ಸುಪ್ರೀಂ ಶಿಫಾರಸ್ಸು ಉಲ್ಲಂಘಿಸಿದರೆ ಮೈನಿಂಗ್ ಕ್ಯಾನ್ಸಲ್

ಬಳ್ಳಾರಿ ಅಂದಾಕ್ಷಣ ಗಕ್ಕನೆ ನೆನಪಾಗುವುದು ಅಲ್ಲಿನ ಅಪರಿಮಿತ ಖನಿಜ ಸಂಪತ್ತು ಮತ್ತು ಗಣಿಗಾರಿಕೆ ಆಮೇಲೆ ವಿಶ್ವ ವಿಖ್ಯಾತ ಹಂಪಿ. ಈ ಬಳ್ಳಾರಿಯಲ್ಲಿ ಮೊದಲಿನ ಹಾಗೆ ಎಲ್ಲೆಂದರಲ್ಲಿ ಯಾರೆಂದರವರು ಮೈನಿಂಗ್ ಮಾಡೋ ಹಾಗಿಲ್ಲ. ಮೈನಿಂಗ್ ಕಡಿಮೆಯಾಗಿದ್ದಕ್ಕೆ ಆ ಜಿಲ್ಲೆಯ ಸಂಡೂರು, ಹೊಸಪೇಟೆ, ತಾಲೂಕುಗಳಲ್ಲಿ ಪ್ರಕೃತಿಯ ಸೊಬಗು ಹೆಚ್ಚಾಗಿದೆ. ಆದರೂ ಪೂರ್ಣ ಪ್ರಮಾಣದಲ್ಲಿ ಮೈನಿಂಗ್ ನಿಂತಿಲ್ಲವಲ್ಲಾ, ಹಾಗಾಗಿ ಕೆಲವು ಭಾಗಗಳಲ್ಲಿ ಮೈನಿಂಗ್ ನಡೀತಿದೆ, ಅದೂ ಸುರ್ಪೀಂ ಸೂಚಿಸಿರುವ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಿದವರಿಗೆ ಮಾತ್ರ.  ಈ ಕುರಿತು ಬಳ್ಳಾರಿ ಡಿಸಿ ಅವರು ಒಂದು ಸಭೆ ನಡೆಸಿರುವ ವರದಿಯಾಗಿದೆ. ವಿವರ  ಇಲ್ಲಿದೆ.

ಗುತ್ತಿಗೆ ಪ್ರದೇಶದಿಂದ ಅದಿರು ಸಾಗಾಣಿಕೆಗೆ ಸುಪ್ರೀಂಕೋರ್ಟ್ ಸೂಚಿಸಿರುವ ಶಿಫಾರಸ್ಸುಗಳ ಅನುಷ್ಠಾನಕ್ಕೆ   ಸಂಬಂಧಿಸಿದಂತೆ ಜಿಲ್ಲಾಡಳಿತ ನೀಡಿದ ನಮೂನೆಯಲ್ಲಿ ಭಾನುವಾರ ಸಂಜೆ  ಗಣಿ ಕಂಪನಿಗಳು ವರದಿ ಸಲ್ಲಿಸಬೇಕು. ಒಂದು ವೇಳೆ ವರದಿ ನೀಡದಿದ್ದಲ್ಲಿ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರುವ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಭಾವಿಸಿ ಸೋಮವಾರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾದ್ ಮನೋಹರ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೆಎಂಇಆರ್‍ಸಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗುತ್ತಿಗೆ ಪ್ರದೇಶದಿಂದ ಅದಿರು ಸಾಗಾಣಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಕನ್ವೇಯರ್ ಬೆಲ್ಟ್, ರೈಲ್ವೆ ಲೈನ್ ಮತ್ತು ರೈಲ್ವೆ ಸೈಡಿಂಗ್‍ಗಳ ಅಳವಡಿಕೆ ಕುರಿತಂತೆ ಸಭೆಯಲ್ಲಿ ಉಪಸ್ಥಿತರಿದ್ದ ಗಣಿ ಕಂಪನಿಗಳ ಪ್ರಮುಖರೊಂದಿಗೆ ಸುಧೀರ್ಘ ಚರ್ಚೆ ನಡೆಸಿದ ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತದ ವತಿಯಿಂದ ರೈಲ್ವೆ ಲೈನ್ ಮಾಡಲಾಗುವುದು. ತಮಗೆ ರೈಲ್ವೆ ಸೈಡಿಂಗ್‍ಗಳಿಗಾಗಿ ಜಾಗ ಗುರುತಿಸಿಕೊಡಲಾಗುವುದು; ಅದರಲ್ಲಿ ತಾವು ಸೈಡಿಂಗ್ ಮಾಡಿಕೊಳ್ಳಬೇಕು, ಪರಿಸರದ ಹಿತದೃಷ್ಟಿಯಿಂದ ಕನ್ವೇಯರ್ ಬೆಲ್ಟ್ ಅಳವಡಿಸುವುದು ಸುಪ್ರೀಂ ಶಿಫಾರಸ್ಸಿನ ಪ್ರಕಾರ ಕಡ್ಡಾಯ ಎಂದರು.

