ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ

ಕರ್ನಾಟಕ ಲಲಿತಕಲಾ ಅಕಾಡೆಮಿಯ 2015, 2016 ಮತ್ತು 2017ನೇ ಸಾಲಿನ ಪುಸ್ತಕ ಬಹುಮಾನಕ್ಕೆ  ಅರ್ಜಿ ಆಹ್ವಾನಿಸಲಾಗಿದೆ.ಪುಸ್ತಕ ಬಹುಮಾನದ ಮೊತ್ತ ರೂ.25,000/-ಗಳು ಹೊಂದಿದ್ದು, ಪುಸ್ತಕ ಬಹುಮಾನಕ್ಕೆ ಕಳುಹಿಸುವ ಪುಸ್ತಕವು ಪುನರ್ ಮುದ್ರಣವಾಗಿರಬಾರದು.  ಮೊದಲು ಆವೃತಿಯಲ್ಲಿ ಪ್ರಕಟಗೊಂಡಿರಬೇಕು.

2015ನೇ ಸಾಲಿನ ಬಹುಮಾನಕ್ಕೆ ದಿ:01-01-2014 ರಿಂದ 31-12-2014ರ ಅವಧಿಯಲ್ಲಿ ಮುದ್ರಣವಾಗಿರಬೇಕು. 2016ನೇ ಸಾಲಿನ ಬಹುಮಾನಕ್ಕೆ ದಿ:01-01-2015 ರಿಂದ 31-12-2015ರ ಅವಧಿಯಲ್ಲಿ ಮುದ್ರಣವಾಗಿರಬೇಕು. ಹಾಗೂ 2017ನೇ ಸಾಲಿನ ಬಹುಮಾನಕ್ಕೆ ದಿ:01-01-2016 ರಿಂದ 31-12-2016ರ ಅವಧಿಯಲ್ಲಿ ಮುದ್ರಣಗೊಂಡಿರಬೇಕು.

ಪುಸ್ತಕ ಬಹುಮಾನಕ್ಕೆ ಅರ್ಜಿ ಸಲ್ಲಿಸುವ ಲೇಖಕರು ತಾವು ಕಳುಹಿಸುವ ಪುಸ್ತಕದ 4 ಪ್ರತಿಗಳನ್ನು ಉಚಿತವಾಗಿ ಕರ್ನಾಟಕ ಲಲಿತಕಲಾ ಅಕಾಡೆಮಿಗೆ ಕಡ್ಡಾಯವಾಗಿ ನೀಡಬೇಕು. ಅಲ್ಲದೇ ಪುಸ್ತಕ ಬಹುಮಾನಕ್ಕೆ ಆಸಕ್ತ ಸಾರ್ವಜನಿಕರೂ ಸಹ ಲಲಿತಕಲೆಗೆ ಸಂಬಂಧಪಟ್ಟ ಪುಸ್ತಕಗಳ ಹೆಸರುಗಳನ್ನು ಸೂಚಿಸಬಹುದಾಗಿದೆ.

ಅರ್ಜಿಯನ್ನು  19-05-2017 ರೊಳಗಾಗಿ ಅಂಚೆ ಮೂಲಕ ಕರ್ನಾಟಕ ಲಲಿತಕಲಾ ಅಕಾಡೆಮಿಗೆ ಸಲ್ಲಿಸಬೇಕು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   ಹೆಚ್ಚಿನ ಮಾಹಿತಿಗಾಗಿ ರಿಜಿಸ್ಟ್ರಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ, 1ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002  ದೂರವಾಣಿ ಸಂಖ್ಯೆ 080-22480297, 0836-2442909 ಸಂಪರ್ಕಿಸಲು ಕೋರಿದ್ದಾರೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s