ಹೋಟೆಲ್‍ಗಳಲ್ಲಿ ಗ್ರಾಹಕರಿಗೆ ಸೇವಾ ಶುಲ್ಕವನ್ನು ವಿಧಿಸಿದರೆ ಕ್ರಮ : ಸಚಿವ ಯು.ಟಿ. ಖಾದರ್

u_t_khaderಹೋಟೆಲ್‍ಗಳಲ್ಲಿ ಗ್ರಾಹಕರಿಗೆ ಸೇವಾ ಶುಲ್ಕವನ್ನು ವಿಧಿಸದಂತೆ ಮುಂಬರುವ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಯು.ಟಿ. ಖಾದರ್ ಅವರು ತಿಳಿಸಿದರು.

ಸಚಿವರು ವಿಕಾಸಸೌಧದಲ್ಲಿ ಹಮ್ಮಿಕೊಳ್ಳಲಾದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು, ಮಂತ್ರಾಲಯವು ಕಳುಹಿಸಿರುವ ಆದೇಶದನ್ವಯ, ಈ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಜಾಗೃತಿಯನ್ನು ಸಹ ಮೂಡಿಸಲಾಗುವುದು. ಆಹಾರವನ್ನು ಸಾರ್ವಜನಿಕರು ವ್ಯರ್ಥ ಮಾಡದಂತೆ ಕ್ರಮ ವಹಿಸಬೇಕು. ಮಿಕ್ಕ ಆಹಾರವನ್ನು ಸ್ವಯಂ ಸೇವಾ ಸಂಸ್ಥೆಗಳಿಗೆ ನೀಡಬೇಕು. ಈ ಹಿಂದೆ ಹೋಟೆಲ್‍ಗಳಲ್ಲಿ ಶೇ 6 ರಿಂದ 8 ರಷ್ಟು ಸೇವಾ ಶುಲ್ಕವನ್ನು ವಿಧಿಸುತ್ತಿದ್ದರು. ಯಾವುದೇ ಗ್ರಾಹಕನು ಹೋಟೆಲ್‍ಗಳಲ್ಲಿ ಸೇವಾ ಶುಲ್ಕವನ್ನು ಹೇರಿಸುವುದರ ವಿರುದ್ಧ ಜಿಲ್ಲಾ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಬಹುದು. ಅದನ್ನು ಕಾನೂನು ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದ ಅನಿಲ ರಹಿತ ಪಡಿತರ ಚೀಟಿದಾರರಿಗೆ ಉಚಿತ ಅನಿಲ ಸಂಪರ್ಕ ಒದಗಿಸಲು ‘ಅನಿಲ ಭಾಗ್ಯ” ವನ್ನು ಹಾಗೂ ಗ್ರಾಮೀಣ ಪ್ರದೇಶದ ಅನಿಲ ಪಡಿತರ ಚೀಟಿಗಳಿಗೆ ಅವರ ಆಯ್ಕೆ ಮೇರೆಗೆ ಪಡಿತರ ಸೀಮೆ ಎಣ್ಣೆ ಬದಲಿಗೆ ಪುನರ್ಭರ್ತಿ (ರೀಚಾರ್ಜೆಬಲ್) ಎಲ್‍ಇಡಿ ಬಲ್ಬಸೆಟ್ ನೀಡುವ ಪುನರ್ಬೆಳಕು ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದೆಂದರು.

ಉಜ್ವಲ ಯೋಜನೆಯಡಿ ಕೇಂದ್ರ ಸರ್ಕಾರವು ಆಯ್ಕೆಯಾದ ಫಲಾನುಭವಿಗಳಿಗೆ ಉಚಿತ ಅನಿಲ ಸಂಪರ್ಕ ನೀಡುತ್ತದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವು 1000 ರೂ ಬೆಲೆಯುಳ್ಳ ಎರಡು ಬರ್ನರ್‍ಗಳ ಗ್ಲಾಸ್ ಸ್ಟವ್‍ಅನ್ನು ನೀಡುತ್ತದೆ. ರಾಜ್ಯವನ್ನು ಶೇ 100 ರಷ್ಟು ಎಲ್‍ಪಿಜಿ ಯುಕ್ತ ರಾಜ್ಯವನ್ನಾಗಿಸಲು ಕೇಂದ್ರ ಸರ್ಕಾರದ ಉಜ್ವಲ ಯೋಜನೆಯ ವ್ಯಾಪ್ತಿಗೆ ಒಳಪಡದೇ ಇರುವ ಕುಟುಂಬಗಳಿಗೂ ಸಹ ರಾಜ್ಯ ಸರ್ಕಾರ ವತಿಯಿಂದ ಉಚಿತ ಅನಿಲ ಸಂಪರ್ಕವನ್ನು ‘ಅನಿಲಭಾಗ್ಯ’ ಯೋಜನೆಯಡಿ ನೀಡಲು ಉದ್ದೇಶಿಸಿದೆ. ಗ್ರಾಮೀಣ ಭಾಗದ ಗ್ಯಾಸ್ ಸಂಪರ್ಕವಿರುವ ಗ್ರಾಹಕರಿಗೆ ಕಾರ್ಡ್‍ಗೆ 1 ಲೀಟರ್ ಸೀಮೆಎಣ್ಣೆಯನ್ನು ಸಹ ನೀಡಲಾಗುವುದು ಎಂದರು.

ಅನಿಲಭಾಗ್ಯ ಯೋಜನೆಯಡಿ 5 ಲಕ್ಷ ಅರ್ಹ ಬಡ ಕುಟುಂಬಗಳಿಗೆ ಉಚಿತವಾಗಿ ಅನಿಲ ಸಂಪರ್ಕಕ್ಕಾಗಿ ಪ್ರತಿ ಫಲಾನುಭವಿಗಳಿಗೆ 1600 ರೂ. ಸಹಾಯಧನ ವಿತರಣೆ ಹಾಗೂ ಅನಿಲ ಸೌಲಭ್ಯದೊಂದಿಗೆ ಗ್ರಾಮೀಣ ಪ್ರದೇಶದ ಪಡಿತರ ಚೀಟಿದಾರರಿಗೆ ತಮಗೆ ಹಂಚಿಕೆಯಾದ ಸೀಮೆಎಣ್ಣೆ ಅಥವಾ ಉಚಿತ ರೀಚಾರ್ಜೆಬಲ್ ಎಲ್‍ಇಡಿ ಸೆಟ್‍ಗಳನ್ನು ಆಯ್ಕೆ ಮಾಡುವ ಅವಕಾಶ ಕಲ್ಪಿಸಲಾಗಿದೆ ಎಂದರು.

ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಹರ್ಷ ಗುಪ್ತಾ ಉಪಸ್ಥಿತರಿದ್ದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s