒಂದು ವಾರದ ಅವಧಿಯ ಉಚಿತ ತರಬೇತಿ.

ಕೌಶಲ್ಯಾಭಿವೃದ್ಧಿ ತರಬೇತಿ:
ಡಿ.ಟಿ.ಪಿ.ತರಬೇತಿ, ವಾಹನ ಚಾಲನಾ ತರಬೇತಿ, ಬ್ಯೂಟಿಷಿಯನ್, ರೆಡಿಮೇಟ್ ಗಾರ್ಮೆಂಟ್ಸ್ ತರಬೇತಿ ಇತ್ಯಾದಿ.

ತಿಗಳ ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಗಳು:

ಹೂವು, ತರಕಾರಿ, ಮಾರಾಟಗಾರರಿಗೆ ತರಕಾರಿ ಮತ್ತು ಹೂವು ಬೆಳೆ ಬೆಳೆಯಲು ಗರಿಷ್ಠ ರೂ.2.00 ಲಕ್ಷಗಳವರೆಗೆ ಶೇ.2ರ ಬಡ್ಡಿದರದಲ್ಲಿ ಸಾಲ. ಇದರದಲ್ಲಿ ಶೇ.15ರಷ್ಟು ಸಹಾಯಧನವಾಗಿರುತ್ತದೆ. ಸ್ವಯಂ ಉದ್ಯೋಗ ಕೈಗೊಳ್ಳಲು ಗರಿಷ್ಠ ರೂ.2.00ಲಕ್ಷಗಳ ವರೆಗೆ ಶೇ.4ರ ಬಡ್ಡಿದರದಲ್ಲಿ ಸಾಲ. ಇದರದಲ್ಲಿ ಶೇ.15 ರಷ್ಟು ಸಹಾಯಧನವಾಗಿರುತ್ತದೆ. ವೈಯಕ್ತಿಕ ಗಂಗಾ ಕಲ್ಯಾಣ ನೀರಾವರಿ ಸೌಲಭ್ಯ,.
ಅರಿವು -ಶೈಕ್ಷಣಿಕ ಸಾಲ, ಕೌಶಲ್ಯಾಭಿವೃದ್ಧಿ ತರಬೇತಿಯಡಿ ಆ್ಯನಿಮೆಷನ್ , ಆಟೋಕ್ಯಾಡ್, ಸೌಂಡ್ ಇಂಜಿನಿಯರಿಂಗ್, ಡಿ.ಟಿ.ಪಿ. ತರಬೇತಿ, ವಾಹನ ಚಾಲನಾ ತರಬೇತಿ,ಬ್ಯೂಟಿಷಿಯನ್, ರೆಡಿಮೇಟ್ ಗಾರ್ಮೆಂಟ್ಸ್ ತರಬೇತಿ ಇತ್ಯಾದಿ.

ಕುಂಬಾರ ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಗಳು:

ಕುಂಬಾರಿಕೆ ವೃತ್ತಿ ನಿರ್ವಹಣೆಗೆ ಗರಿಷ್ಠ ರೂ.2.00 ಲಕ್ಷಗಳ ವರೆಗೆ ಶೇ.2ರ ಬಡ್ಡಿದರದಲ್ಲಿ ಸಾಲ. ಇದರದಲ್ಲಿ ಶೇ.15ರಷ್ಟು ಸಹಾಯಧನವಾಗಿರುತ್ತದೆ. ಸ್ವಯಂ ಉದ್ಯೋಗ ಕೈಗೊಳ್ಳಲು ಗರಿಷ್ಠ ರೂ.2.00 ಲಕ್ಷಗಳ ವರೆಗೆ ಶೇ.4ರ ಬಡ್ಡಿದರದಲ್ಲಿ ಸಾಲ. ಇದರದಲ್ಲಿ ಶೇ.15ರಷ್ಟು ಸಹಾಯಧನವಾಗಿರುತ್ತದೆ. ಅರಿವು -ಶೈಕ್ಷಣಿಕ ಸಾಲ, ಕೌಶಲ್ಯಾಭಿವೃದ್ಧಿ ತರಬೇತಿಯಡಿ ಕುಂಬಾರಿಕೆ ಕಲಾತ್ಮಕ ಉತೊನ್ನಗಳ ತಯಾರಿಕೆ, ಡಿ.ಟಿ.ಪಿ. ತರಬೇತಿ, ವಾಹನ ಚಾಲನಾ ತರಬೇತಿ, ಬ್ಯೂಟಿಷಿಯನ್, ರೆಡಿಮೇಟ್ ಗಾರ್ಮೆಂಟ್ಸ್ ತರಬೇತಿ ಇತ್ಯಾದಿ.

