ಹಿಂಗಾರು ಹಂಗಾಮಿಗೆ ಕೇಂದ್ರದಿಂದ ಪರಿಹಾರ ಕೋರಿದ್ದೇವೆ:ಮುಖ್ಯಮಂತ್ರಿ ಸಿದ್ದರಾಮಯ್ಯ

2ಪ್ರಕೃತಿ ವಿಕೋಪ ಪರಿಹಾರ ನೀಡುವಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ನೀತಿ ಆಯೋಗದ ಸಭೆಯಲ್ಲಿ ಮನವರಿಕೆ ಮಾಡಿಕೊಟ್ಟರೂ ಪ್ರಧಾನಿಯವರು ಪ್ರತಿಕ್ರಿಯಿಸಲಿಲ್ಲ ಹಾಗೂ ಪ್ರಧಾನಿಯವರು ತಮ್ಮ ಭಾಷಣದಲ್ಲಿ ಈ ವಿಷಯ ಪ್ರಸ್ತಾಪ ಮಾಡಲೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರಗಳ ಅಭಿವೃದ್ದಿ ಕಾಮಗಾರಿಗಳಲ್ಲಿ ಪಾಲ್ಗೊಳ್ಳಲು ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.

14ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಹೆಚ್ಚಿನ ಅನುದಾನ ಕೊಟ್ಟಿದ್ದೇವೆ ಎಂದು ಪದೇ ಪದೇ ಕೇಂದ್ರದವರು ಹೇಳುತ್ತಾರೆ. ಅದರಲ್ಲೇ ಕೊರತೆ ಸರಿದೂಗಿಸಿಕೊಳ್ಳಿ ಎನ್ನುತ್ತಾರೆ. ಹೆಚ್ಚು ಕೊಟ್ಟಿರುವುದೇನೋ ನಿಜ.1 ಆದರೆ, ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ನಿಗಧಿ ಮಾಡಿದ್ದ ಅನುದಾನದಲ್ಲಿ ಭಾರಿ ಕಡಿತವಾಗಿದೆ. ಶೇಕಡಾ ನೂರರಷ್ಟು ಇದ್ದ ಅನುದಾನವನ್ನು ಶೇಕಡಾ 80, ಶೇಕಡಾ 20ಕ್ಕೆ ಇಳಿಸಲಾಗಿದೆ. ಇದರಿಂದಾಗಿ 14ನೇ ಹಣಕಾಸು ಆಯೋಗದಲ್ಲಿ ಬಂದಿದ್ದಕ್ಕಿಂತ ಹೆಚ್ಚು ನಷ್ಟವಾಗಿದೆ.

ರಾಜಸ್ಥಾನ ಹೊರತುಪಡಿಸಿದರೆ ಕರ್ನಾಟಕ ಹೆಚ್ಚು ಒಣಭೂಮಿ ಹೊಂದಿರುವ ಪ್ರದೇಶ. ನಮಗಿಂತ ಬೇರೆ ರಾಜ್ಯಗಳಿಗೆ ಹೆಚ್ಚು ಬರ ಪರಿಹಾರದ ಹಣ ಹೋಗಿದೆ. ಗುಜರಾತ್ ಗೆ ನಾಲ್ಕು ಸಾವಿರಕ್ಕೂ ಹೆಚ್ಚು ಕೋಟಿ, ಮಹಾರಾಷ್ಟ್ರಕ್ಕೆ ಏಳು ಸಾವಿರ ಕೋಟಿ, ಮಧ್ಯಪ್ರದೇಶಕ್ಕೆ ನಾಲ್ಕು ಸಾವಿರ ಕೋಟಿ ಸಿಕ್ಕಿದೆ. ನಮಗೆ ಮಂಜೂರಾಗಿರುವುದು 1375 ಕೋಟಿ ರೂ. ಮಾತ್ರ.

ನಮಗಿಂತ ಸಣ್ಣ ರಾಜ್ಯಗಳಿಗೂ ಹೆಚ್ಚು ಅನುದಾನ ಸಿಕ್ಕಿದ್ದು ನಮಗೆ ಕಡಿಮೆಯಾಗಿರುವ ಬಗ್ಗೆ ಪ್ರಧಾನಿಯವರ ಗಮನ ಸೆಳೆಯಲಾಯಿತು. ಬರಗಾಲದ ವಿಚಾರದಲ್ಲಿ ನಾವು 4702 ಕೋಟಿ ರೂ.ಗಳ ಪರಿಹಾರಕ್ಕೆ ಮನವಿ ಮಾಡಿದ್ದೆವು.3 ಅದೂ ಎನ್ ಡಿ ಆರ್ ಎಫ್ ನಿಯಮ ಪ್ರಕಾರ‌. ಆದರೆ ಮಂಜೂರಾಗಿದ್ದು 1685 ಕೋಟಿ.

ಹಿಂಗಾರು ಹಂಗಾಮಿಗೆ 3310 ಕೋಟಿ ಕೇಳಿದ್ದೇವೆ. ಅದನ್ನಾದರೂ ಕೊಡಿ ಎಂದು ಸಭೆಯಲ್ಲಿ ಮನವಿ ಮಾಡಿದೆ. ಯಾವುದಕ್ಕೂ ಉತ್ತರ ಬರಲಿಲ್ಲ ಎಂದು ಮುಖ್ಯಮಂತ್ರಿ ಗಳು ಹೇಳಿದರು.

ಜಿಎಸ್ ಟಿ ಜುಲೈನಿಂದ ಜಾರಿಗೆ ಬರಲಿದೆ. ಅದಕ್ಕೆ ನಮ್ಮ ವಿರೋಧ ಇಲ್ಲ. ಯುಪಿಎ ಸರ್ಕಾರ ಜಿಎಸ್ ಟಿ ಜಾರಿಗೆ ಮುಂದಾಗಿತ್ತು. ಆಗ ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಅವರು ವಿರೋಧ ವ್ಯಕ್ತಪಡಿಸಿದ್ದರು.

ಜಿಎಸ್ ಟಿ ಜಾರಿಯಿಂದಾಗುವ ನಷ್ಟಕ್ಕೆ ಪರಿಹಾರ ಕೊಡುವ ಬಗ್ಗೆ ಕೇಂದ್ರದ ಬಜೆಟ್ ನಲ್ಲಿ ಪ್ರಸ್ತಾಪ ಮಾಡಿಲ್ಲ. ಆ ಕುರಿತು ಗಮನ ಹರಿಸುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s