ಪೊಲೀಸ್ ಠಾಣೆಗಳು ಜನಸ್ನೇಹಿ ಆಗಬೇಕು : ಮುಖ್ಯಮಂತ್ರಿ ಸಿದ್ದರಾಮಯ್ಯ

4ಪ್ರತಿ ಪೊಲೀಸ್ ಠಾಣೆಯು ಜನಸ್ನೇಹಿಯಾಗಬೇಕು ಆಗ ಮಾತ್ರ ಪೊಲೀಸರ ಮೇಲೆ ಜನರಿಗೆ ವಿಶ್ವಾಸ ಬರಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.ಅವರು ಇಂದು ನಗರದ ವೈಟ್‍ಫೀಲ್ಡ್‍ ನಲ್ಲಿ ನೂತನವಾಗಿ ನಿರ್ಮಿಸಿರುವ ವೈಟ್‍ಫೀಲ್ಡ್ ಪೊಲೀಸ್ ಠಾಣೆ ಹಾಗೂ ಉಪ ಆಯುಕ್ತರ ಕಚೇರಿಯನ್ನು ಉದ್ಫಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಗೆ ಕಳೆದ ನಾಲ್ಕು ವರ್ಷಗಳಲ್ಲಿ ಸಿಬ್ಬಂದಿ ಮತ್ತಿತರ ಮೂಲ ಸೌಕರ್ಯಗಳನ್ನು ಒದಗಿಸಿದೆ. ಅದಕ್ಕೆ ತಕ್ಕಂತೆ ಪೊಲೀಸ್ ಠಾಣೆಗಳಲ್ಲೂ ಸಹ ಗುಣತ್ಮಾಕ ಬದಲಾವಣೆಗಳೂ ಆಗಬೇಕು ಎಂದು ಅವರು ಆಶಿಸಿದರು. ಪೊಲೀಸರು ಇರುವುದರಿಂದಾಗಿಯೇ ಬಹಳಷ್ಟು ಮಂದಿ ಸಜ್ಜನರಾಗಿದ್ದಾರೆ ಎಂದು ಜನರು ಆಡಿಕೊಳ್ಳುವಂತಾಗಬೇಕು ಎಂದು ಬಯಸಿದರು.

5.jpgಭೂ ವ್ಯವಹಾರಗಳಿಗೆ ಸಂಬಂಧಿಸಿದ ಅಪರಾಧ ಪ್ರಕರಣಗಳಲ್ಲಿ ಪೊಲೀಸರು ನಿಷ್ಕ್ರಿಯರಾಗಿದ್ದಾರೆಂದು ಆರೋಪ ಕೇಳಿ ಬಂದಿದೆ. ಪೊಲೀಸರು ಎಚ್ಚರಿಕೆವಹಿಸಿ ಕಾನೂನಿನ್ವಯ ಕಾಯಾ ವಾಚಾ ಮನಸಾ ಯಾವುದೇ ರಾಗದ್ವೇಷವಿಲ್ಲದೇ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.ಅಪರಾಧಿಗಳನ್ನು ಪತ್ತೆ ಹಚ್ಚುವುದು ಮಾತ್ರವಲ್ಲ, ಅಪರಾಧ ನಡೆಯದಂತೆ ನೋಡಿಕೊಳ್ಳುವುದೂ ಅಷ್ಟೇ ಮುಖ್ಯ ಎಂದು ನುಡಿದರು. ಜನಸಂಖ್ಯೆ ಹೆಚ್ಚಾದಂತೆ ಅಪರಾಧಗಳು ಹೆಚ್ಚಾಗುತ್ತವೆ. ಜನರ ಸುರಕ್ಷತೆಗಾಗಿ ಪೊಲೀಸರು ತ್ವರಿತವಾಗಿ ಸ್ಪಂದಿಸುವಲ್ಲಿ ತಂತ್ರಜ್ಞಾನದ ಪಾತ್ರ ಬಹುಮುಖ್ಯ ಎಂದು ಅವರು ನುಡಿದರು.
ಸಿಸಿಟಿಎಸ್ ಅಳವಡಿಕೆ:

