ರಾಜ್ ಜೀವನದ ಮೌಲ್ಯ ಅಳವಡಿಸಿಕೊಳ್ಳಿ : ಸಚಿವ ಕೆ.ಜೆ. ಜಾರ್ಜ್

7ಡಾ ರಾಜ್‍ಕುಮಾರ್ ಅವರ ಆದರ್ಶಗಳನ್ನು ಎಲ್ಲರೂ ಪಾಲಿಸುವಂತಾಗಬೇಕು. ಅವರು ಜಗತ್ತು ಕಂಡಂತಹ ಅದ್ಬುತ ಕಲಾವಿದ, ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿಯು ದೇಶ ವಿದೇಶಗಳ ಪ್ರವಾಸಿಗರ ತಾಣವಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರು ತಿಳಿಸಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ನಡೆದ ಡಾ ರಾಜ್‍ಕುಮಾರ್ 89 ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು ಡಾ: ರಾಜ್‍ಕುಮಾರ್ ಅವರ ಜೀವನದ ಮೌಲ್ಯಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತನ್ನು ನುಡಿದರು.
ಡಿಜಿಟಲೀಕರಣಗೊಳ್ಳಲಿ:

Ananthjiನಾನು ಈ ಕಾರ್ಯಕ್ರಮಕ್ಕೆ ಸಂಸದನಾಗಿ, ಸಚಿವನಾಗಿ ಬಂದಿಲ್ಲ. ಡಾ ರಾಜ್‍ಕುಮಾರ್ ಅವರ ಅಭಿಮಾನಿಯಾಗಿ ಬಂದಿದ್ದೇನೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಅನಂತ್‍ಕುಮಾರ್ ಅವರು ನುಡಿದರು.ಜಗತ್ತಿನ ಎಲ್ಲಾ ನಾಗರಿಕರ ಡಾ ರಾಜ್‍ಕುಮಾರ್ ಅವರ ಸಿನಿಮಾಗಳು ಅವರು ಹಾಡಿರುವ ಹಾಡುಗಳು ಡಿಜಿಟಲಿಕರಣವಾಗಬೇಕು ಆ ರೀತಿ ರಾಜ್ಯ, ಕೇಂದ್ರ ಸರ್ಕಾರ ಮತ್ತು ಡಾ ರಾಜ್‍ಕುಮಾರ್ ಅವರ ಕುಟುಂಬದವರು ಸಹ ಶ್ರಮಿಸಿ ಅವರ ಜೀವನದ ಮೌಲ್ಯಗಳನ್ನು ಅಂತಾರಾಷ್ಟ್ರೀಯಮಟ್ಟದಲ್ಲಿ ಪ್ರಚಾರಪಡಿಸಬೇಕು ಎಂದರು.

ಶ್ರೇಷ್ಠ ವ್ಯಕ್ತಿತ್ವ:

4ಸಮಾಜದಲ್ಲಿ ಎಲ್ಲಾ ವರ್ಗದ ಜನರಿಗೆ ಇಷ್ಟವಾಗುವ ವ್ಯಕ್ತಿ ಎಂದರೆ ಡಾ ರಾಜ್‍ಕುಮಾರ್ ಏಕೆಂದರೆ ಅವರು ಯಾವ ಜಾತಿ, ವರ್ಗದ ಭೇದವಿಲ್ಲದೆ ಸಾರ್ವತ್ರಿಕವಾಗಿ ಎಲ್ಲರನ್ನೂ ಪ್ರೀತಿಸುತ್ತಿದ್ದರು. ಆದ್ದರಿಂದ ಅವರು ಯಾವ ಜಾತಿಗೂ ಸೀಮಿತವಾಗದ ಶ್ರೇಷ್ಠ ವ್ಯಕ್ತಿಯಾದರು ಎಂದು ಖ್ಯಾತ ಸಾಹಿತಿ ಡಾ ಬರಗೂರು ರಾಮಚಂದ್ರಪ್ಪ ಅವರು ನುಡಿದರು. ಡಾ ರಾಜ್‍ಕುಮಾರ್ ಅವರು ನಾಡುಕಂಡ ಸರ್ವಶ್ರೇಷ್ಟ ನಟ ಏಕೆಂದರೆ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು, ನೆರೆಹೊರೆಯವರು ಇನ್ನೂ ಮುಂತಾದ ವರ್ಗದವರು ಯಾವ ಯಾವ ರೀತಿ ನೆಮ್ಮದಿಯಿಂದ ಸಮಾಜಕ್ಕೆ ತೊಂದರೆಯಾಗದ ರೀತಿ ಬದುಕಬೇಕು ಎಂದು ಅವರು ಅಭಿನಯಿಸುವ ಚಿತ್ರದ ಮುಖಾಂತರ ಸಮಾಜಕ್ಕೆ ತಿಳಿಸಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

6ಈ ಕಾರ್ಯಕ್ರಮದಲ್ಲಿ ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು, ಕಂಠೀರವ ಸ್ಟುಡಿಯೋಸ್ ಅಧ್ಯಕ್ಷೆ ಅಶ್ವಿನಿ ಕೃಷ್ಣಮೂರ್ತಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಹಿರಿಯ ನಟಿ ಜಯಂತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್.ಆರ್. ವಿಶುಕುಮಾರ್ ಅವರು ಉಪಸ್ಥಿತರಿದ್ದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s