ಕೋಲಾರ ಜಿಲ್ಲೆ ನೀರಿನ ನಿರ್ವಹಣೆಯಲ್ಲಿ ಮಾದರಿ

ಇಡೀ ರಾಜ್ಯದಲ್ಲಿ ಮಳೆ ಇಲ್ಲದೆ ಬರದ ಸ್ಥಿತಿ ಉಂಟಾಗಿದೆ. ಅದರಲ್ಲೂ ಕೋಲಾ ರ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಅಭಾವ ಉಂಟಾಗಿದ್ದು ಸರ್ಕಾರ ಕೊಳವೆ ಬಾವಿ, ಟ್ಯಾಂಕರ್ ಮುಖಾಂತರ ನೀರು ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿನ ನೀರಿನ ಸಮಸ್ಯೆಗೆ ಸಭೆಗಳನ್ನು ನಡೆಸಲಾಗತ್ತಿದೆ. ಹೆಚ್ಚಿನ ವಿವರ ಹೀಗಿದೆ.

ರಾಜ್ಯದಲ್ಲಿ ಬರಗಾಲ ಮುಂದುವರೆದಿದ್ದು ಅಧಿಕಾರಿಗಳು ಈ ವರ್ಷ ರಜೆಯ ಮೇಲೆ ತೆರಳದೆ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಲು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವಿವಿಧ ಕಾಮಗಾರಿಗಳ ಭೌತಿಕ ಪರಿಶೀಲನಾ ಸಮಿತಿಯ ಅಧ್ಯಕ್ಷರಾದ ಎಸ್.ಜಿ. ನಂಜಯ್ಯನಮಠ ಅವರು ಸೂಚಿಸಿದರು.

ಕೋಲಾರ ನಗರದ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ನಡೆದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯವು ಸತತ ಮೂರನೇ ವರ್ಷ ಬರಗಾಲವನ್ನು ಎದುರಿಸುತ್ತಿದ್ದು ನೀರಿನ ಭವಣೆ ಹೆಚ್ಚಾಗಿದೆ. ಹಾಗಾಗಿ ಮಳೆಯಾಗುವವರೆಗೂ ಅಧಿಕಾರಿಗಳು ರಜೆ ಹಾಕಿಕೊಂಡು ಹೋಗಬೇಡಿ. ಪ್ರಕೃತಿಯ ವಿಕೋಪದಿಂದ ಮಳೆಯಾಗುತ್ತಿಲ್ಲ. ಇದಕ್ಕೆ ಕಾರಣಗಳನ್ನು ಹುಡುಕುವ ಸ್ಥಿತಿ ಈಗಿಲ್ಲ. ಸಮಸ್ಯೆಯನ್ನು ಎದುರಿಸಬೇಕಾಗಿರುವುದೊಂದೇ ದಾರಿ ಎಂದು ತಿಳಿಸಿದರು.
ಸ್ವರಾಜ್ಯ ಎಂಬ ಶಿಸ್ತು ಪಂಚಾಯಿತಿಗಳಲ್ಲಿ ಬರಬೇಕಾಗಿದೆ. ಅದಕ್ಕಾಗಿಯೇ ಸರ್ಕಾರವು ನೂತನ ಕಾರ್ಯಕ್ರಮಗಳನ್ನು ಗ್ರಾಮಪಂಚಾಯಿತಿಯಿಂದ ಜಿಲ್ಲಾ ಪಂಚಾಯತ್‍ವರೆಗೆ ನೀಡಿದೆ. ಇವುಗಳನ್ನು ಸೂಕ್ತವಾಗಿ ಅನುಷ್ಠಾನಗೊಳಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಾದರಿ ಜಿಲ್ಲೆ:
ಜಿಲ್ಲೆಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು 1500 ಅಡಿ ಕೊಳವೆ ಬಾವಿ ಕೊರದರೂ ನೀರು ದೊರೆಯುತ್ತದೆಂದು ನಂಬಿಕೆ ಇಲ್ಲ. ಆದರೂ ಸಹ ಜಿಲ್ಲೆಯಲ್ಲಿ ಕೃಷಿ ಮಾಡುವವರು ಕಡಿಮೆಯಾಗಿಲ್ಲ. ನೀರಿನ ಮಿತ ಬಳಕೆಯ ಬಗ್ಗೆ ಜನತೆಯಲ್ಲಿ ಜಾಗೃತಿ ಇದೆ. ನೀರಿನ ನಿರ್ವಹಣೆಯಲ್ಲಿ ಕೋಲಾರ ಜಿಲ್ಲೆಯು ಇತರೆ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ಟ್ಯಾಂಕರ್ ಮೂಲಕ ನೀರು:
ಇನ್ನು ನೀರಿನ ಸಮಸ್ಯೆ ಇರುವ ಗ್ರಾಮಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಈಗಾಗಲೇ 68 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರನ್ನು ನೀಡಲಾಗುತ್ತಿದೆ. ಮುಂದೆ 245 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಾಡಲಿದೆ. ಇನ್ನೂ 96 ಗ್ರಾಮಗಳಿಗೆ ನೀರನ್ನು ಟ್ಯಾಂಕರ್ ಮೂಲಕ ಒದಗಿಸಲು ಕ್ರಮವಹಿಸಲಾಗುತ್ತಿದೆ