parameshwar-22ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಮಾತನಾಡಿ ರಾಜ್ಯದಲ್ಲಿ 1500 ಪೊಲೀಸ್‍ಠಾಣೆಗಳಿವೆ. ತಂತ್ರಜ್ಞಾನವನ್ನು ಜನರ ಉಪಯೋಗಕ್ಕೆ ಬಳಸಿಕೊಳ್ಳಬೇಕು. ಆಧುನಿಕತೆಯನ್ನು ಪೊಲೀಸ್ ವ್ಯವಸ್ಥೆಯಲ್ಲಿ ಜಾರಿಗೆ ತರಬೇಕು. ಕ್ರೈಮ್ ಕ್ರಿಮಿನಲ್ ಟ್ರಾಕಿಂಗ್ ಸಿಸ್ಟಮ್(ಸಿಸಿಟಿಎಸ್)ಅನ್ನು ಎಲ್ಲ ಪೊಲೀಸ್ ಠಾಣೆಗಳಲ್ಲಿ ಅವಳಡಿಸಲಾಗುವುದು ಎಂದರು.
7ಸಾವಿರ ಕೋಟಿ ಅನುದಾನ:
ಬೆಂಗಳೂರಿಗೆ ವಿಶ್ವದ ಅತ್ಯಂತ ಕ್ರಿಯಾಶೀಲ ನಗರ ಎಂಬ ಹೆಗ್ಗಳಿಕೆಗೆ ಸಿಕ್ಕಿದೆ. ಅದೇ ರೀತಿ ಜನಸಾಮಾನ್ಯರ ಪಾಲಿಗೆ ಇದು ಅತ್ಯಂತ ಸುರಕ್ಷಿತ ನಗರವಾಗಬೇಕು. ಸಂಚಾರದಟ್ಟಣೆ ಹೆಚ್ಚಿದೆ. ದಿಲ್ಲಿ ಹೊರತುಪಡಿಸಿದರೆ ಅತೀ ಹೆಚ್ಚು ವಾಹನಗಳನ್ನು ಹೊಂದಿರುವ ನಗರ ಬೆಂಗಳೂರು. ರಾಜ್ಯ ಸರಕಾರವು ಬೆಂಗಳೂರು ಸರ್ವಾಂಗೀಣ ಅಭಿವೃದ್ಧಿಗೆ ಪ್ರಸಕ್ತ ಸಾಲಿನಲ್ಲಿ 7 ಸಾವಿರ ಕೋಟಿ ರೂ.ಗಳ ಅನುದಾನ ಒದಗಿಸಿದೆ ಎಂದು ಅವರು ಹೇಳಿದರು.
11ಸಾವಿರ ಪೊಲೀಸ್ ವಸತಿ:

ಮೆಟ್ರೋ 1ನೆ ಹಂತ ಪೂರ್ಣಗೊಂಡಿದ್ದು, ಐದು ಲಕ್ಷ ಜನರಿಗೆ ಉಪಯೋಗವಾಗುತ್ತಿದೆ. ಎರಡನೆ ಹಂತ ಪೂರ್ಣಗೊಂಡ ನಂತರ 50 ಲಕ್ಷ ಜನರಿಗೆ ಅನುಕೂಲವಾಗುತ್ತದೆ.ಆಗ ಸಂಚಾರ ದಟ್ಟಣೆ ಸಮಸ್ಯೆ ಪರಿಹಾರವಾಗಬಹುದು. ಬೆಂಗಳೂರಿನಲ್ಲಿ 100 ಪೊಲೀಸ್ ಠಾಣೆಗಳಿವೆ. 21 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. 1500 ಜನ ಪೊಲೀಸ್ ಇನ್ಸ್‍ಪೆಕ್ಟರ್‍ ಗಳ ನೇಮಕ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಕಳೆದ ಮೂರು ವರ್ಷಗಳಲ್ಲಿ ಪೊಲೀಸರಿಗೆ 11 ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ. ಪೊಲೀಸ್ ಸಹಾಯವಾಣಿ 100 ಅನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, 15 ಸೆಕೆಂಡುಗಳಲ್ಲಿ ಕರೆ ಮಾಡುವವರಿಗೆ ಸ್ಪಂದನೆ ಸಿಗಲಿದೆ. ಇನ್ನು 15 ದಿನಗಳಲ್ಲಿ ಸುಧಾರಿತ ವ್ಯವಸ್ಥೆಯನ್ನು ಲೋರ್ಕಾಪಣೆಗೊಳಿಸಲಾಗುವುದು ಎಂದು ಪರಮೇಶ್ವರ್ ಹೇಳಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s