ಹಾವೇರಿಯಲ್ಲಿ ತುಂಗಾ ಮೇಲ್ದಂಡೆ ವಿಶೇಷ ಘಟಕ ಯೋಜನೆಗೆ ಚಾಲನೆ

ತುಂಗಾ ಮೇಲ್ದಂಡೆ ಯೋಜನೆಯ ವಿಶೇಷ ಘಟಕ ಯೋಜನೆಯಡಿಯಲ್ಲಿ ರೂ.106 ಲಕ್ಷ ವೆಚ್ಚದಲ್ಲಿ ವರದಾ ನದಿಗೆ ಹಂದಿಗನೂರ ಬಳಿ ನಿರ್ಮಿಸಲು ಉದ್ದೇಶಿಸಿರುವ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಹಾಗೂ ರೂ.87 ಲಕ್ಷ ವೆಚ್ಚದಲ್ಲಿ ಗುತ್ತಲ ತಾಂಡಾ, ಶಾಖಾರ ಹಾಗೂ ಕಂಚಾರಗಟ್ಟಿ, ಹುಳ್ಯಾಳ ಗ್ರಾಮಗಳಲ್ಲಿ ಅಭಿವೃದ್ಧಿ ಪಡಿಸುತ್ತಿರುವ ಕಾಂಕ್ರೀಟ್ ರಸ್ತೆ ಹಾಗೂ ಬಾಕ್ಸ್ ಚರಂಡಿ ಕಾಮಗಾರಿಗೆ ರಾಜ್ಯ ಜವಳಿ ಮತ್ತು ಮುಜರಾಯಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ರುದ್ರಪ್ಪ ಲಮಾಣಿ ಅವರು ಬುಧವಾರ ಭೂಮಿ ಪೂಜೆ ನೆರವೇರಿಸಿದರು.

ಗುತ್ತಲ ತಾಂಡಾದಲ್ಲಿ ರೂ.14 ಲಕ್ಷ ವೆಚ್ಚದಲ್ಲಿ ಎರಡು ಕಾಮಗಾರಿ, ಶಾಖಾರ ಗ್ರಾಮದಲ್ಲಿ ರೂ.35 ಲಕ್ಷ ವೆಚ್ಚದಲ್ಲಿ ನಾಲ್ಕು ಕಾಮಗಾರಿ, ಕಂಚಾರಗಟ್ಟಿ ಗ್ರಾಮದಲ್ಲಿ ರೂ.18 ಲಕ್ಷ ವೆಚ್ಚದಲ್ಲಿ ಹಾಗೂ ಹುಳ್ಯಾಳ ಗ್ರಾಮದಲ್ಲಿ ರೂ.20 ಲಕ್ಷ ವೆಚ್ಚದಲ್ಲಿ ತಲಾ ಒಂದು ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಶಾಖಾರ ಗ್ರಾಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಸಚಿವರು ಪ್ರವಾಹದಿಂದ ಬಾದಿತವಾಗುವ ಹಳೆ ಶಾಖಾರ ಗ್ರಾಮವನ್ನು ಸ್ಥಳಾಂತರಿಸಲು ಈಗಾಗಲೇ ನೂತನವಾಗಿ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಿ ಮನೆ ಹಾಗೂ ನಿವೇಶನವನ್ನು ನಿರ್ಮಿಸಲಾಗಿದೆ. ಗ್ರಾಮಸ್ಥರು ನೂತನ ಗ್ರಾಮಕ್ಕೆ ಸ್ಥಳಾಂತರಗೊಳ್ಳಬೇಕು ಎಂದು ಸಚಿವರು ಮನವಿ ಮಾಡಿಕೊಂಡರು.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s