ಗದಗ ಜಿಲ್ಲೆಯಲ್ಲಿ ಜನಸ್ಪಂದನ ಸಭೆ

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಎರಡನೇ ಹೋಬಳಿ ಮಟ್ಟದ ಜಿಲ್ಲೆಯ 6 ನೇ ಜನಸ್ಪಂದನ ಸಭೆಯು ಕಲಕೇರಿಯಲ್ಲಿ ಜಿಲ್ಲಾಧಿಕಾರಿ ಮನೋಜ್ ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಗ್ರಾಮಗಳಲ್ಲಿ ಸಭೆಗಳು ನಡೆದವು :

ಮುಂಡರಗಿ ಹೋಬಳಿಯ ಕಲಕೇರಿ, ಬಿದರಳ್ಳಿ, ಬಾಗೇವಾಡಿ, ಹಮ್ಮಿಗಿ, ಸಿಂಗ್ಟಾಲೂರು, ಕೊಲ೯ಳ್ಳಿ, ಹೆಸರೂರು ಹಾಗೂ ಬಿಡ್ನಾಳ ಗ್ರಾ. ಪಂ. ವ್ಯಾಪ್ತಿಗಳಲ್ಲಿನ ವಿವಿಧ ಗ್ರಾಮಗಳ ಜನತೆಗೆ ಕುಡಿಯುವ ನೀರಿನ ಪೂರೈಕೆ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ, ಹಾಗೂ ಜಾನುವಾರುಗಳಿಗೆ ಮೇವು, ನೀರು ಪೂರೈಕೆ ಕುರಿತು ಜಿ.ಪಂ.ಗ್ರಾ.ಪಂ.ಸದಸ್ಯರು, ತಾ.ಪಂ. ಸದಸ್ಯರು ಹಾಗೂ ಸಾವ೯ಜನಿಕರ ಅಹವಾಲುಗಳನ್ನು ಜಿಲ್ಲಾಧಿಕಾರಿಗಳು ಆಲಿಸಿದರು.

ಸೂಚನೆ:
ಜಿಲ್ಲೆಯಲ್ಲಿ ಈಗಾಗಲೇ ತೆರೆದ ಕೊಳವೆ ಭಾವಿಗಳನ್ನು ಮುಚ್ಚಿಸಲು ನಿದೇ೯ಶನ ನೀಡಲಾಗಿದ್ದು ತಮ್ಮ ಗ್ರಾ.ಪಂ. ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪರಿಶೀಲನೆ ಜರುಗಿಸಿ ಅಂತಹ ಪ್ರಕರಣ ಕಂಡು ಬಂದಲ್ಲಿ ತಕ್ಷಣ ಅವುಗಳನ್ನು ಮುಚ್ವಿ ಸುರಕ್ಷಿತವಾಗಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ.ಸಿಇಓ ಮಂಜುನಾಥ ಚವ್ಹಾಣ ಸಂಬಂಧಪಟ್ಟ  ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ರಾಜ್ಯದ ಜಲಸಂಪನ್ಮೂಲ ಇಲಾಖೆಯ ಸಂಸದೀಯ ಕಾರ್ಯದರ್ಶಿ ರಾಮಕೃಷ್ಣ ದೊಡ್ಡಮನಿ, ಜಿ.ಪಂ. ಸಿಇಓ ಮಂಜುನಾಥ ಚವ್ಹಾಣ, ಜಿ.ಪಂ. ಸದಸ್ಯರಾದ ಶೋಭಾ ಮೇಟಿ, ಈರಣ್ಣಾ ನಾಡಗೌಡ, ಉಪ ವಿಭಾಗಾಧಿಕಾರಿ ಪಿ‌.ಎಸ್. ಮಂಜುನಾಥ, ಜಿ.ಪಂ. ಯೋಜನಾ ನಿದೇ೯ಶಕ ಟಿ. ದಿನೇಶ, ಮುಂಡರಗಿ ತಹಶೀಲ್ದಾರ ಭ್ರಮರಾಂಬಾ ಗುಬ್ಬಿಶೆಟ್ಟರ, ವಿವಿಧ ಇಲಾಖೆಗಳ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s