ನಿರ್ದೇಶಕರ ನೋಟ: ಡಾ ರಾಜ್ ‘ಡೂಡಲ್’

 

 

 

 

 

 

 

 

 

 

 

ಇಂದು ಡಾ ರಾಜಕುಮಾರ್ ಅವರ ಜನ್ಮದಿನ. ‘ನಟಸಾರ್ವಭೌಮ’ ಎಂದೇ ಜನಮಾನಸದಲ್ಲಿ ನೆಲೆ ನಿಂತಿರುವ ಡಾ ರಾಜಕುಮಾರ್ ಅವರದ್ದು ಅವರ ಪಾತ್ರಗಳಿಗೂ ಮೀರಿ ಬೆಳೆದುನಿಂತ ವ್ಯಕ್ತಿತ್ವ.

ಹಾಗೆ ಕನ್ನಡಿಗರಾದ ನಾವು ಮಾತ್ರ ಭಾವಿಸಿದ್ದೇವೆ ಎಂದುಕೊಂಡಿದ್ದೆ. ಆದರೆ ಇಂದು ಮಧ್ಯರಾತ್ರಿಯಿಂದಲೇ ಗೂಗಲ್ ನಾವು ಮಾತ್ರವಲ್ಲ ಇಡೀ ಜಗತ್ತು ಹಾಗೆ ಭಾವಿಸಿದೆ ಎಂದು ಸಾಬೀತು ಮಾಡಿದೆ. ಗೂಗಲ್ ಪ್ರತೀ ದಿನ ಸೃಷ್ಟಿಸುವ ‘ಡೂಡಲ್’ ನಲ್ಲಿ ಡಾ ರಾಜ್ ಅವರನ್ನು ಗೌರವಿಸಿದೆ. ಇಡೀ ಭಾರತದ ಎಲ್ಲಾ ಭಾಷಿಕರಿಗೂ ರಾಜ್ ಅವರ ಮಹತ್ವ ಗೊತ್ತು. ಕನ್ನಡ ಚಿತ್ರ ರಂಗದ ಮಹಾನ್ ಕಲಾವಿದ ಎನ್ನುವುದೂ ಗೊತ್ತು

ಆದರೆ ಗೂಗಲ್ ಈಗ ಡೂಡಲ್ ಅನ್ನು ರೂಪಿಸುವುದರ ಮೂಲಕ ಮತ್ತೆ ಎಲ್ಲಾ ಭಾಷಿಕರೂ ಡಾ ರಾಜಕುಮಾರ್ ಅವರನ್ನೂ, ಅವರ ಕೊಡುಗೆಯನ್ನೂ ಮತ್ತೊಮ್ಮೆ ನೆನೆಯುವಂತೆ ಮಾಡಿದೆ. ಅಷ್ಟೇ ಅಲ್ಲ, ಮುಖ್ಯ ವಾಹಿನಿಯ ಇಂಗ್ಲಿಷ್, ಹಿಂದಿ ಮಾಧ್ಯಮಗಳೂ ಸಹಾ ಇಂದು ರಾಜ್ ಅವರನ್ನು, ಗೂಗಲ್ ರೂಪಿಸಿದ ಡೂಡಲ್ ಅನ್ನು ಸ್ಮರಿಸಿ ಲೇಖನಗಳನ್ನು ಬರೆದಿದೆ.

‘ಎನ್ ಡಿ ಟಿ ವಿ’ ಚಾನಲ್ ಡಾ ರಾಜ್ ಅವರನ್ನು ‘ತೆರೆಯ ಮೇಲೆ ಎಂದೂ ಮಧ್ಯ ಸೇವಿಸುವುದಿಲ್ಲ, ಸಿಗರೇಟು ಸೇದುವುದಿಲ್ಲ, ಕೀಳು ಭಾಷೆ ಬಳಸುವುದಿಲ್ಲ’ ಎಂದು ಪ್ರಮಾಣ ಮಾಡಿದ ಕಲಾವಿದ ಎಂದು ಬಣ್ಣಿಸಿ ಗೌರವ ಸೂಚಿಸಿದೆ.

