ಮೇ 8 ರಿಂದ ಇಂದ್ರಧನುಷ್ ಅಭಿಯಾನ

                                         

 

ರಾಜ್ಯದಲ್ಲಿ ಅಪೂರ್ಣ ಲಸಿಕೆ ಪಡೆದಿರುವ  ಮತ್ತು ಯಾವುದೇ ಲಸಿಕೆಯನ್ನು ಪಡೆಯದಿರುವ ಮಕ್ಕಳಿಗೆ ಮತ್ತು ಗರ್ಭಿಣಿ ಸ್ರ್ತೀಯರಿಗೆ ವಿಶೇಷ ಲಸಿಕೆ ನೀಡಲು ಇಂದ್ರಧನುಷ್ ಅಭಿಯಾನವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೈಗೊಂಡಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ರಾಜ್ಯದ ಆರು ಜಿಲ್ಲೆಗಳಲ್ಲಿ ಗರ್ಭಿಣಿ ಸ್ತ್ರೀಯರು ಹಾಗೂ ಎರಡು ವರ್ಷದೊಳಗಿನ ಮತ್ತು ಐದ ರಿಂದ ಆರು ವರ್ಷದ ಅಪೂರ್ಣ ಲಸಿಕೆ ಪಡೆದಿರುವ ಹಾಗೂ ಯಾವುದೇ ಲಸಿಕೆಗಳನ್ನು ಪಡೆಯದಿರುವ ಮಕ್ಕಳಿಗೆ ಲಸಿಕೆ ನೀಡಲು 2017 ರ ಮೇ ತಿಂಗಳಿಂದ   ಇಂದ್ರಧನುಷ್ ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಹೇಳಿದರು.

ವಿಶೇಷ ಲಸಿಕೆ:

ಈ ಕುರಿತ ಪೂರ್ವ ಸಿದ್ಧತೆಯನ್ನು ಪರಿಶೀಲಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರು ಈ ಅಭಿಯಾನವನ್ನು ಮೇ, ಜೂನ್, ಜುಲೈ ಮತ್ತು ಆಗಸ್ಟ್  ತಿಂಗಳಲ್ಲಿ ನಡೆಸಲಾಗುತ್ತದೆ.  ರಾಜ್ಯದಲ್ಲಿ ನಾಲ್ಕನೆ ಹಂತದ ಇಂಧ್ರಧನುಷ್ ಅಭಿಯಾನಕ್ಕೆ ಬಿ.ಬಿ.ಎಂ.ಪಿ.ಯೂ ಸೇರಿದಂತೆ ಬೆಂಗಳೂರು, ಬೆಳಗಾವಿ, ಕಲಬುರಗಿ, ವಿಜಯಪುರ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳನ್ನು ಗುರುತಿಸಲಾಗಿದೆ.  2017 ರ ಮೇ 8 ರಿಂದ  7 ಕಾರ್ಯದಿನಗಳ ಕಾಲ (ಸಾರ್ವಜನಿಕ ರಜಾ ದಿನಗಳನ್ನು ಹೊರತುಪಡಿಸಿ), ಜೂನ್, ಜುಲೈ, ಆಗಸ್ಟ್ ತಿಂಗಳ 7 ನೇ ತಾರೀಖಿನಿಂದ ಏಳು ಕಾರ್ಯದಿನಗಳ ಕಾಲ ಲಸಿಕೆಯಿಂದ ವಂಚಿತರಾದ ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರಿಗೆ ಆಯ್ದ ಕೇಂದ್ರಗಳಲ್ಲಿ ವಿಶೇಷವಾಗಿ ಲಸಿಕೆಗಳನ್ನು ನೀಡಲಾಗುವುದು ಎಂದರು.

 

ಅಭಿಯಾನದಡಿ 10 ಲಸಿಕೆಗಳು:

ಇಂಧ್ರಧನುಷ್ ಅಭಿಯಾನದಡಿ ಹಿಂದೆ 7 ಲಸಿಕೆಗಳನ್ನು ನೀಡಲಾಗುತ್ತಿತ್ತು.  ಪ್ರಸ್ತುತ ಈ ಕಾರ್ಯಕ್ರಮದಡಿ 10 ಲಸಿಕೆಗಳನ್ನು ನೀಡಲಾಗುತ್ತಿದೆ.  ಗರ್ಭಿಣಿ ಸ್ತ್ರೀಯರು, ಎರಡು ವರ್ಷದೊಳಗಿನ ಮಕ್ಕಳು ಹಾಗೂ ಐದರಿಂದ ಆರು ವರ್ಷದ ಮಕ್ಕಳು ಈ ಕಾರ್ಯಕ್ರಮದ ವ್ಯಾಪ್ತಿಗೆ ಬರುತ್ತಾರೆ.  ಇಂದ್ರಧನುಷ್ ಅಭಿಯಾನದಡಿ ಕೊಳಚೆ ಮತ್ತು ವಲಸೆ ಪ್ರದೇಶ, ಅಲೆಮಾರಿ ಪ್ರದೇಶ ಇಟ್ಟಿಗೆ ಕಾರ್ಖಾನೆ, ಕಟ್ಟಡ ನಿರ್ಮಾಣ ಪ್ರದೇಶಗಳು ಮತ್ತಿತರ ಕಡೆಗಳಲ್ಲಿ ಲಸಿಕೆ ವಂಚಿತರನ್ನು ಗುರುತಿಸಿ  ಲಸಿಕೆ ನೀಡಲಾಗುತ್ತದೆ.  ಪೊಲೀಯೋ, ಹೆಪಟೈಟಿಸ್ ಬಿ, ಬಾಲಕ್ಷಯ, ಡಿಫ್ತಿರಿಯ, ಪೆರ್ಟುಸಿಸ್, ಧನುರ್ವಾಯು, ಹಿಬ್, ದಡಾರ, ರುಬೆಲ್ಲಾ ಹಾಗೂ ಜಾಪಾನಿಸ್ ಎನ್‍ಸಫಲೈಟಿಸ್  ಹತ್ತು ಮಾರಕ ರೋಗಳಿಗೆ ಲಸಿಕೆ ನೀಡಲಾಗುತ್ತಿದೆ.  ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ,ಮನೆ ಭೇಟಿ ನೀಡಿ ಲಸಿಕೆ ಬಿಟ್ಟು ಹೋಗಿರುವ ಫಲಾನುಭವಿಗಳನ್ನು ಗುರುತಿಸಿ ಲಸಿಕೆ ಪಡೆಯುವಂತೆ ಪ್ರೇರೆಪಿಸುತ್ತಾರೆ.  ಇದಕ್ಕಾಗಿ ಅವರಿಗೆ ಗೌರವಧನ ನೀಡಲಾಗುತ್ತದೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ, ಶಿಕ್ಷಣ ಇಲಾಖೆಗಳ ಸಹಯೋಗದೊಂದಿಗೆ ಈ ಯೋಜನೆಯನ್ನು ಯಶಸ್ವಿಗೊಳಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.  ಅಲ್ಲದೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ನೆರವನ್ನೂ ಪಡೆಯುವಂತೆ  ಡಾ ಶಾಲಿನಿ ರಜನೀಶ್ ಸಲಹೆ ನೀಡಿದರು.

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s