ಬಯಲು ಬಹಿರ್ದೆಸೆ ಮುಕ್ತ:
ದೇಶದಲ್ಲಿ ಸುಮಾರು 2 ಲಕ್ಷ ಅಧಿಕ ಮಂದಿ ಬಯಲು ಶೌಚದಿಂದ ಸಾವನಪ್ಪುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಬೇಕು. ಗ್ರಾಮಗಳಲ್ಲಿ ಈ ಕುರಿತು ನಾಟಕಗಳನ್ನು ಮಾಡಿ ಎಂದ ಅವರು, ಅಕ್ಟೋಬರ್-02 ರ ಒಳಗಾಗಿ ಕೋಲಾರ ಜಿಲ್ಲೆಯು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಹೊರಹೊಮ್ಮಲು ಎಲ್ಲರೂ ಕೆಲಸ ಮಾಡಬೇಕು ಎಂದು ಸಮಿತಿ ಅಧ್ಯಕ್ಷ ಎಸ್.ಜಿ.ನಂಜಯ್ಯನ ಮಠ ಅವರು ತಿಳಿಸಿದರು.

ಕೊಳವೆ ಬಾವಿ ಮುಚ್ಚಿ:
ಮುಂದುವರೆದು, ತೆರೆದ ಕೊಳವೆ ಬಾವಿಗಳನ್ನು ತಪ್ಪದೆ ಮುಚ್ಚಿ. ಇಲ್ಲವಾದರೆ ಅದಕ್ಕೆ ಮುಚ್ಚಳ ಹಾಕಿ. ಇದರಿಂದ ಯಾವುದೇ ಮಕ್ಕಳಿಗೂ ತೊಂದರೆ ಆಗಬಾರದು. ಸಮಸ್ಯೆಯಾದರೆ ಸರ್ಕಾರಕ್ಕೆ ಕೆಟ್ಟ ಹೆಸರು. ಗ್ರಾಮೀಣಾಭಿವೃದ್ಧಿ ಸಚಿವರು ಇದರ ಬಗ್ಗೆ ಕಠೋರ ತೀರ್ಮಾನವನ್ನು ತೆಗೆದುಕೊಳ್ಳುವರು. ಇದಕ್ಕೆ ಅಧಿಕಾರಿಗಳು ಯಾರೂ ಗುರಿಯಾಗಬಾರದು ಎಂಬುವುದು ನಮ್ಮ ಕಾಳಜಿ ಎಂದರು.

ಹಸಿರು ಮೇವು ಆಂದೋಲನ:
ಹಸಿರು ಮೇವು ಬೆಳೆ ಆಂದೋಲನ ಕುರಿತು ಪ್ರತಿಕ್ರಿಯಿಸಿದ ಸಮಿತಿ ಅಧ್ಯಕ್ಷ ಎಸ್.ಜಿ. ನಂಜಯ್ಯನ ಮಠ ಕೋಲಾರ ಜಿಲ್ಲೆಯಲ್ಲಿ ಹೈನುಗಾರಿಕೆಯ ಉತ್ತೇಜನಕ್ಕಾಗಿ ಮೇವು ಬೆಳೆ ಆಂದೋಲನವನ್ನು ಮಾಡಿರುವುದು ಸಂತಸದ ವಿಚಾರ. ಬರಗಾಲವಾಗಿದ್ದರೂ ಹಸಿರು ಮೇವು ಜಿಲ್ಲೆಯಲ್ಲಿ ಲಭ್ಯವಾಗುತ್ತಿದೆ. ಜಿಲ್ಲಾಡಳಿತ ಮಿನಿಕಿಟ್‍ಗಳನ್ನು ರೈತರಿಗೆ ನೀಡಿ ಸುಮಾರು 3 ಸಾವಿರಕ್ಕೂ ಹೆಚ್ಚು ಪ್ರದೇಶದಲ್ಲಿ ಮೇವು ಬೆಳೆ ಬೆಳೆಸಿರುವುದು ಇತರೆ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s