ರಾಜ್ಯದೆಲ್ಲೆಡೆ ಸಂಭ್ರಮದ ಬಸವ ಜಯಂತಿ

 

ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ರಾಜ್ಯಾಧ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಗುತ್ತಿದೆ. 12ನೆ ಶತಮಾನದಲ್ಲಿಯೇ ಸಮಾನತೆಯ ಚಳುವಳಿಗೆ ಕಿಡಿ ಹಚ್ಚಿದ ಬಸವಣ್ಣನವರು ತಮ್ಮ ವಚನಗಳ ಮೂಲಕ ದೊಡ್ಡ ಸಾಮಾಜಿಕ ಕ್ರಾಂತಿಯನ್ನೇ ಮಾಡಿದರು. ಮೂಡನಂಬಿಕೆ, ಕಂದಾಚಾರ ಹಾಗೂ ಜಾತಿ ಪದ್ದತಿಯ ವಿರುದ್ದ ಸಮರವನ್ನು ಸಾರಿದರು. ಬಸವೇಶ್ವರರ ಜಯಂತಿಯನ್ನು ರಾಜ್ಯದಾಧ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತಿದೆ.

 

ತುಮಕೂರು:

ತುಮಕೂರು ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜರುಗಿದ ಬಸವೇಶ್ವರ ಜಯತಿಯನ್ನು ಸಚಿವರಾದ ಟಿ ಬಿ ಜಯಚಂದ್ರ ಅವರು ಬಸವೇಶ್ವರರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಚಿವರ ಜೊತೆ ಗಣ್ಯರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಚಿತ್ರ ಸಂಪುಟವನ್ನು ಇಲ್ಲಿ ಕಾಣಬಹುದು.

d827be7b-3748-4127-8374-33854ec4ec47

B

ಹಾವೇರಿ:

ಹಾವೇರಿಯ ನಗರದಲ್ಲಿ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಚಿವರಾದ ರುದ್ರಪ್ಪ ಲಮಾಣಿ ಗೌರವ ಸಲ್ಲಿಸಿದರು ಹಾಗೂ ಜ್ಯೋತಿ ಬೆಳಗುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಸಚಿವರ ಜೊತೆ ಗಣ್ಯರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.ಈ ಕುರಿತ ಛಾಯಾ ಸಂಪುಟವನ್ನು ಇಲ್ಲಿ ನೋಡ ಬಹುದು.

Rudrappa Lamani

Haveri

ಹಾಸನ:

ಹಾಸನ ಜಿಲ್ಲಾಡಳಿತ ಆಯೋಜಿಸಿದ್ದ ಬಸವೇಶ್ವರ ಜಯತಿಯಲ್ಲಿ ಬಸವೇಶ್ವರರ ಭಾವಚಿತ್ರವನ್ನು ಹೊತ್ತ ಎತ್ತಿನ ಬಂಡಿಯನ್ನು ಸಚಿವರಾದ ಎ ಮಂಜು ಎಳೆಯುವ ಮೂಲಕ ಬಸವೇಶ್ವರ ಜಯಂತಿಯ ಮೆರವಣಿಗೆಗೆ ಚಾಲನೆ ನೀಡಿದರು. ಸಚಿವರ ಜೊತೆ ಸ್ಥಳೀಯ ಶಾಸಕರು, ಗಣ್ಯರು ಹಾಗೂ ಜಿಲ್ಲಾಡಳಿತ ಪಾಲ್ಗೊಂಡಿತ್ತು. ಈ ಸಂದರ್ಭದ ಚಿತ್ರ ಸಂಪುಟ ಇಲ್ಲಿದೆ.

Hassan

Hassan2

Hassan1

ಬೆಳಗಾವಿ:

ಬೆಳಗಾವಿ ನಗರದ ಬಸವೇಶ್ವರ ಉದ್ಯಾನವನದಲ್ಲಿ ಜಿಲ್ಲಾಡಳಿತ ಬಸವಜಯಂತಿಯನ್ನು ಆಯೋಜಿಸಿತ್ತು. ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಸವೇಶ್ವರರ ಕಾಯಕವೇ ಕೈಲಾಸ ಎಂಬ ನಾಣ್ಣುಡಿ ಯಾವತ್ತಿಗೂ ಅಜರಾಮರ, ಅವರ ವಚನ ಸಾರದಂತೆ ಸಮಾಜ ನಡೆದು ಕೊಂಡರೆ ಸುಬೀಕ್ಷವಾಗಿರುತ್ತದೆ, ಬಸವಣ್ಣನವರ ವಿಚಾರಧಾರೆಗಳು ಸಮಾಜಕ್ಕೆ ಯಾವತ್ತಿಗೂ ಬೆಳಕಿನ ಕಿಡಿಯಾಗಿವೆ ಎಂದು ಸಚಿವರು ತಿಳಿಸಿದರು. ಸಚಿವರ ಜೊತೆ ಸ್ಥಳೀಯ ಜನ ಪ್ರತಿನಿಧಿಗಳು, ಗಣ್ಯರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದ ಛಾಯಾ ಸಂಪುಟ ಇಲ್ಲಿದೆ.

ee4d0794-181c-4922-8abc-d563993b514a

Belgaum

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s