ಕನ್ವೇಯರ್ ಬೆಲ್ಟ್ ಅಳವಡಿಸುವುದರಿಂದ ನಮ್ಮ ಲಾಭ ಕಡಿಮೆಯಾಗುತ್ತದೆ ಎಂಬ ಅಭಿಪ್ರಾಯವನ್ನು ಸಭೆಯಲ್ಲಿ ಭಾಗವಹಿಸಿದ್ದ ಕೆಲವರು ವ್ಯಕ್ತಪಡಿಸಿದ್ದಕ್ಕೆ ಜಿಲ್ಲಾಧಿಕಾರಿ ರಾಮ್ ಪ್ರಸಾದ್ ಅವರು ಸುಪ್ರೀಂ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವುದಷ್ಟೇ ನಮ್ಮ ಕೆಲಸ ಎಂದರು.

ಸುಪ್ರೀಂ ನೀಡಿರುವ ಶಿಫಾರಸ್ಸುಗಳನ್ನು ಆಡಳಿತಾತ್ಮಕ ಮತ್ತು ತಾಂತ್ರಿಕವಾಗಿ ಹೇಗೆ ಅನುಷ್ಠಾನಗೊಳಿಸಬೇಕು ಎಂಬುದರ ಕುರಿತು ಚರ್ಚೆ ನಡೆಸಿದ, ರಾಮ ಗುಡ್ದದಲ್ಲಿ ಎಲ್ಲೆಲ್ಲಿ ಯಾವ್ಯಾವ ಪಾಯಿಂಟಿದೆ,ಯಾರ್ಯಾರು ಮಾಡಬಹುದು ಎಂಬುದರ ಕುರಿತು ಚರ್ಚಿಸಿದರು. ಫಾರೆಸ್ಟ್ ಲ್ಯಾಂಡ್ ಕ್ಲಿಯರೆನ್ಸ್ ಮತ್ತು ಖಾಸಗಿ ಭೂಸ್ವಾಧೀನವನ್ನು ಜಿಲ್ಲಾಡಳಿತ ಮಾಡಿಕೊಡಬೇಕು ಎಂದು ಗಣಿ ಕಂಪನಿಯೊಂದರ ಪರವಾಗಿ ಆಗಮಿಸಿದ್ದವರು ಕೇಳಿದ್ದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಅವರು ಹೊಸ ಕಾಯ್ದೆಯ ಪ್ರಕಾರ ಭೂಸ್ವಾಧೀನಪಡಿಸಿಕೊಳ್ಳುವುದು ಕಷ್ಟ. ಅರಣ್ಯ ಭೂಮಿ ಕ್ಲಿಯರೆನ್ಸ್ ಮತ್ತು ಖಾಸಗಿ ಭೂಸ್ವಾಧೀನ ಮಾಡಿಕೊಡಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ವಿವಿಧ ಗಣಿ ಕಂಪನಿಗಳ ಪ್ರತಿನಿಧಿಗಳು ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಇದ್ದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s