ಸಾರಾಯಿ ಮಾರಾಟ ನಿಷೇಧದದಿಂದ ಉದ್ಯೋಗ ಕಳೆದುಕೊಂಡಿರುವವರಿಗೆ ಸ್ವಯಂ ಉದ್ಯೋಗಕ್ಕೆ ಆರ್ಥಿಕ ನೆರವು:

ಸರಾಯಿ ಮಾರಾಟ ನಿಷೇಧದಿಂದ ಉದ್ಯೋಗ ಕಳೆದುಕೊಂಡಿರುವ ಸರಾಯಿ ವೆಂಡರ್,ಮೂರ್ತೆದಾರರು, ಈಡೀಗ ಇತ್ಯಾದಿ ಸಮುದಾಯಗಳ ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಚಟುವಿಕೆ ಅನುಸಾರ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಲ್ಲಿ ಗರಿಷ್ಠ ರೂ.2.00 ಲಕ್ಷಗಳ ವರೆಗೆ  ಶೇ.4ರ ಬಡ್ಡಿದರದಲ್ಲಿ ಸಾಲ. ಇದರದಲ್ಲಿ ಶೇ.15ರಷ್ಟು ಸಹಾಯಧನವಾಗಿರುತ್ತದೆ.

ಅತ್ಯಂತ/ಅತಿ ಹಿಂದುಳಿದ ತಲೂಕುಗಳಲ್ಲಿ ಯುವಜನರ ಆರ್ಥಿಕ ಸಶಸ್ತಿಕರಣಕ್ಕಾಗಿ ಆರ್ಥಿಕ ನೆರವು:

ಡಾ.ಡಿ.ಎಂ.ನಂಜುಂಡಪ್ಪ ವರದಿಯಲ್ಲಿ ಗುರುತಿಸಿರುವ ಅತ್ಯಂತ ಹಿಂದುಳಿದ 39 ತಾಲೂಕುಗಳು ಹಾಗೂ ಅತಿ ಹಿಂದುಳಿದ 40 ತಾಲೂಕುಗಳು ಹೀಗೆ ಒಟ್ಟು 79 ತಾಲೂಕುಗಳಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಾಸಿಸುವ ವಿದ್ಯಾವಂತ ನಿರುದ್ಯೋಗಿಗಳ(ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ) 10 ಸದಸ್ಯರನ್ನೊಳಗೊಂಡ ಸ್ವ ಸಹಾಯ ಗುಂಪುಗಳಿಗೆ ರೂ.3.50 ಲಕ್ಷ ಆರ್ಥಿಕ ನೆರವು ನೀಡಲಾಗುವುದು. ಇದರದಲ್ಲಿ ಶೇ.30ರಷ್ಟು ಸಹಾಯಧನ ಉಳಿಕೆ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲವಾಗಿದ್ದು, ಅಭ್ಯರ್ಥಿಗಳು ಗರಿಷ್ಠ 35 ವರ್ಷ ವಯೋಮಿತಿಯಲ್ಲಿರಬೇಕು.

ಮಡಿವಾಳ ಸಮಾಜದ ಯುವಕರಿಕೆ ಸ್ವಯಂ ಉದ್ಯೋಗಕ್ಕೆ ಬ್ಯಾಂಕ್‍ಗಳ ಮೂಲಕ ಟ್ಯಾಕ್ಸಿಕೊಳ್ಳಲು ರೂ.5.00 ಲಕ್ಷಗಳವರೆಗೆ ಸಾಲ. ಇದರದಲ್ಲಿ ನಿಗಮದಿಂದ ಶೇ.20ರಷ್ಟು ಗರಿಷ್ಠ ರೂ.1.00 ಲಕ್ಷಗಳ ಮಾರ್ಜಿನ್ ಹಣ, ವಾರ್ಷಿಕ ಶೇ.4ರ ಬಡ್ಡಿ. ಉಳಿಕೆ ಮೊತ್ತ ಬ್ಯಾಂಕ್ ಪಾಲಿನ ಸಾಲವಾಗಿರುತ್ತದೆ.

