ಮುಂದಿನ ಪೀಳಿಗೆಗೆ ಭೂಮಿ ಉಳಿಸಿ

‘Environmental & Climate Literacy’ ಇದು ವಿಶ್ವ ಭೂಮಿ ದಿನದ ಈ ವರ್ಷದ ಥೀಮ್. ಅಭಿವೃದ್ಧಿ, ಜಾಗತೀಕರಣ, ಯುದ್ಧ, ಜಾಗತಿಕ ಸ್ಟೇಟಸ್ ಅಂತೆಲ್ಲಾ ಮನುಷ್ಯ  ಈ ಭೂಮಿಗೆ ಮಾಡಿರುವ ಹಾನಿಗೆ ಭೂಮಿ ಸರಿಯಾಗಿಯೆ ಪ್ರತಿಕ್ರಿಯಿಸಿದೆ. ಈಗಾಗಲೇ ಜಾಗತಿಕ ತಾಪಮಾನದ ಏರಿಕೆಯನ್ನು ತಗ್ಗಿಸಲು ವಿಶ್ವದ ದಿಗ್ಗಜ ದೇಶಗಳೇ ಒಂದೆಡೆ ಸೇರಿ ತಮ್ಮ ತಮ್ಮ ಎಡವಟ್ಟುಗಳಿಗೆ ಪಶ್ಚಾತ್ತಾಪಪಟ್ಟಿವೆ.

 

ಪ್ರಕೃತಿಯನ್ನು ನಾವು ಉಳಿಸಿಕೊಳ್ಳದಿದ್ದರೆ ನಮಗಂತೂ ಉಳಿಗಾಲವಿಲ್ಲ. ಜಗತ್ತಿನ ಯಾವುದೇ ದೇಶ ಯುದ್ಧ ಅಣ್ವಸ್ತ ಪ್ರಯೋಗ ಇತ್ಯಾದಿ ಮಾಡಿದರು ಅದರ ಮಾರಕತೆ ಈ ಭೂಮಿ ಮೇಲಿನ ಪ್ರತಿ ಜೀವಿಗೂ ತಟ್ಟುತ್ತೆ. ಪ್ರಕೃತಿಯ ಮುನಿಸು ಮನಗಂಡದ್ದರಿಂದಲೇ ನಮ್ಮ ಭೂಮಿಯನ್ನು ನಾವು ಉಳಿಸೋಣ ಎಂಬ ಅರಿವು ಮೂಡಿ ವಿಶ್ವ ಭೂ ದಿನವನ್ನು ಆಚರಿಸುತ್ತಿದ್ದೇವೆ. ಅತೀಯಾಗಿ ಕೊಳವೆ ಬಾವಿ ತೋಡಿಸುವುದು, ಮೈನಿಂಗ್ ಮಾಡುವುದು, ಅರಣ್ಯ ನಾಶ, ವಿಷಕಾರಿ ತ್ಯಾಜ್ಯವನ್ನು ನದಿ, ಕೆರೆ, ಹಳ್ಳಗಳಿಗೆ ಅಥವಾ ನಿರ್ಜನ ಜಾಗಕ್ಕೆ ಬೇಕಾಬಿಟ್ಟಿ ಹರಿಯಬಿಡುವುದು, ಇತರೆ ಮಾರಕ ಕೆಲಸಗಳ ಬಗ್ಗೆ ಎಚ್ಚರ ವಹಿಸಿ ಮುಂದಿನ ಪೀಳಿಗೆಗೆ ಭೂಮಿ ಉಳಿಸಬೇಕಿದೆ. ಇಂಥಹ ಮಹತ್ವದ ಭೂ ದಿನವನ್ನು ಧಾರವಾಡದಲ್ಲಿ ಹೇಗೆ ಆಚರಿಸಿದರು ಎಂಬ ವರದಿ ಇಲ್ಲಿದೆ.

ವಿಶ್ವ ಭೂಮಿ ದಿನಾಚರಣೆಯನ್ನು  ಅಂಗವಾಗಿ ಇಂದು ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ವಿ.ಶ್ರೀಶಾನಂದ ಅವರ ನಿವಾಸದ ಆವರಣದಲ್ಲಿ ಹಣ್ಣಿನ ಸಸಿ ನೆಡುವುದರ ಮೂಲಕ ವಿಶ್ವ ಭೂಮಿ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶ ಎಸ್.ಎಸ್.ಬಳ್ಳೊಳ್ಳಿ, ಸಿದ್ದಪ್ಪ ಹೊಸಮನಿ, ಶ್ರೀದೇವ ಮಾನೆ, ಎಸ್.ಎಸ್.ಹೆಗಡೆ, ಸುಮಂಗಲಾ, ಪ್ರಫುಲ್ಲಾ ಎಸ್.ನಾಯ್ಕ, ಧನಲಕ್ಷ್ಮೀ ಸೇರಿದಂತೆ ಇನ್ನೂ ಅನೇಕ ನ್ಯಾಯಾಧೀಶರು ಉಪಸ್ಥಿತರಿದ್ದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s