ಮಹಿಳಾ ಉದ್ದಿಮೆದಾರರಿಗೆ ಕೆಎಸ್ ಎಫ್ ಸಿ ಸಾಲ ಯೋಜನೆ

 

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ವಿಶೇಷ ಯೋಜನೆಯಡಿಯಲ್ಲಿ ರೂ.3286.21 ಕೋಟಿಗಳ ಅವಧಿ ಸಾಲವನ್ನು ಸುಮಾರು 29890 ಮಹಿಳಾ ಉದ್ದಿಮೆದಾರರಿಗೆ ನೀಡುವ ಮೂಲಕ ಯಶಸ್ವಿ ಉದ್ದಿಮೆದಾರರಾಗುವಂತೆ ಪ್ರೇರೇಪಿಸಿದೆ.

ಸುಮಾರು 20,776 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ದಿಮೆದಾರರಿಗೆ ಒಟ್ಟು ರೂ.1,265.94 ಕೋಟಿ ಮೊತ್ತದ ಹಣಕಾಸಿನ ನೆರವನ್ನು ನೀಡುವ ಮೂಲಕ ಉದ್ದಿಮೆಗಳನ್ನು ಸ್ಥಾಪಿಸಲು ಸಂಸ್ಥೆಯು ಸಹಾಯಹಸ್ತ ನೀಡಿದೆ.

 ಶೇ.4ರ ಬಡ್ಡಿ :

ಸಂಸ್ಥೆಯ ಒಟ್ಟಾರೆ ಮಂಜೂರಾತಿಯಾದ ರೂ.733.42 ಕೋಟಿಗಳಲ್ಲಿ ಶೇ.51ರಷ್ಟು ಅಂದರೆ ರೂ.375.94 ಕೋಟಿ ಮೊತ್ತವನ್ನು ಮಹಿಳಾ ಉದ್ದಿಮೆದಾರರಿಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ದಿಮೆದಾರರಿಗೆ ಶೇ.4ರ ಬಡ್ಡಿ ಸಹಾಯ ಧನ ಯೋಜನೆಯಡಿಯಲ್ಲಿ ಹಾಗೂ ಮೊದಲ ಪೀಳಿಗೆ ಉದ್ದಿಮೆದಾರರಿಗೆ ಶೇ.8ರ ಬಡ್ಡಿ ಸಹಾಯ ಧನದ ವಿಶೇಷ ಯೋಜನೆಯಡಿಯಲ್ಲಿ ಸಂಸ್ಥೆಯು ಸಾಲ ಮಂಜೂರು ಮಾಡಿದೆ.  ಇನ್ನುಳಿದ ಶೇ.49ರಷ್ಟು ಮೊತ್ತವನ್ನು ಸಾಮಾನ್ಯ ಯೋಜನೆಯಡಿಯಲ್ಲಿ ಮಂಜೂರು ಮಾಡಲಾಗಿದೆ.

ರೂ.15,276.05 ಕೋಟಿ ಮೊತ್ತ:

ಇದಲ್ಲದೆ, ಅಲ್ಪ ಸಂಖ್ಯಾತ ವರ್ಗಗಳ ಉದ್ದಿಮೆದಾರರಿಗೆ ಉತ್ತೇಜನ ನೀಡಲು ಸಂಸ್ಥೆಯವತಿಯಿಂದ ರೂ.11,282.94 ಕೋಟಿ ಮೊತ್ತದ ಹಣಕಾಸಿನ ನೆರವನ್ನು 19,052 ಉದ್ದಿಮೆದಾರರಿಗೆ ನೀಡಲಾಗಿದೆ.  ಕರ್ನಾಟಕ ರಾಜ್ಯದಲ್ಲಿ ಕೈಗಾರಿಕೀಕರಣವನ್ನು ಉತ್ತೇಜಿಸಲು ಕಳೆದ 58 ವರ್ಷಗಳಿಂದಲೂ ಸತತವಾಗಿ ಸಂಸ್ಥೆಯು 1,71,414 ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ಘಟಕಗಳ (ಒSಒಇs) ಸ್ಥಾಪನೆಗೆ ಒಟ್ಟು ರೂ.15,276.05 ಕೋಟಿ ಮೊತ್ತವನ್ನು ಮಂಜೂರು ಮಾಡುವ ಮೂಲಕ ಗಮನಾರ್ಹ / ಅಸಾಧಾರಣ ಸೇವೆಯನ್ನು ಸಂಸ್ಥೆಯು ಮಾಡಿದೆ.