ಬಿ.ಬಿ.ಎಂ.ಪಿ., ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಇತರೆ ಸರ್ಕಾರ ಸಂಸ್ಥೆಗಳು ಒದಗಿಸುವ ಸ್ಥಳಗಳಲ್ಲಿ ಲಾಂಡ್ರಿ ಘಟಕ ತೆರೆಯಲು ರೂ.1.00 ಲಕ್ಷಗಳ ವರೆಗೆ ವಾರ್ಷಿಕ ಶೇ.2ರ ಬಡ್ಡಿದರದಲ್ಲಿ ಆರ್ಥಿಕ ನೆರವು. ಇದರದಲ್ಲಿ ಶೇ.20ರಷ್ಟು ಸಹಾಯಧನವಾಗಿರುತ್ತದೆ.

ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ದಿ ನಿಗಮದ ಸಾಲ ಯೋಜನೆಗಳು:-
ಅವಧಿ ಸಾಲ ಯೋಜನೆಗಳು: ಕೃಷಿ ವಲಯ, ಸಣ್ಣವ್ಯಾಪಾರ, ಸೇವಾವಲಯ, ಸಾರಿಗೆ ವಲಯದಲ್ಲಿ ಆಟೋರಿಕ್ಷ/ಗೂ ಆಟೋರಿಕ್ಷ, ನ್ಯೂ ಸ್ವರ್ಣಿಮಾ ಮೈಕ್ರೋ ಪೈನಾನ್ಸ ವಲಯಗಳಲ್ಲಿ ಹಿಂದುಳಿದ ವರ್ಗಗಳ ಜನರು ಸ್ವಯಂ ಉದ್ಯೋಗ ಕೈಗೊಳ್ಳಲು ಆಯಾ ವಲಯದ ಅನುಮೊದಿತ ಘಟಕ ವೆಚ್ಚದ ಮಿತಿಗೊಳಪಟ್ಟು ಗರಿಷ್ಠ ರೂ 10.00 ಲಕ್ಷ ವರೆಗೆ ವಾರ್ಷಿಕ ಶೇಕಡ 6 ರಿಂದ 7ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುವುದು.

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಶೈಕ್ಷಣಿಕ ಸಾಲ:

ಇಂಜಿನಿಯರಿಂಗ್, ಮೆಡಿಕಲ್, ವೆಟರ್ನರಿ ಕಾನೂನು ಐ.ಸಿ.ಡಬ್ಲೂಎ, ಸಿ.ಎ, ಹೋಟೆಲ್ ಮ್ಯಾನೇಜ್‍ಮೆಂಟ್ ಇತ್ಯಾದಿ ವೃತ್ತಿಪರ ಕೋರ್ಸಗಳಲ್ಲಿ ವ್ಯಾಸಾಂಗ ಮಾಡುತ್ತಿದ್ದಲ್ಲಿ ವಾರ್ಷಿಕ ರೂ 2.50 ಲಕ್ಷಲಕ್ಷ ಅಥವಾ ಕೋರ್ಸ್ ನ ಅವಧಿಗೆ ಒಟ್ಟು ರೂ10.00 ಲಕ್ಷ ಸಾಲ ಮಂಜೂರು ಶೇ4ರ ಬಡ್ಡಿದರ ವಿದೇಶಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಕೋರ್ಸ್ ಅವಧಿಗೆ ರೂ 20.00 ಲಕ್ಷ ಸಾಲ ಶೇ4ರ ಬಡ್ಡಿದರ.

