ಇಎಫ್ಎಂಎಸ್ ಮುಖಾಂತರ ತುಟ್ಟಿಭತ್ಯೆ

 ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಮತ್ತು ತುಟ್ಟಿಭತ್ಯೆಯನ್ನು ಇಎಫ್ಎಂಎಸ್ ಮುಖಾಂತರ ಪಾವತಿಸಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಈ ಕೆಳಕಂಡಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿರುವ ಸರ್ಕಾರದ ಸುತ್ತೋಲೆಯನ್ನು ಸಚಿವರು ಪತ್ರಿಕಾ ಗೋಷ್ಠಿಯಲ್ಲಿ ಸಚಿವ ಎಚ್ ಕೆ ಪಾಟೀಲ್ ಬಿಡುಗಡೆ ಮಾಡಿದರು.
1. ಸರ್ಕಾರದಿಂದ ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಶಾಸನಬದ್ಧ ಅನುದಾನದಲ್ಲಿ ಶೇ. 40 ರಷ್ಟು ಅನುದಾನವನ್ನು ಗ್ರಾಮ ಪಂಚಾಯಿತಿ ನೌಕರರ ವೇತನಕ್ಕಾಗಿ ಉಪಯೋಗಿಸುವುದರ ಜೊತೆಗೆ ಗ್ರಾಮ ಪಂಚಾಯಿತಿ ನೌಕರರಿಗೆ ಕಾರ್ಮಿಕ ಇಲಾಖೆಯ ಅಧಿಸೂಚನೆಯಂತೆ ವೇತನ ಮತ್ತು ತುಟ್ಟಿಭತ್ಯೆ ಪಾವತಿಸಲು ಕೊರತೆಯಾಗುವ ವೇತನವನ್ನು ಗ್ರಾಮ ಪಂಚಾಯಿತಿಯ ವಾರ್ಷಿಕ ಆದಾಯದ ಶೇ. 40 ರಷ್ಟನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿ ವೇತನಕ್ಕಾಗಿ ಉಪಯೋಗಿಸಿಕೊಳ್ಳಲು ಕ್ರಮ ವಹಿಸತಕ್ಕದ್ದು.

2. ಗ್ರಾಮ ಪಂಚಾಯಿತಿ ನೌಕರರ ನೇಮಕಾತಿ ಅನುಮೋದನೆಗೊಳ್ಳುವುದಕ್ಕೂ ಮತ್ತು ಕನಿಷ್ಟ ವೇತನ ಪಾವತಿಗೆ ಯಾವುದೇ ಸಂಬಂಧವಿರುವುದಿಲ್ಲ. ಗ್ರಾಮ ಪಂಚಾಯಿತಿಗಳು ಅನುಮೋದನೆ ಪಡೆಯದೆ ಅವಶ್ಯಕತೆಗನುಗುಣವಾಗಿ ನೌಕರರನ್ನು ನೇಮಕಾತಿ ಮಾಡಿಕೊಂಡಿದ್ದಲ್ಲಿ, ಸರ್ಕಾರದ ಅನುದಾನವು ಕೊರತೆಯಾದರೆ ಗ್ರಾಮ ಪಂಚಾಯಿತಿಗಳ ಸ್ಥಳೀಯ ಸಂಪನ್ಮೂಲದಿಂದ ಕನಿಷ್ಟ ವೇತನ ಪಾವತಿಸಲು ಕ್ರಮ ವಹಿಸತಕ್ಕದ್ದು.

3. ಗ್ರಾಮ ಪಂಚಾಯಿತಿ ನೌಕರರ ಪ್ರತಿ ಮಾಹೆಗೆ ಅವಶ್ಯವಾಗಿರುವ ವೇತನವು ಗ್ರಾಮ ಪಂಚಾಯಿತಿ ಸಿಬ್ಬಂದಿ ವೇತನ ಬ್ಯಾಂಕ್ ಖಾತೆಯಲ್ಲಿ ಇರುವಂತೆ ನೋಟಿಕೊಳ್ಳತಕ್ಕದ್ದು.

4. ಗ್ರಾಮ ಪಂಚಾಯಿತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳ ವಿವರವನ್ನು ಪಂಚತಂತ್ರ ತಂತ್ರಾಂಶದಲ್ಲಿ ದಾಖಲಿಸಲು ಎನ್.ಐ.ಸಿ. ಅಧಿಕಾರಿಗಳು ನಮೂನೆ ಸಿದ್ಧಪಡಿಸುತ್ತಿದ್ದು, ಇಎಫ್ಎಂಎಸ್ ಮುಖಾಂತರ ನೌಕರರ ಬ್ಯಾಂಕ್ ಖಾತೆಗಳಿಗೆ ವೇತನ ಪಾವತಿಸಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ನೌಕರರ ಹೆಸರು, ಕೆಲಸಕ್ಕೆ ಸೇರಿದ ದಿನಾಂಕ, ಇನ್ನಿತರೆ ವಿವರಗಳನ್ನು ಸಿದ್ಧಪಡಿಸಿಕೊಂಡಿರಬೇಕು.

5. ಗ್ರಾಮ ಪಂಚಾಯಿತಿ ನೌಕರರಿಗೆ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ವೇತನ ಪಾವತಿಸತಕ್ಕದ್ದು ಎಂದು ನಿದರ್ೇಶನ ನೀಡಿರುವುದನ್ನು ಸಚಿವರು ತಿಳಿಸಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s