ಇಂದಿನಿಂದ ಮಾವು-ಹಲಸು ಪ್ರದರ್ಶನ, ಮಾರಾಟ ಮೇಳ

56d5fddf-42d4-4bec-974b-2d7b42e17d92ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ ಮೇ 5 ರಿಂದ 24 ರವರೆಗೆ ಹಮ್ಮಿಕೊಂಡಿರುವ ಮಾವು ಮತ್ತು ಹಲಸು ಪ್ರದರ್ಶನ ಮತ್ತು ಮಾರಾಟ ಮೇಳ – 2017 ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಫಾಟಿಸುವರು.

 

20 ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ರೈತರಿಂದ ಗ್ರಾಹಕರು ನೇರವಾಗಿ ಹಣ್ಣುಗಳನ್ನು ಖರೀದಿಸಬಹುದಾಗಿದೆ.  ಪ್ರತಿವರ್ಷ ಕೇವಲ ಲಾಲ್‍ಬಾಗ್‍ನಲ್ಲಿ ಮಾತ್ರ ನಡೆಯುತ್ತಿದ್ದ ಈ ಮೇಳವನ್ನು ಪ್ರಸ್ತುತ ವರ್ಷದಿಂದ ಬೆಂಗಳೂರಿನ ಹಲವು ಸ್ಥಳಗಳಲ್ಲಿ ಹಾಗೂ ಜಿಲ್ಲಾ ಕೇಂದ್ರಗಳಲ್ಲೂ ಸಹ ಹಮ್ಮಿಕೊಂಡಿರುವುದು ವಿಶೇಷವಾಗಿದೆ.

 

ನಗರದ ವಿವಿಧ ಆರು ಮೆಟ್ರೋ ಸ್ಟೇಷನ್, ಮುಖ್ಯ ಬಸ್ ನಿಲ್ದಾಣಗಳು ಸೇರಿದಂತೆ ಹಲವು ಮೈದಾನಗಳಲ್ಲಿ ಮಾವು ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದ್ದು ಒಟ್ಟು 236 ರೈತರು ಈ ಮೇಳದಲ್ಲಿ ಭಾಗವಹಿಸಲು ನೋಂದಾಯಿಸಿಕೊಂಡಿದ್ದಾರೆ.

 

ಗ್ರಾಹಕರಿಗೆ ಕಾರ್ಬೈಡ್ ಮುಕ್ತ ಹಾಗೂ ಸಹಜವಾಗಿ ಮಾಗಿದ ಹಣ್ಣುಗಳನ್ನು ರೈತರು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದು ಈ ಮೇಳದ ಮೂಲ ಉದ್ದೇಶವಾಗಿದೆ.   ಮಾವು ಮತ್ತು ಹಲಸಿನಲ್ಲಿರುವ ಉತ್ತಮ ತಳಿಗಳನ್ನು ವೀಕ್ಷಿಸುವ ಮತ್ತು ಸವಿಯುವ ಅವಕಾಶ ಕಲ್ಪಿಸುವುದರ ಜೊತೆಯಲ್ಲಿ ರೈತರಿಗೆ ಮಾವಿನ ಬೇಸಾಯದಿಂದ ಉತ್ತಮ ಬೆಲೆ ದೊರಕಿಸಿಕೊಡುವ ಉದ್ದೇಶವೇ ಈ ಮೇಳದ ಮುಖ್ಯ ಗುರಿಯಾಗಿದೆ.

 

ಹಲವು ಪ್ರದರ್ಶನ ಮತ್ತು ಮಾರಾಟ ಮಳಿಗೆಯ ಉದ್ಫಾಟನೆಯನ್ನು ತೋಟಗಾರಿಕೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರು ನೆರವೇರಿಸುವರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s