ಸ್ವಯಂ ಸಕ್ಷಮ ಯೋಜನೆಯಲ್ಲಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಕ್ಲಿನಿಕ್ ಸ್ಥಾಪಿಸಲು ವಕೀಲ ವೃತ್ತಿ ಆರಂಭಿಸಲು ಮೆಡಿಕಲ್ ಸ್ಟೋರ್ ಪ್ರಾರಂಭಿಸಲು ಇತ್ಯಾದಿ ಸ್ವಯಂ ಉದ್ಯೋಗ ಕೈಗೊಳ್ಳಲು ರೂ 10.00 ಲಕ್ಷಗಳವರೆಗೆ ಸಾಲ ಗರಿಷ್ಠ ಬಡ್ಡಿ ಶೇ 6 ರಿಂದ 7.

ಮಹಿಳಾ ಸಮೃದ್ಧಿ ಯೋಜನೆ:
ಹಿಂದುಳಿದ ವರ್ಗಗಳ ಮಹಿಳಾ ಸ್ವ ಸಹಾಯ ಗುಂಪುಗಳು/ಸ್ತ್ರೀ ಶಕ್ತಿ ಗುಂಪುಗಳು, ಸ್ವ ಶಕ್ತಿ ಗುಂಪುಗಳ ಮೂಲಕ ಆದಾಯ ತರುವಂತಹ ಆರ್ಥಿಕ ಉದ್ದೇಶಗಳಿಗೆ, ಘಟಕ ವೆಚ್ಚ ಆಧರಿಸಿ ಗರಿಷ್ಠ ಪ್ರತಿ ಫಲಾನುಭವಿಗೆ ರೂ.35,000/-ಗಳ ಸಾಲ ಶೇ. 4ರ ಬಡ್ಡಿ ದರ.

ಮೈಕ್ರೋ ಫೈನಾನ್ಸ್ ಸಾಲ ಯೋಜನೆ:
ಹಿಂದುಳಿದ ವರ್ಗಗಳ ಸ್ವ ಸಹಾಯ ಗುಂಪುಗಳು,ಸ್ತ್ರೀ ಶಕ್ತಿ,ಪುರುಷ ಗುಂಪುಗಳು, ಸ್ವ ಶಕ್ತಿ ಗುಂಪುಗಳ ಮೂಲಕ ಆದಾಯ ತರುವಂತಹ ಆರ್ಥಿಕ ಉದ್ದೇಶಗಳಿಗೆ, ಘಟಕ ವೆಚ್ಚ ಆಧರಿಸಿ ಗರಿಷ್ಠ ಪ್ರತಿ ಫಲಾನುಭವಿಗೆ ರೂ.35,000/-ಗಳ ಸಾಲ ಶೇ. 5ರ ಬಡ್ಡಿ ದರ.


ಮೇಲ್ಕಂಡ ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವ ಹಿಂದುಳಿದ ವರ್ಗದ ಫಲಾಪೇಕ್ಷಿಗಳು ಅವರು ವಾಸಿಸುತ್ತಿರುವ ಜಿಲ್ಲೆಯ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ ಅಥವಾ ಆಯಾ ತಾಲ್ಲೂಕಿನ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಛೇರಿಯಲ್ಲಿ ನಿಗದಿಪಡಿಸಿದ ಉಚಿತ ಅರ್ಜಿಗಳನ್ನು ದಿನಾಂಕ:31-05-2017ರೊಳಗೆ ಪಡೆಯುವುದು. ಹಾಗೂ ನಿಗಮದ ವೆಬ್‍ಸೈಟ್ http://www.karnataka.gov.in/dbcdc ಇಲ್ಲಿ ಪಡೆಯಬಹುದಾಗಿರುತ್ತದೆ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ/ದಾಖಲಾತಿಗಳೊಂದಿಗೆ ದಿನಾಂಕ: 9-6-2017ರೊಳಗೆ ಸಲ್ಲಿಸುವುದು. ದಿನಾಂಕ: 9-6-2017ರ ನಂತರ ಬರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ(ನಿ) ಹಾವೇರಿ ಜಿಲ್ಲಾ ಕಛೇರಿಯನ್ನು ಸಂಪರ್ಕಿಸಬಹುದೆಂದು ಡಿ,ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ(ನಿ)ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s