ಕಲಾಪ್ರದರ್ಶನಕ್ಕೆ ಅರ್ಜಿ ಆಹ್ವಾನ

1ಕರ್ನಾಟಕ ಲಲಿತಕಲಾ ಅಕಾಡೆಮಿಯು 2017-18 ನೇ ಸಾಲಿನಲ್ಲಿ 46ನೇ ವಾರ್ಷಿಕ ಕಲಾಪ್ರದರ್ಶನ ಹಾಗೂ ಸುವರ್ಣ-ಕಲಾಪುರಸ್ಕಾರ ವಿಶೇಷ ಬಹುಮಾನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ಕರ್ನಾಟಕದ ನಿವಾಸಿಗಳಾಗಿರುವ ಅಥವಾ ಕಳೆದ ಐದು ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿರುವ ಕಲಾವಿದರು ಈ ಕಲಾಪ್ರದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಈ ಕಲಾ ಪ್ರದರ್ಶನಕ್ಕೆ ತೀರ್ಪುಗಾರರಿಂದ 46ನೇ ವಾರ್ಷಿಕ ಕಲಾಪ್ರದರ್ಶನ ಬಹುಮಾನಕ್ಕೆ ಆಯ್ಕೆ ಮಾಡಿದ ಒಟ್ಟು ಹತ್ತು ಕಲಾಕೃತಿಗಳಿಗೆ ತಲಾ ರೂ. 25,000/- ನಗದು ಬಹುಮಾನ, ಪ್ರಶಸ್ತಿ ಪತ್ರ, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು.
ಸುವರ್ಣ-ಸಂಭ್ರಮ-ಕಲಾ ಪುರಸ್ಕಾರÀ ಬಹುಮಾನಕ್ಕೆ ಆಯ್ಕೆ ಮಾಡಿದ 10 ಕಲಾವಿದರಿಗೆ ರೂ 20,000 ನಗದು ಬಹುಮಾನ, ಪ್ರಶಸ್ತಿ ಪತ್ರ, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು.
ಬಹುಮಾನ ಆಯ್ಕೆಯಲ್ಲಿ ತೀರ್ಪುಗಾರರದೇ ಅಂತಿಮ ತೀರ್ಮಾನವಾಗಿರುತ್ತದೆÀ. ಈ ಕಲಾ ಪ್ರದರ್ಶನದಲ್ಲಿ ಭಾಗವಹಿಸಲಿಚ್ಚಿಸುವ ಕಲಾವಿದರು ತಮ್ಮ್ಮ ಕಲಾಕೃತಿಗಳ ಛಾಯಾಚಿತ್ರಗಳನ್ನು ನಿಗದಿತ ಅರ್ಜಿಯೊಂದಿಗೆ ಸಲ್ಲಿಸಬೇಕು. 2016 ರ ಇಸವಿಗಿಂತ ಹಿಂದೆ ರಚಿತವಾದ ಕಲಾಕೃತಿಗಳಾಗಲೀ, ಈಗಾಗಲೇ ಬೇರೆ ಕಲಾಪ್ರದರ್ಶನದಲ್ಲಿ ಬಹುಮಾನ ಪಡೆದಿರುವ ಕಲಾಕೃತಿಗಳನ್ನಾಗಲೀ, ಅಕಾಡೆಮಿ ಬಹುಮಾನಕ್ಕಾಗಿ ಪರಿಗಣಿಸುವುದಿಲ್ಲ. ಆಯ್ಕೆ ಸಮಿತಿಯು ಮೂಲಕೃತಿಗಳ ಛಾಯಾಚಿತ್ರ ಆಧರಿಸಿ ಆಯ್ಕೆ ಮಾಡಿದ ನಂತರ ಮೂಲಕೃತಿಗಳನ್ನು ಕಳಿಸಬೇಕಾಗುತ್ತದೆ.
ಈ ಕಲಾಕೃತಿಗಳು 3 x 3 ಅಡಿ ಅಳತೆಯ ಒಳಗಿರಬೇಕು. ಕರ್ನಾಟಕ ಲಲಿತಕಲಾ ಅಕಾಡೆಮಿಗೆ ಅರ್ಜಿ ಸಲ್ಲಿಸಲು ಮೇ 22 ಕೊನೆಯ ದಿನವಾಗಿರುತ್ತದೆ. (ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ)
ಅರ್ಜಿಯನ್ನು ರಿಜಿಸ್ಟ್ರ್ರಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು – 560 002, ಇಲ್ಲಿ ಖುದ್ದಾಗಿ ಅಥವಾ ರೂ 10/- ಗಳ ಅಂಚೆ ಚೀಟಿ ಲಗತ್ತಿಸಿದ ಸ್ವ-ವಿಳಾಸವುಳ್ಳ (ದೂರವಾಣಿ ಸಂಖ್ಯೆಯೊಂದಿಗೆ) ಲಕೋಟೆಯನ್ನು ಕಳುಹಿಸಿ ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 080 – 22480297 ಇವರನ್ನು ಸಂಪರ್ಕಿಸಬಹುದಾಗಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s