ನೀರು ಮಾರಾಟ ದಂಧೆಗೆ ಕಡಿವಾಣ : ಸಚಿವ ಯು ಟಿ ಖಾದರ್

ದೊಡ್ಡ ದೊಡ್ಡ ಹೋಟೆಲ್, ಮಾಲ್ , ಸೂಪರ್ ಮಾರ್ಕೆಟ್, ಮಲ್ಟಿಪ್ಲೆಕ್ಸ್ ಗಳಲ್ಲಿ ಕುಡಿಯುವ ನೀರಿಗಾಗಿ ಹೆಚ್ಚಿನ ಬೆಲೆ ಸುಲಿಯುವವರಿಗೆ ರಾಜ್ಯ ಸರ್ಕಾರದ ತಂಡ ಬರೆ ಮುಟ್ಟಿಸಿದೆ. ಬೆಂಗಳೂರಿನ 8 ಕಡೆ ಮತ್ತು ರಾಜ್ಯದ ಇತರೆಡೆ ಒಟ್ಟು 39 ತಂಡಗಳು 188 ಕಡೆ ದಾಳಿ ನಡೆಸಿ ಅವ್ಯವಹಾರಕ್ಕೆ ಬಿಸಿ ಮುಟ್ಟಿಸಿದೆ. ವಿಕಾಸ ಸೌಧದಲ್ಲಿ ಈ ಕುರಿತು ಮಾತನಾಡಿದ ಆಹಾರ ಸಚಿವ ಯು ಟಿ ಖಾದರ್ ಸ್ಪಷ್ಟಪಡಿಸಿದ ಸುದ್ದಿಯ ವಿವರ ಇಲ್ಲಿದೆ.

ಜನರಿಗೆ ಅವಶ್ಯಕವಾದ ಕುಡಿಯುವ ನೀರನ್ನು ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಹೆಸರಿನಲ್ಲಿ  ಮಾರಾಟ ಮಾಡಲಾಗುತ್ತಿದೆ.ಆದರೆ ಇದರಲ್ಲಿಸಾಕಷ್ಟು ಅವ್ಯವಹಾರ ನಡೆಯುತ್ತಿದೆ. ಬೆಂಗಳೂರಿನಲ್ಲಿ 8 ಮತ್ತು ರಾಜ್ಯದ ವಿವಿದೆಡೆ 39 ತಂಡಗಳು ಮಾಲ್,ಸೂಪರ್ ಮಾರ್ಕೆಟ್,ಮಲ್ಟಿಪ್ಲೆಕ್ಸ್ ಗಳ ಮೇಲೆ ಏಕಕಾಲದಲ್ಲಿ 188 ಕಡೆ ದಾಳಿ ನಡೆಸಿ ಒಟ್ಟು 46 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಆಹಾರ ಸಚಿವಯು.ಟಿ. ಖಾದರ್ ಅವರು ತಿಳಿಸಿದರು.

ವಿಕಾಸ ಸೌಧದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಚಿವರು ಏರ್‍ಪೋರ್ಟ್, ದೊಡ್ಡ ಹೋಟೆಲ್, ಮಾಲ್ ಇತ್ಯಾದಿಗಳಲ್ಲಿ ಒಂದಕ್ಕೆಎರಡರಷ್ಟು ಹಣ ಪಡೆದು ನೀರು ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಕುಡಿಯುವ ನೀರು ನೆಪದಲ್ಲಿ ಹಣ ಸುಲಿಗೆಮಾಡಬಾರದು ಹಾಗೂ ಸಿನಿಮಾ, ಹೋಟೆಲ್ ಯಾವುದೇ ಇರಲಿ ಎಲ್ಲೂ ಸಹ ಕುಡಿಯುವ ನೀರನ್ನು ತೆಗೆದುಕೊಂಡು ಹೋಗುವುದನ್ನುತಡೆಯಬಾರದು, ತಡೆದವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದರು.

ಕುಡಿಯುವ ನೀರನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡಿ ಮೊದಲ ಬಾರಿ ಸಿಕ್ಕಿಬಿದ್ದರೆ ರೂ. 2000 ದಂಡ, ಎರಡನೇ ಬಾರಿ ಸಿಕ್ಕಿಬಿದ್ದರೆ ಆರುತಿಂಗಳ ಜೈಲುವಾಸ ಎಂದು ಎಚ್ಚರಿಕೆ ನೀಡಿದ ಸಚಿವರು ಬೆಂಗಳೂರಿನ ಎಲ್ಲಾ ಮಾಲ್‍ಗಳ ಮೇಲೂ ದಾಳಿ ನಡೆಸಲಾಗಿದೆ.  ಸ್ಟಾರ್ ಹೋಟೆಲ್‍ಗಳ ಮೇಲೂ ಸಧ್ಯದಲ್ಲೇ ದಾಳಿ ನಡೆಸಲಾಗುವುದು ಎಂದರು.

ಬೆಂಗಳೂರಿನಲ್ಲಿ ಒಟ್ಟು 15 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಸೇವಾ ಶುಲ್ಕ ವಿಧಿಸಿ ಗ್ರಾಹಕರನ್ನು ಸುಲಿಗೆ ಮಾಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿತ್ತು.  ಹೀಗಾಗಿ ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳ ಮಾಲೀಕರನ್ನು ಕರೆದು ಸಭೆ ನಡೆಸಿ ಈ ಬಗ್ಗೆ ತಿಳುವಳಿಕೆ ನೀಡಿದ್ದೇವೆ.  ಕೇಂದ್ರ ಗ್ರಾಹಕರನೀತಿ ಪ್ರಕಾರ ಸೇವಾಶುಲ್ಕ ಗ್ರಾಹಕರಿಂದ ಪಡೆಯುವಂತಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಸಚಿವರು ತಿಳಿಸಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s