‘ಡೂಡಲ್’ ಎನ್ನುವುದು ಜರ್ಮನ್ ನಿಂದ ಬಂದ ಪದ. ಸರಳವಾಗಿ ಹೇಳಬೇಕೆಂದರೆ ಅದರ ಅರ್ಥ ಸರಳವಾಗಿ ಬಿಂಬಿಸುವುದು ಎಂದು. ಗೂಗಲ್ ನ ಒಳಗೆ ಡೂಡಲ್ ಗಳು ಯಾವುದಿರಬೇಕು ಎಂದು ಆಯ್ಕೆ ಮಾಡಲೆಂದೇ ಸಂಶೋಧನಾ ತಂಡವೊಂದಿದೆ. ಈ ತಂಡ ಡಾ ರಾಜ್ ಅವರನ್ನು ಆಯ್ಕೆ ಮಾಡಿ ಸತತವಾಗಿ ವಾರಗಳ ಕಾಲ ಹೇಗೆ ಅವರನ್ನು ಡೂಡಲ್ ನಲ್ಲಿ ಬಿಂಬಿಸಬೇಕು ಎಂದು ಯೋಚಿಸಿತು. ಆ ಪೈಕಿ ಮೂರು ಮಾದರಿಗಳನ್ನು ತಯಾರಿಸಿತು.

ಮೊದಲನೆಯದು ‘ಕಸ್ತೂರಿ ನಿವಾಸ’ ಚಿತ್ರದ ಎಲ್ಲರ ಮನಸ್ಸಿನಲ್ಲಿಯೂ ಉಳಿದ ರಾಜ್ ಅವರ ಚಿತ್ರ- ಕಪ್ಪನೆಯ ಕೋಟು, ಹೆಗಲ ಮೇಲೆ ಬಿಳಿ ಪಾರಿವಾಳದ ರಾಜ ಕುಮಾರ್ ಚಿತ್ರ. ಆಮೇಲೆ ಅವರಿಗೆ ಈ ಶೋಕ ಸನ್ನಿವೇಶ ಬೇಡ ಎನಿಸಿರಬೇಕು.

 

ನಂತರ ಅವರ ಚಿತ್ರ ಸೇವೆಯ ಯಾನದಲ್ಲಿ ಅವರು ಮಾಡಿದ ಮಹತ್ವದ ಐದು ಪಾತ್ರಗಳನ್ನೂ ಕೈಗೆತ್ತಿಕೊಂಡರು. ಆಮೇಲೆ ಅವರಿಗೆ ಅನಿಸಿತು. ರಾಜಕುಮಾರ್ ಅವರದ್ದು ಪಾತ್ರಗಳಿಗೂ ಮೀರಿದ ವ್ಯಕ್ತಿತ್ವ ಎಂದು. ಹಾಗೆ ಅವರ ಪಾತ್ರಗಳನ್ನೂ ಮುಟ್ಟದೆ ಅವರನ್ನೇ ಅಪಾರ ಜನಸ್ತೋಮದ ಹರ್ಷೋದ್ಘಾರದ ಮಧ್ಯೆ ಇರುವಂತೆ ಅಂತಿಮ ಡೂಡಲ್ ತಯಾರಿಸಿತು.

ಡಾ ರಾಜಕುಮಾರ್ ಅವರ ಚಿತ್ರಗಳನ್ನು ನೋಡುತ್ತಾ ಸಮಾಜಮುಖಿ ಬದುಕನ್ನು ರೂಪಿಸಿಕೊಂಡ ರಾಜ್ಯ ನಮ್ಮದು. ಅಂತಹ ಮಹಾನ್ ವ್ಯಕ್ತಿತ್ವಕ್ಕೆ ಸಿಕ್ಕ ಗೌರವ ನಮಗೆ ಹೆಮ್ಮೆ ತಂದಿದೆ..

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s