ಕೊಪ್ಪಳದಲ್ಲಿ ಭಗೀರಥ ಜಯಂತಿ ಆಚರಣೆ

unnamed (1)

ಭಗೀರಥರ ಸತತ ಪ್ರಯತ್ನ ಹಾಗೂ ತಪಸ್ಸಿನ ಫಲದಿಂದ ಭೂಲೋಕದ ಜೀವರಾಶಿಗೆ ಜೀವಜಲವಾದ ನೀರು ದೊರೆಯುವಂತಾಯಿತು ಎಂದು ಜಿಲ್ಲಾ ಪಂಚಾಯತಿ ಸದಸ್ಯ ರಾಜಶೇಖರ ಹಿಟ್ನಾಳ ಅವರು ಹೇಳಿದರು.

ಕೊಪ್ಪಳ ನಗರದ ಶಾದಿಮಹಲ್‍ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಭಗೀರಥ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

unnamed (2)ಶಿಕ್ಷಣ ಅವಶ್ಯಕ:

ಸೋಲಿನಿಂದ ಧೃತಿಗೆಡದೆ, ಸತತ ಪ್ರಯತ್ನ ಮಾಡಬೇಕು. ಪ್ರಯತ್ನಕ್ಕೆ ಇನ್ನೊಂದು ಹೆಸರೇ ಭಗೀರಥರು. ಅವರ ಸತತ ಯತ್ನದಿಂದ, ತಪಸ್ಸಿನಿಂದ, ಭೂಲೋಕದ ಜೀವರಾಶಿಗೆ ನೀರು ದೊರೆಯುವಂತಾಯಿತು. ಭಗೀರಥರ ತಪಸ್ಸಿನ ಫಲವಾಗಿ ಹರಿದು ಬಂದ ಗಂಗೆಯನ್ನು ಭಾಗಿರಥಿ ಎಂದೇ ಕರೆಯುತ್ತಾರೆ. ಉಪ್ಪಾರ ಸಮಾಜ ಇಂದು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಶಿಕ್ಷಣ ಅತ್ಯವಶ್ಯಕವಾಗಿದೆ. ಸಮಾಜದ ಜನತೆ ಶಿಕ್ಷಣ ಪಡೆದು ಪ್ರಜ್ಞಾವಂತ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸಬೇಕು. ಸಮಾಜದ ಏಳಿಗೆಗಾಗಿ ಸರ್ಕಾರ ಉಪ್ಪಾರ ಅಭಿವೃದ್ಧಿ ನಿಗಮ ಪ್ರಾರಂಭಕ್ಕೆ ಕ್ರಮ ಕೈಗೊಂಡಿದೆ. ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು, ಸಮಾಜ ಅಭಿವೃದ್ಧಿಯತ್ತ ಸಾಗಬೇಕು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯರಾದ ರಾಜಶೇಖರ ಹಿಟ್ನಾಳ್ ಹೇಳಿದರು.

unnamed (3)ವಿಶೇಷ ಉಪನ್ಯಾಸ:

ತಳಕಲ್ ಕಾಲೇಜು ಉಪನ್ಯಾಸಕ ಫಕಿರಪ್ಪ ವಜ್ರಬಂಡಿ ಅವರು ವಿಶೇಷ ಉಪನ್ಯಾಸ ನೀಡಿ, ರಾಜ್ಯದಲ್ಲಿ ವಿವಿಧ ದಾರ್ಶನಿಕರ ಕುರಿತು ಸಂಶೋಧನೆಗಾಗಿ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಪೀಠ ಸ್ಥಾಪನೆಯಾಗಿವೆ. ಅದೇ ರೀತಿ ಭಗೀರಥರ ಕುರಿತು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪನೆಯಾಗಬೇಕು. ಹೀಗಾದಾಗ ಮಾತ್ರ ಸಮಗ್ರ ವಿವರ ದೊರೆಯಲು ಸಾಧ್ಯವಾಗಲಿದೆ ಕರ್ನಾಟಕದಲ್ಲಿ ಸಾಮಾನ್ಯವಾಗಿ ಉಪ್ಪಾರರು ಎಂದು ಕರೆಯಲ್ಪಡುವ ಭಗೀರಥರ ಪ್ರಾಚೀನ ಕಸುಬು ಉಪ್ಪು ತಯಾರಿಸುವುದಾಗಿತ್ತು. ಉಪ್ಪು ತಯಾರಿಸುವುದರಿಂದಲೇ ಉಪ್ಪಾರರು ಎಂದು ಇವರು ಚಿರಪರಿಚಿತರು. ಬ್ರಿಟಿಷರು ಹೆಚ್ಚಿನ ಸುಂಕ ವಿಧಿಸುವ ಮೂಲಕ ಉಪ್ಪಿನ ಮೇಲೆ ನಿಯಂತ್ರಣ ಹೇರಿದರು. ಇದನ್ನು ವಿರೋಧಿಸಿ ಅಂದು ಮಹಾತ್ಮಾ ಗಾಂಧೀಜಿ ಅವರು ಕೂಡಾ ದಂಡಿ ಉಪ್ಪಿನ ಸತ್ಯಾಗ್ರಹ ನಡೆಸಿದ್ದರು ಎಂಬುದನ್ನು ನಾವು ಇಂದು ಸ್ಮರಿಸಬಹುದಾಗಿದೆ ಎಂದರು.unnamed (5)

ಸದಾಶಿವ ಪಾಟೀಲ್ ಅವರು ನಾಡಗೀತೆ ಮತ್ತು ರೈತ ಗೀತೆ ಪ್ರಸ್ತುತಪಡಿಸಿದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಭಗೀರಥರ ಭಾವಚಿತ್ರದ ಮೆರವಣಿಗೆಗೆ ನಗರದ ಸಿರಸಪ್ಪಯ್ಯ ಮಠ ಆವರಣದಲ್ಲಿ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ್ ಅವರು ಚಾಲನೆ ನೀಡಿದರು. ಜಿ.ಪಂ. ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಪೂರ್ಣಕುಂಭ ಹೊತ್ತ ಮಹಿಳೆಯರು, ವಿವಿಧ ಕಲಾತಂಡಗಳು ಭಾಗವಹಿಸಿ, ಮೆರವಣಿಗೆಗೆ ಮೆರಗು ತಂದರು.unnamed (6)

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s