ಕಾಯಕ ಪ್ರಜ್ಞೆಯ ಮೂಡಿಸಿದ ವಿಶ್ವಗುರು ಬಸವಣ್ಣ

Jaga Jyothi Basaveshwaraವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿಯೇ ಅಸಮಾನತೆಯ ವಿರುದ್ದ ಧ್ವನಿ ಎತ್ತಿದವರು,  ಮಾನವ ಧರ್ಮ ಎತ್ತಿ ಹಿಡಿದ ಮಹಾ ಮಾನವತಾ ವಾದಿ ಬಸವಣ್ಣನವರು  ಕಾಯಕ ಜಗತ್ತಿನ ಪ್ರಜ್ಞೆಯನ್ನು ಮೂಡಿಸಿದ್ದರು ಎಂದು ಸಚಿವರಾದ ಉಮಾಶ್ರೀ ಅವರು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.

 

12ನೇ ಶತಮಾನದಲ್ಲಿಯೇ ಬಸವಣ್ಣ ಅವರು ದಾಸೋಹ ಕಲ್ಪನೆಯನ್ನು ಸಾಕಾರಗೊಳಿಸಿದ್ದರು,  ನಾವು ಈಗ ಅದನ್ನೆ ಅಕ್ಷರ ದಾಸೋಹ, ಅನ್ನದಾಸೋಹದ ರೂಪದಲ್ಲಿ ಮುಂದುವರೆಸುತ್ತಿದ್ದೇವೆ.

ವಚನ ಸಾಹಿತ್ಯದಲ್ಲಿ ಸಾಮಾಜಿಕ ನ್ಯಾಯ, ಧರ್ಮದರ್ಶನ, ರಾಜನೀತಿ, ಮನೋವಿಜ್ಞಾನ, ಭಾಷಾಜ್ಞಾನ ಎಲ್ಲವೂ ಮೇಳೈಸಿವೆ, ವಚನ ಸಾಹಿತ್ಯದಿಂದಲೇ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದ ಬಸವಣ್ಣ ಮತ್ತು ಸಂವಿದಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರು ಪ್ರಾತಃಸ್ಮರಣೀಯರು ಎಂದು ಸಚಿವರು ಹೇಳಿದರು.

 

umashree

ಮುಖ್ಯಮಂತ್ರಿಗಳು ವಿದೇಶ ಪ್ರವಾಸದಿಂದ ಹಿಂದಿರುಗಿದ ನಂತರ ಮೇ-03 ರಂದು ಬಸವ ಪುರಸ್ಕಾರ ಹಾಗೂ  ಚೌಡಯ್ಯ ಪ್ರಶಸ್ತಿಗಳನ್ನು ವಿತರಿಸುವರು ಎಂದು ಸಚಿವರು ಈ ಸಂದರ್ಭದಲ್ಲಿ ಹೇಳಿದರು.

ಮುಂದಿನ ದಿನಗಳಲ್ಲಿ ಅಕ್ಕಮಹಾದೇವಿ ಹಾಗೂ ಕಿತ್ತೂರು ಚೆನ್ನಮ್ಮ ಅವರ ಜನ್ಮ ಜಯಂತಿ ಆಚರಣೆಗಳನ್ನು ಏರ್ಪಡಿಸುವ ಕುರಿತು ತಮ್ಮ ಇಂಗಿತವನ್ನು ಸಚಿವರು ವ್ಯಕ್ತಪಡಿಸಿದರು.

 

579280

ನಗರಾಭಿವೃದ್ಧಿ ಹಾಗೂ ನಗರ ಯೋಜನಾ ಸಚಿವ ಕೆ.ಜೆ.ಜಾರ್ಜ್ ಅವರು ಮಾತನಾಡಿ 12ನೇ ಶತಮಾನದಲ್ಲಿ ಬಸವಣ್ಣನವರು ಪ್ರತಿಪಾದಿಸಿದ ತತ್ವಗಳು ಇಂದಿನ ಸಮಾಜಕ್ಕೂ ಪ್ರಸ್ತುತವಾಗಿವೆ.

ಶಾಂತಿ ಸಮಾನತೆಯಿಂದ ಬಾಳಲು ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಬೇಕು ಎನ್ನುವುದು ಪರಿವರ್ತನೆಕಾರ ಹಾಗೂ ಕ್ರಾಂತಿಕಾರಿ ಬಸವಣ್ಣನವರ ಆಶಯವಾಗಿತ್ತು ಎಂದು ಅಭಿಪ್ರಾಯ ಪಟ್ಟರು.

 

khandreಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವರಾದ ಈಶ್ವರ ಖಂಡ್ರೆ ಅವರು ಮಾತನಾಡಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಇರಬೇಕೆನ್ನುವ ಸುತ್ತೋಲೆಯನ್ನು ಹೊರಡಿಸಿದ  ಮುಖ್ಯಮಂತ್ರಿಗಳನ್ನು ಅಭಿನಂದಿಸಿದರು.

ಬಸವಾದಿ ಶರಣರು ಶೋಷಣೆ, ಅಸ್ಪೃಶ್ಯತೆ ವಿರುದ್ದ 850 ವರ್ಷಗಳ ಹಿಂದೆಯೇ ಹೋರಾಡಿ ಸಮಾಜ ಸುಧಾರಣೆ ತಂದವರು.

ಸ್ವಾತಂತ್ರ್ಯ, ಸಮಾನತೆ, ಸಹಬಾಳ್ವೆ, ಸೋದರತ್ವದ ಕನಸು ಕಂಡವರು.  ಸಾಮಾಜಿಕ ನ್ಯಾಯದ ಹರಿಕಾರರು, ಶರಣರ ಚಿಂತನೆಗಳು ವೈಚಾರಿಕ ಹಾಗೂ ವೈಜ್ಞಾನಿಕ ಎಂದು ಸಚಿವರು ಹೇಳಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s