ಸಿಂಧೂ ತಾಯಿ ಸಪ್ಕಾಳ್ ಗೆ ಒಲಿದ “ಬಸವ ರಾಷ್ಟ್ರೀಯ ಪುರಸ್ಕಾರ”

17884106_1545769368767081_4956893410591812456_n2016ನೇ ಸಾಲಿನ ಬಸವ ರಾಷ್ಟ್ರೀಯ ಪುರಸ್ಕಾರವನ್ನು ಮಹಾರಾಷ್ಟ್ರದ ಸಮಾಜ ಸೇವಕಿ ಸಿಂಧೂ ತಾಯಿ ಸಪ್ಕಾಳ್ ಅವರಿಗೆ ಘೋಷಿಸಲಾಗಿದೆ. ಪ್ರಶಸ್ತಿಯನ್ನು ಮೇ 3 ರಂದು  ಮುಖ್ಯಮಂತ್ರಿ  ಸಿದ್ದರಾಮಯ್ಯ, ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ  ಪ್ರದಾನ ಮಾಡಲಿದ್ದಾರೆ ಎಂದು ಸಚಿವರಾದ  ಉಮಾಶ್ರೀ ಅವರು ಹೇಳಿದ್ದಾರೆ

 

ಅನಾಥ ಮಕ್ಕಳ ಅಭ್ಯುಧಯಕ್ಕಾಗಿ ಶ್ರಮಿಸುತ್ತಿರುವ ಸಿಂಧೂ ತಾಯಿ ಅವರ ಸೇವೆಯನ್ನು ಗುರುತಿಸಿ ಇದುವರೆಗೂ ರಾಷ್ಟ್ರ ಮಟ್ಟದ 273 ಪ್ರಶಸ್ತಿಗಳು ಅವರಿಗೆ ಲಭ್ಯವಾಗಿದೆ. ಈ ಎಲ್ಲಾ ಪ್ರಶಸ್ತಿಗಳ ಮೊತ್ತವನ್ನು ಸನ್ಮತಿ ಬಾಲ ನಿಕೇತನ ಸಂಸ್ಥೆಯ ಮೂಲಕ ಅನಾಥ ಮಕ್ಕಳ ಕಲ್ಯಾಣಕ್ಕಾಗಿ ಬಳಸುತ್ತಿದ್ದಾರೆ. ಪ್ರಸ್ತುತ 300 ಮಕ್ಕಳನ್ನು ಅವರು ಪೋಷಿಸುತ್ತಿದ್ದಾರೆ. ಇವರ ಬಗ್ಗೆ ಚಲನಚಿತ್ರ ಕೂಡ ನಿರ್ಮಾಣವಾಗಿದೆ. ಈ ಪ್ರಶಸ್ತಿಯನ್ನು ನ್ಯಾ ಎ ಜೆ ಸದಾಶಿವ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ಈ ಪ್ರಶಸ್ತಿಯು 10.00 ಲಕ್ಷ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ಸಚಿವೆ ಉಮಾಶ್ರೀ ಹೇಳಿದ್ದಾರೆ.

 

2016ನೇ ಸಾಲಿನ ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿಯನ್ನು ಚನ್ನೈನ ಪ್ರಸಿದ್ದ ವಿದ್ವಾನ್  ಟಿ.ಹೆಚ್.ವಿನಾಯಕ ರಾಂ ಅವರಿಗೆ ನೀಡಲಾಗುತ್ತಿದೆ. ಈ ಪ್ರಶಸ್ತಿಯು 10.00 ಲಕ್ಷ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ.

 

ಉಳಿದಂತೆ ರಾಜ್ಯ ಮಟ್ಟದ ಪ್ರಶಸ್ತಿಗಳ ವಿವರ ಈ ಕೆಳಕಂಡಂತಿದೆ.

17862340_1545769365433748_3110597487524015872_nಬಿ ವಿ ಕಾರಂತ ಪ್ರಶಸ್ತಿ       :               ಶ್ರೀನಿವಾಸ ಜಿ ಕಪ್ಪಣ್ಣ

ಡಾ ಗುಬ್ಬಿ ವೀರಣ್ಣ ಪ್ರಶಸ್ತಿ   :               ಚಿಂದೋಡಿ ಶ್ರೀಕಂಠೇಶ್

ಸಂತ ಶಿಶುನಾಳ ಪ್ರಶಸ್ತಿ     :               ವೈ.ಕೆ ಮುದ್ದುಕೃಷ್ಣ

ನಿಜಗುಣಪುರಂದರ ಪ್ರಶಸ್ತಿ   :               ಪಂ.ಗಣಪತಿ ಭಟ್ ಹಾಸಣಗಿ

ಶಾಂತಲಾ ನಾಟ್ಯ ಪ್ರಶಸ್ತಿ   :               ಉಷಾ ದಾತಾರ್

ಪ್ರೊ ಕೆ ಜಿ ಕುಂದಣಗಾರ

ಗಡಿನಾಡ ಸಾಹಿತ್ಯ ಪ್ರಶಸ್ತಿ                   ಹಸನ್ ನಯೀಂ ಸುರಕೋಡ

ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ    ಶಾಂತಿ ನಾಯಕ

17904132_1545769372100414_7601309817046822446_nಜಾನಪದ ಶ್ರೀ                                     ಲಲಿತಾ ರಾಚಪ್ಪ ಪಾತ್ರೋಟ

ಕುಮಾರವ್ಯಾಸ ಪ್ರಶಸ್ತಿ                      ಎನ್. ಆರ್. ಜ್ಞಾನಮೂರ್ತಿ

ಜಕಣಾಚಾರಿ ಪ್ರಶಸ್ತಿ                         ವೈ. ಯಂಕಪ್ಪ

ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ                 ಮಹಾವೀರ ರಾಯಪ್ಪ ಬಾಳಿಕಾಯಿ

ಸಂಗೊಳ್ಳಿ ರಾಯಣ್ಣ ಪ್ರಶಸ್ತಿ                  ಡಾ. ಚನ್ನಣ್ಣ ವಾಲೀಕಾರ

 

ಈ ಎಲ್ಲಾ ಪ್ರಶಸ್ತಿಗಳು ತಲಾ 3.00 ಲಕ್ಷ ರೂ ನಗದು, ಸ್ಮರಣಿಕೆ ಹಾಗೂ ಅಭಿನಂದನಾ ಪತ್ರಗಳನ್ನು ಒಳಗೊಂಡಿವೆ. ಈ ಎಲ್ಲಾ ಪ್ರಶಸ್ತಿಗಳನ್ನು ಮೇ 3ರಂದು ಬುಧವಾರ ಸಂಜೆ 7.00 ಗಂಟೆಗೆ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಿ ಗೌರವಿಸಲಿದ್ದಾರೆ ಎಂದು ಸಚಿವರಾದ ಉಮಾಶ್ರೀ ಅವರು ಹೇಳಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s