ಜಿಲ್ಲಾ ಕೇಂದ್ರಗಳಲ್ಲಿ ಖಾದಿ ಭವನ ಸ್ಥಾಪನೆಗೆ 3ಕೋಟಿ: ಮುಖ್ಯಮಂತ್ರಿ ಸಿದ್ದರಾಮಯ್ಯ

a8831fd4-d7e8-45b2-8494-a9b6fbdf3122‘ಖಾದಿ’ ಗಾಂಧೀಜಿ ಅವರನ್ನ ಸದಾ ನೆನಪಿಗೆ ತರುವ ಮತ್ತು ಸ್ವಾವಲಂಬನೆ,ಸ್ವಾಭಿಮಾನದ ಸಂಕೇತ. ದೇಶೀಯ ಉಡುಪುಗಳಿಗೆ ಮನ್ನಣೆ ಸಿಗಬೇಕು ಎಂಬ ನಿಟ್ಟಿನಲ್ಲಿ ಆರಂಬಗೊಂಡ ಖಾದಿ ಗುಡಿ ಕೈಗಾರಿಕೆಯ ಮಂಚೂಣಿ ಸ್ಥಾನದಲ್ಲಿದೆ. ಖಾದಿ ಚಳುವಳಿ ಸ್ವಾತಂತ್ರ್ಯ ಸಂಗ್ರಾಮದ ಭಾಗವಾಗಿಯೂ ಮಹತ್ವದ ಸ್ಥಾನ ಪಡೆಯುತ್ತದೆ. ರಾಜಧಾನಿ ಬೆಂಗಳೂರಿನಲ್ಲಿ ಈಗ ಖಾದಿ ಉತ್ಸವ ಆರಂಭಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಏಪ್ರಿಲ್ 24ರಂದು ಖಾದಿ ಉತ್ಸವಕ್ಕೆ ಚಾಲನೆ ನೀಡಿದರು. ಈ ಕುರಿತ ವರದಿ ಇಲ್ಲಿದೆ.

 

ಖಾದಿ ಮಂಡಳಿಗೆ ರಾಷ್ಟ್ರ ಪ್ರಶಸ್ತಿ  ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗೆ ಈ ಬಾರಿ ರಾಷ್ಟ್ರ ಪ್ರಶಸ್ತಿ ದೊರೆತಿರುವುದು ಪ್ರಶಂಸನೀಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು

 

51946080-8394-46e9-87e1-82ba8e72e11eಸ್ವಾತಂತ್ರ್ಯ  ಉದ್ಯಾನವನದಲ್ಲಿ ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ  ಹಮ್ಮಿಕೊಳ್ಳಲಾದ ರಾಷ್ಟ್ರಮಟ್ಟದ ಖಾದಿ ಉತ್ಸವವನ್ನು ಉದ್ಘಾಟಿಸಿ ಮುಖ್ಯಮಂತ್ರಿಗಳು  ಮಾತನಾಡಿದರು. ಮಹಾತ್ಮ ಗಾಂಧೀಜಿಯವರು ಗುಡಿ ಕೈಗಾರಿಕೆಗಳ ಬೆಳವಣಿಗೆಗೆ ಮಹತ್ವ ನೀಡಿದ್ದರು. ಯಾವ ಗ್ರಾಮದಲ್ಲಿ ಚರಕದ ಶಬ್ದ  ಕೇಳಿಸುತ್ತದೋ ಅಲ್ಲಿ ಬಡತನ ಮತ್ತು ನಿರುದ್ಯೋಗ  ಸುಳಿಯುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದರು.ಇಂದಿನ ದಿನಗಳಲ್ಲಿ ಹಳ್ಳಿಗಳಲ್ಲಿ ಗುಡಿ ಕೈಗಾರಿಕೆಗಳು ನಶಿಸಿ ಹೋಗುತ್ತಿವೆ. ಇವುಗಳನ್ನು ನಾವು ಪುನಶ್ಚೇತನ ಗೊಳಿಸಬೇಕು. ಇವುಗಳಿಂದ ಸಾಕಷ್ಟು ಕುಟುಂಬಗಳು ತಮ್ಮ ಬದುಕನ್ನು ಕಟ್ಟಿಕೊಂಡಿವೆ ಎಂದರು.

 

5effa40a-8955-463d-a62c-1e02e9d82143ಕಳೆದ ಎರಡು ವರ್ಷಗಳಲ್ಲಿ ಸರ್ಕಾರ ಖಾದಿ ಮತ್ತ ಗ್ರಾಮೋದ್ಯೋಗ ಮಂಡಳಿಗೆ  140 ಕೋಟಿ ಅನುದಾನ ನೀಡಿದೆ.ಈ ಬಾರಿಯ ಬಜೆಟ್ ನಲ್ಲಿ  44 ಕೋಟಿ ಮೀಸಲಿಟ್ಟಿದೆ. 30 ಜಿಲ್ಲೆಗಳಲ್ಲೂ ಖಾದಿ ಭವನ ಸ್ಥಾಪಿಸಲು ಸರ್ಕಾರ ಪ್ರತಿ   ಜಿಲ್ಲೆಗೆ 3 ಕೋಟಿ ಅನುದಾನ ನೀಡಲಾಗಿದ್ದು, ಈಗಾಗಲೇ ನಿರ್ದೇಶಕರುಗಳನ್ನು  ನೇಮಿಸಲಾಗಿದೆ ಎಂದರು.

 

2784bfde-e704-46d2-911b-0ea2cc9fe4cbಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಮಂಡಳಿಯ ಅಧ್ಯಕ್ಷರಾದ ಯಲುವಹಳ್ಳಿ ರಮೇಶ್ ಅವರು ಗಾಂಧಿಯವರ  ಗ್ರಾಮಸ್ವರಾಜ್ಯ ಕನಸನ್ನು ನಾವು ನನಸು ಮಾಡಬೇಕು. ಈ ಬಾರಿ ಮಂಡಳಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಮಂಡಳಿಯಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.  ಕಾರ್ಯಕ್ರಮದಲ್ಲಿ  ಬೆಂಗಳೂರು ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಕೆ.ಜೆ.ಜಾರ್ಜ್ , ಚಿಕ್ಕಬಳ್ಳಾಪುರ ಶಾಸಕ   ಡಾ.ಕೆ.ಸುಧಾಕರ್, ಬಿಬಿಎಂಪಿ ಸದಸ್ಯೆ ಆರ್.ಜೆ.ಲತಾ, ವಿಧಾನ ಪರಿಷತ್ ಸದಸ್ಯ  ಗೋವಿಂದರಾಜು, ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಡಾ.ಹೆಚ್. ಎಸ್. ದೊರೆಸ್ವಾಮಿ, ಡಾ.ಪಾಟೀಲ್ ಪುಟ್ಟಪ್ಪ ಮುಂತಾದವರು ಉಪಸ್ಥಿತರಿದ್ದರು.    60 ವರ್ಷದ ಹಾದಿಯಲ್ಲಿರುವ ಖಾದಿ ಮಂಡಳಿಯು ಖಾದಿ ಉತ್ಸವ-2017 ಅನ್ನು ಏಪ್ರಿಲ್  24 ರಿಂದ ಮೇ 23 ರವರೆಗೆ ಗಾಂಧಿ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಂಡಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s