ಸರ್ಕಾರಿ ವ್ಯವಸ್ಥೆಯಲ್ಲಿ ಗುಣಾತ್ಮಕ ಶಿಕ್ಷಣ ಲಭ್ಯ:ಮುಖ್ಯಮಂತ್ರಿ ಸಿದ್ದರಾಮಯ್ಯ

ಶಿಕ್ಷಣ ಎಂದರೆ ಕೇವಲ ಓದು ಬರಹ ಅಲ್ಲ, ಒಬ್ಬ ವ್ಯಕ್ತಿಯ ಬದುಕು ಬದಲಿಸುವ ಜ್ಞಾನ. ಪಠ್ಯದಲ್ಲೂ ಮಾನವೀಯ ಮೌಲ್ಯಗಳನ್ನ ಅಳವಡಿಸುವಂತಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಪೋಷಕರ ಮನೋಭಾವ ಬದಲಾಗಲಿ :

ಈ ವಿಷಯದಲ್ಲಿ ಪೋಷಕರ ಮನೋಭಾವ ಬದಲಾಗಬೇಕು. ಖಾಸಗಿ ಶಾಲೆಯಲ್ಲಿ ಓದಿದರೆ ಮಾತ್ರ ಹೆಸರು ಮಾಡುತ್ತಾರೆ ಎಂಬುದು ತಪ್ಪು. ಸಹ್ಯಾದ್ರಿ ಕಾಲೇಜಿನಲ್ಲಿ ಓದಿದವರು ಭಾರತ ರತ್ನ, ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ, ಹೋರಾಟವನ್ನು ರೂಪಿಸುತ್ತಾರೆ ಎಂದಾದರೆ ಇವರೆಲ್ಲಾ ಸರ್ಕಾರಿ ಕಾಲೇಜಿನಲ್ಲಿ ಓದಿದ್ದಾರೆ ಎಂಬುದನ್ನು ಪೋಷಕರು ಮನಗಾಣಬೇಕು ಎಂದರು. ಪ್ರಾಥಮಿಕ ಮತ್ತು ಉನ್ನತ ಶಿಕ್ಷಣಕ್ಕೆ ರಾಜ್ಯ ಸರ್ಕಾರ 25 ಸಾವಿರ ಕೋಟಿ ಖರ್ಚು ಮಾಡುತ್ತದೆ. ಹಾಗಾಗಿ ಸರ್ಕಾರಿ ವ್ಯವಸ್ಥೆಯಲ್ಲಿ ಗುಣಾತ್ಮಕ ಶಿಕ್ಷಣ ಸಿಗುತ್ತದೆ ಎಂದರು.

ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ:

ಪ್ರಾಥಮಿಕ ಮತ್ತು ಉನ್ನತ ಶಿಕ್ಷಣಕ್ಕೆ ರಾಜ್ಯ ಸರ್ಕಾರ 25 ಸಾವಿರ ಕೋಟಿ ಖರ್ಚು ಮಾಡುತ್ತದೆ. ಹಾಗಾಗಿ ಸರ್ಕಾರಿ ವ್ಯವಸ್ಥೆಯಲ್ಲಿ ಗುಣಾತ್ಮಕ ಶಿಕ್ಷಣ ಸಿಗುತ್ತದೆ.ಶಿಕ್ಷಕರು ದೇಶದ ಸಂಪತ್ತಾಗಿರುವ ವಿದ್ಯಾರ್ಥಿಗಳನ್ನು ಮೌಲ್ಯಯುತವಾಗಿ ರೂಪಿಸುವ ಹೊಣೆ ಹೊಂದಿದ್ದಾರೆ.ಎಷ್ಟೋ ಮಕ್ಕಳಿಗೆ ಈ ದೇಶದ ಇತಿಹಾಸವೇ ಗೊತ್ತಿಲ್ಲ. ಇತಿಹಾಸ ತಿಳಿಯದವನು ಇತಿಹಾಸ ರೂಪಿಸಲಾರ ಎಂಬ ಡಾ.ಬಿ.ಆರ್.ಅಂಬೇಡ್ಕರ್ ಅವರ ನುಡಿಯಂತೆ ಮಕ್ಕಳಿಗೆ ಇತಿಹಾಸ ತಿಳಿಯುವಂತೆ ಮಾಡಬೇಕು. ಸಮಾಜಕ್ಕೆ ಸ್ಪಂದಿಸುವಂತಹ ವಿದ್ಯಾರ್ಥಿಗಳನ್ನು ರೂಪಿಸಬೇಕು ಎಂದರು.

24 ಕೋಟಿ ಅನುದಾನ:

ನಾವುದೊರೆಗಳಲ್ಲ.ಜನಸೇವಕರು.ಮೈಸೂರಿನವನಾಗಿ ಮೈಸೂರು ಅರಸರು ಸ್ಥಾಪಿಸಿದ ಸಹ್ಯಾದ್ರಿ ಕಾಲೇಜಿನ ಅಮೃತ ಮಹೋತ್ಸವ ಉದ್ಘಾಟಿಸುವುದು ನನ್ನ ಹೆಮ್ಮೆ ಎಂದು ನುಡಿದ ಮುಖ್ಯಮಂತ್ರಿಗಳು.ಈ ಸಂದರ್ಭವನ್ನು ನೆನಪಿಸುವ ಅಮೃತ ಮಹೋತ್ಸವ ಭವನ ನಿರ್ಮಿಸಬೇಕೆಂಬ ವಿಶ್ವ ವಿದ್ಯಾಲಯದ ಆಶಯದಂತೆ ಅದಕ್ಕೆ ಪೂರಕ ಅನುದಾನ ಬಿಡುಗಡೆ ಮಾಡಲಾಗವುದು. ಅದಕ್ಕೆ ಪೂರಕವಾಗಿ ಕಾಲೇಜಿನ ಇತರ ಬೇಡಿಕೆಗಳನ್ನೂ ಈಡೇರಿಸಲಾಗುವುದು. ಅಮೃತ ಮಹೋತ್ಸವ ಭವನ ನಿರ್ಮಾಣಕ್ಕೆ ಕುಲಪತಿ ಕೋರಿರುವ 24 ಕೋಟಿ ಅನುದಾನ ಬಿಡುಗಡೆಗೆ ನೀಲಿನಕ್ಷೆ ಸಲ್ಲಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

 

 

 

 

Advertisements
Posted in CM

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s