ರೂ.733.42 ಕೋಟಿ:

ರೂ.733.42 ಕೋಟಿಗಳ ಒಟ್ಟಾರೆ ಮಂಜೂರಾತಿಯಲ್ಲಿ ತಯಾರಿಕಾ ವಲಯಕ್ಕೆ  ರೂ.309.21 ಕೋಟಿ ಮೊತ್ತದ ಹಣಕಾಸಿನ ನೆರವನ್ನು ಸಂಸ್ಥೆಯಿಂದ ನೀಡಲಾಗಿದ್ದು, ಅದು ಒಟ್ಟು ಮಂಜೂರಾತಿಯ ಶೇ.42ರಷ್ಟಿದೆ.  ಪ್ರವಾಸೋದ್ಯಮ ವಲಯ ಹಾಗೂ ರಿಯಲ್ ಎಸ್ಟೇಟ್ ವಾಣಿಜ್ಯ  ವಲಯಕ್ಕೆ ಅನು ಕ್ರಮವಾಗಿ ರೂ.77.30 ಕೋಟಿ ಹಾಗೂ 58.91 ಕೋಟಿ ಮೊತ್ತದ ಹಣಕಾಸಿನ ನೆರವನ್ನು ನೀಡಲಾಗಿದ್ದು ಒಟ್ಟು ಮಂಜೂರಾತಿಯಲ್ಲಿ ಪ್ರತೀ ವಲಯದ ಪಾಲು ಶೇ.11 ಹಾಗೂ 8 ರಷ್ಟಿದೆ.  ಇನ್ನುಳಿದ ಮೊತ್ತವಾದ ರೂ.37.39 ಕೋಟಿ ಮತ್ತು 250.59 ಕೋಟಿಗಳು ಒಟ್ಟು ಮಂಜೂರಾತಿಯ ಶೇ.39ರಷ್ಟಿದ್ದು ಅದು ಆರೋಗ್ಯ ಹಾಗೂ ಇತರೆ ವಲಯಗಳ ಪಾಲಿನದ್ದಾಗಿದೆ.

ಹಣಕಾಸು ನೆರವು:

ಸಂಸ್ಥೆಯು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ಹಾಗೂ ಸೇವಾ ಕ್ಷೇತ್ರದ ವಲಯದಲ್ಲಿನ ಉದ್ದಿಮೆಗಳ ಸ್ಥಾಪನೆಗೆ ಹಣಕಾಸಿನ ನೆರವು ನೀಡುವುದರ ಮೂಲಕ ಅವುಗಳಿಗೆ ಒಂದು ಅತ್ಯಾಧುನಿಕ ವೇದಿಕೆಯನ್ನು ಸೃಷ್ಟಿಸಿ, ಉತ್ತೇಜಿಸುವ ದೂರದರ್ಶಿತ್ವವನ್ನು ಹೊಂದಿರುತ್ತದೆ.  ಈ ಬೆಳವಣಿಗೆಯು ಉದ್ಯಮಶೀಲತೆಗೆ ಉತ್ತೇಜನ, ಹೂಡಿಕೆ ಮತ್ತು ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಬೇಕಾದ ಉದ್ಯೋಗಾವಕಾಶ ಹಾಗೂ ರಾಜ್ಯದ ಬೆಳವಣಿಗೆಗೆ ಕಾರಣವಾಗಿದೆ.  ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ಉದ್ದಿಮೆದಾರರನ್ನು ಬೆಂಬಲಿಸಲು ಹಾಗೂ ಉದ್ದಿಮೆದಾರರ ಕನಸುಗಳನ್ನು ಸಾಕಾರಗೊಳಿಸಲು ಅವರೊಂದಿಗೆ ಸದಾ ಇದ್ದೇ ಇರುತ್ತದೆ.

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s