ಧಾರವಾಡದಲ್ಲಿ ಮ್ಯಾಂಗೋ ಟೂರಿಸಂ ಕಾರ್ಯಕ್ರಮ ಶುರು

ಹಣ್ಣುಗಳ ರಾಜ ಮಾವು. ಮಾವಿನ ಹಣ್ಣು ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ ? ಮೊದ್ಲೆಲ್ಲಾ ಹಿಂಗಿರಲಿಲ್ಲ, ವ್ಯಾಪರಿಗಳು ಅತಿ ಹೆಚ್ಚು ಲಾಭ ಗಳಿಸುವ ದುರಾಸೆಯಿಂದ ಈಗ ನೀವು ಹಣ್ಣಿನ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ನಿಮಗೆ ಸಿಗೋದು ಬರೀ ಕೆಮಿಕಲ್ ಹಾಕಿ ಹಣ್ಣಾಗಿಸಿದ ಹಣ್ಣುಗಳೇ. ಹಾಗಾಗಿ ಕೆಲವರು ಮಾವಿನ ಹಣ್ಣನ್ನು ಖರೀದಿಸುವುದಕ್ಕೂ ಮುಂಚೆ ಸಾವಿರ ಸರ್ತಿ ಯೋಚ್ನೆ ಮಾಡ್ತಾರೆ. ಎಲ್ಲೋ ಮಾವು ಮೇಳಗಳು ನಡೆದಲ್ಲಿ ಆ ಮೇಳಗಳಲ್ಲಿ ಭಾಗವಹಿಸಿದವರಿಗೆ ಮಾತ್ರ ಕೆಮಿಕಲ್ ಇಲ್ಲದ ಶುದ್ಧ ಹಣ್ಣುಗಳು ಸಿಗೋದು. ಅದು ಬಿಟ್ರೆ ಮಾವು ಬೆಳೆಯೋ ಬೆಳೆಗಾರರಿಗೆ ಈ ಯೋಗ. ಈ ಪರಿಸ್ಥಿತಿಯನ್ನು ಮನಗಂಡ ತೋಟಗಾರಿಕಾ ಇಲಾಖೆ ಒಂದು ಯೋಜನೆಯನ್ನು ತಂದಿದೆ. ಏನದು ಅಂತೀರಾ? ಇಲ್ಲಿದೆ ನೋಡಿ ವಿವರ.

ಇಡೀ ರಾಜ್ಯದಲ್ಲಿಯೇ ಮಾದರಿಯಾಗಿರುವ ಧಾರವಾಡ ಜಿಲ್ಲೆಯಲ್ಲಿ ಮಾವು ಬೆಳೆಗಾರರಿಗೆ ನೇರ ಮಾರುಕಟ್ಟೆ ಒದಗಿಸಲು ತೋಟಗಾರಿಕೆ ಇಲಾಖೆಯು ಮ್ಯಾಂಗೋ ಟ್ಯೂರಿಸಂ ಹೆಸರಿನ ನೂತನ ಕಾರ್ಯಕ್ರಮ ಶುರು ಮಾಡಿದೆ.

ಈ ವಿಶೇಷ ಕಾರ್ಯಕ್ರಮದ ಅಂಗವಾಗಿ ನಗರಕ್ಕೆಸಮೀಪದ ಕಲಕೇರಿ ಗ್ರಾಮ ಬಳಿಯ ದೇವೇಂದ್ರ ಜೈನರ್ ಅವರ ತೋಟಕ್ಕೆ ನಗರ ವಾಸಿಗಳನ್ನು ಇಲಾಖೆಯೇ ಕರೆದೊಯ್ದು ಅವರಿಗೆ ಗುಣಮಟ್ಟದ ಮಾವು ಪರಿಚಯಿಸಲಾಯಿತು.

ನಗರವಾಸಿಗಳಿಗೆ ಮಾಹಿತಿ:

ತಿನ್ನಲು ಯಾವ ತಳಿ ಹಣ್ಣು ಉತ್ತಮ, ಗಿಡದಲ್ಲಿರುವ ಮಾವಿನ ಕಾಯಿಯನ್ನು ಯಾವ ಸಮಯದಲ್ಲಿ ಕೀಳಬೇಕು. ಹೇಗೆ ಕೀಳಬೇಕು, ಯಾವ ರೀತಿ ಕಾಯಿಯನ್ನು ಹಣ್ಣು ಮಾಡಬೇಕು ಎಂದು ಮಾವಿನ ಹಣ್ಣಿನ ಪ್ರಾಥಮಿಕ ಲಕ್ಷಣಗಳನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಮಾವು ಬೆಳೆಗಾರರು ನಗರ ವಾಸಿಗಳಿಗೆ ಮಾಹಿತಿ ಒದಗಿಸಿದರು. ಮಾವು ಖರೀದಿಸಲು ಆಗಮಿಸಿದ್ದ ಜನರು ಇಡೀ ತೋಟವನ್ನೆಲ್ಲಾ ಅಲೆದಾಡಿ ತಮಗೆ ಬೇಕಾದ ಕಾಯಿಗಳನ್ನು ಕಿತ್ತು ಬೆಳೆಗಾರರಿಂದ ನೇರವಾಗಿ ಖರೀದಿಸಿ ಮನೆಗೆ ಒಯ್ದರು. ಕೆಲವರಿಗೆ ಗಿಡಗಳಲ್ಲಿಯೇ ಮಾಗಿದ ಹಣ್ಣುಗಳು ಸಹ ದೊರೆತವು. ಸಾಕಷ್ಟು ಜನರು ತೋಟದ ಮಾವಿನ ಹಣ್ಣುಗಳ ರುಚಿ ಸವಿದರು.

ಒಳ್ಳೆಯ ಗುಣಮಟ್ಟದ ಮಾವಿನ ಹಣ್ಣನ್ನು ಬೆಳೆಯುತ್ತಿರುವ ರೈತರನ್ನು ಗುರುತಿಸಿ,ನಗರ ಪ್ರದೇಶದ ಗ್ರಾಹಕರನ್ನು ಆಯ್ದು ಮಾವು ಬೆಳೆಗಾರರ ತೋಟಗಳಿಗೆ ಕರೆದೊಯ್ಯುವ ಕಾರ್ಯಕ್ರಮ ಇದಾಗಿದೆ.ಗ್ರಾಹಕರನ್ನು ಬೆಳೆಗಾರರ ತೋಟಗಳಿಗೆ ಕರೆದೊಯ್ಯುವ ಸಾರಿಗೆ ವೆಚ್ಚದ ಶೇ.75 ರಷ್ಟನ್ನು ಮಾವು ಅಭಿವೃದ್ಧಿ ನಿಗಮ ಭರಿಸುತ್ತಿದೆ.ಉಳಿದ ಮೊತ್ತವನ್ನು ಗ್ರಾಹಕರು ಭರಿಸಬೇಕು.ಏ.25 ರಂದು ಹಳ್ಳಿಗೇರಿ,24 ಹಾಗೂ 28 ರಂದು ಹುಬ್ಬಳ್ಳಿ ತಾಲ್ಲೂಕಿನ ಪಾಳೆ ಗ್ರಾಮದ ಮಾವು ತೋಟಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s