ಪಡಿತರ ಚೀಟಿ ಪಡೆಯುವಿಕೆ ಇನ್ನು ಪಾಸ್ ಪೋರ್ಟಿಗಿಂತ ತ್ವರಿತ

ee521783-d977-4956-a7a9-5448d081fa38ರಾಜ್ಯದಲ್ಲಿ ಪಡಿತರ ಚೀಟಿಗಳ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ, ಪಾಸ್ ಪೋರ್ಟ್ ಗಿಂತ ತ್ವರಿತವಾಗಿ ಬಿಪಿಎಲ್ ಪಡಿತರ ಚೀಟಿ ಪಡೆಯುವಂತಹ ಯೋಜನೆ ರೂಪಿಸಲಾಗಿದೆ ಎಂದು ಸಚಿವರಾದ ಯು ಟಿ ಖಾದರ್ ಹೇಳಿದರು. ಗದಗ ನಗರದ ಭೀಷ್ಮ ಕೆರೆಯಂಗಳದಲ್ಲಿ ಏರ್ಪಾಡಾಗಿದ್ದ ಬಸವೇಶ್ವರ ಜಯಂತಿಯಲ್ಲಿ ಪಾಲ್ಗೊಂಡ ಸಚಿವರು ನಂತರ ಪತ್ರಿಕಾಗೋಷ್ಠಿ ನಡೆಸಿದರು.

 

ಸುಧಾರಣೆ ಇದ್ದಲ್ಲಿ ಪ್ರಾರಂಭಿಕ ಸಮಸ್ಯೆಗಳು ಇರೋದು ಸಹಜವಾಗಿದೆ. ಆಧಾರ ಸಂಖ್ಯೆ ಒಂದರಿಂದಲೇ ಪಡಿತರ ಚೀಟಿ ನೀಡುವ ಕ್ರಮ ಜಾರಿಗೊಳಿಸಲಾಗುತ್ತಿದೆ ಎಂದು ಸಚಿವರು ನುಡಿದರು.

ಇಂದಿರಾ ಕ್ಯಾಂಟೀನ್:

499e93f5-1eff-4b32-9e6b-252c87dc409aಬೆಂಗಳೂರಿನ ವಿದ್ಯಾಥಿ೯ಗಳು, ನೌಕರರಿಗೆ, ನಿತ್ಯವೂ ಕೆಲಸಕ್ಕಾಗಿ ಬೆಂಗಳೂರಿಗೆ ಸಂಚರಿಸುವ ಕಾಮಿ೯ಕರ ಅನುಕೂಲಕ್ಕಾಗಿ 198 ವಾಡ೯ಗಳಲ್ಲಿ ಇಂದಿರಾ ಕ್ಯಾಂಟೀನ ಆಗಸ್ಟ 15 ರ ಒಳಗಾಗಿ ಆರಂಭಿಸಲು ಕ್ರಮ ಜರುಗಿಸಲಾಗುತ್ತಿದೆ ಎಂದು ನುಡಿದ ಸಚಿವರು , ಮುಖ್ಯ ಮಂತ್ರಿಗಳ ಅನ್ನಭಾಗ್ಯ ಯೋಜನೆಯಿಂದಾಗಿ ಇಂದು ತೀವ್ರ ಬರ ಸಂಕಷ್ಟದಿಂದ ಬಡವರು ಕೆಲಸವಿಲ್ಲದಿದ್ದರೂ ಕನಿಷ್ಟ ಊಟದ ಗಂಜಿಯನ್ನು ಪಡೆಯಲು ಸಾಧ್ಯವಾಗಿದೆ ಎಂದರು.

ಪುನರ್ಬೆಳಕು ಯೋಜನೆ: 

ರಾಜ್ಯವನ್ನು ಹೊಗೆಮುಕ್ತ, ಸೀಮೆಎಣ್ಣೆ ಮುಕ್ತ ರಾಜ್ಯವಾಗಿಸಲು ಕೇಂದ್ರ ಸರ್ಕಾರದ ಉಜ್ವಲ ಯೋಜನೆಯ ಸೌಲಭ್ಯ ದೊರಕದ ಅರ್ಹ ಕುಟುಂಬಗಳಿಗೆ ಉಚಿತ ಎಲ್ ಪಿ ಜಿ ಸಂಪರ್ಕ ಹಾಗೂ ಸ್ಟೋವ್ ಗಳನ್ನು ಒದಗಿಸುವ ಅನಿಲ ಭಾಗ್ಯ ಮತ್ತು ಬೆಳಕಿಗಾಗಿ ಸೀಮೆಎಣ್ಣೆ ಬಿಟ್ಟು ಕೊಡುವ ಕುಟುಂಬಗಳಿಗೆ ಎರಡು ಉಚಿತ ರೀಚಾರ್ಜಬಲ್ ಎಲ್ ಇ ಡಿ ಬಲ್ಬ್ ನೀಡು ಪುನರ್ಬೆಳಕು ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಸಚಿವರು ಹೇಳಿದರು.

ವೃದ್ದಾಶ್ರಮ, ನಾರೀಕೇತನ, ಅನಾಥಾಶ್ರಮಗಳಲ್ಲಿ ದಾಸೋಹ ಮುಂತಾದ ಹೊಸ ಯೋಜನೆಗಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶೀಘ್ರದಲ್ಲೇ ಚಾಲನೆ ನೀಡುವರು ಎಂದು ಸಚಿವರು ತಿಳಿಸಿದರು.. ಪತ್ರಿಕಾಗೋಷ್ಠಿಯಲ್ಲಿ ಸಚಿವರಾದ ಹೆಚ್ ಕೆ ಪಾಟೀಲ್ ಅವರು ಉಪಸ್ಥಿತರಿದ್ದರು.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s