ಇದೇ ಏಪ್ರಿಲ್ 29ಕ್ಕೆ “ಬಸವ ಜಯಂತಿ”ಗೆ ಬನ್ನಿ

ಜಗಜ್ಯೋತಿ ಬಸವಣ್ಣನವರ ಜನ್ಮದಿನಾಚರಣೆಯನ್ನು ಪ್ರತೀ ವರ್ಷ ಸರ್ಕಾರ ಆಚರಿಸಿಕೊಂಡು ಬರುತ್ತಿದೆ. ಈ ಬಾರಿಯು  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಬಸವ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಕನ್ನಡ ಮತ್ತು ಸಂಸ್ಕತಿ ಇಲಾಖೆ ಏಪ್ರಿಲ್ 29 ರಂದು ಬೆಳಿಗ್ಗೆ 11.00 ಗಂಟೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಬಸವ ಜಯಂತಿಯನ್ನು ಹಮ್ಮಿಕೊಂಡಿದೆ.

ಕನ್ನಡ ಮತ್ತು ಸಂಸ್ಕತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಉಮಾಶ್ರೀ ಸಮಾರಂಭದ ಉದ್ಫಾಟನೆಯನ್ನು ನೆರವೇರಿಸಲಿದ್ದಾರೆ.

ಬಸವ ಜಯಂತಿ ಅಂಗವಾಗಿ ಅಂದು ಬೆಳಿಗ್ಗೆ 9.00 ಗಂಟೆಗೆ ಬಸವೇಶ್ವರ ವೃತ್ತದಿಂದ (ಹೋಟೆಲ್ ಚಾಲುಕ್ಯ ಹತ್ತಿರ) ರವೀಂದ್ರ ಕಲಾಕ್ಷೇತ್ರದವರೆಗೆ ಬಸವಣ್ಣನವರ ಸ್ತಬ್ದ ಚಿತ್ರದೊಂದಿಗೆ ಜಾನಪದ ಕಲಾ ತಂಡಗಳ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮ:

ವಿವಿಧ ಜಿಲ್ಲೆಗಳ ಜಾನಪದ ಕಲಾತಂಡಗಳು ಈ ಸ್ತಬ್ದ ಚಿತ್ರ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.   ಅಂದು ಬೆಳಿಗ್ಗೆ 10.00 ರಿಂದ 11.00 ಗಂಟೆವರೆಗೆ ಕುಮಾರ ಕಣವಿ ಮತ್ತು ಕು. ಮಾಲಾಶ್ರೀ ಕಣವಿ ಅವರಿಂದ ವಚನ ಗಾಯನ ಹಾಗೂ ಮಧ್ಯಾಹ್ನ 1.00 ರಿಂದ 2.00 ಗಂಟೆವರೆಗೆ ಬೆಂಗಳೂರಿನ ರಂಗಭಾರತಿ ತಂಡದವರಿಂದ ವಚನ ರೂಪಕ – ಸಿಂಗಿರಾಜ ಕಾರ್ಯಕ್ರಮ ನಡೆಯಲಿದೆ.

ಸಾಹಿತಿಗಳು ಮತ್ತು ಚಿಂತಕರಾದ ಡಾ. ಬಸವರಾಜ ಸಬರದ ಅವರಿಂದ ವಿಶೇಷ ಉಪನ್ಯಾಸ ನಡೆಯಲಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s