ಚಿನ್ನದ ಬೀಡಲ್ಲಿ ಉದ್ಯೋಗ ಮೇಳ

ಏಪ್ರಿಲ್ 22 ರಂದು ಕೋಲಾರದಲ್ಲಿ ಉದ್ಯೋಗ ಮೇಳ ನಡೆಯಲಿದೆ. ಸರ್ಕಾರದ ಸಲಹೆಯ ಮೇರೆಗೆ ದೊಡ್ಡ ದೊಡ್ಡ ಕಂಪನಿಗಳು ಬೆಂಗಳೂರಿನ ಆಚೆಯೂ ಹೂಡಿಕೆ ಮಾಡಲು ಮುಂದೆ ಬಂದಿವೆ. ಇದು ಹೂಡಿಕೆದಾರರಿಗೆ ಸರ್ಕಾರದ ಮೇಲಿರುವ ವಿಶ್ವಾಸವನ್ನು ತೋರಿಸುತ್ತೆ. ಹೀಗೆ ಬೆಂಗಳೂರಿನಾಚೆ ದೊಡ್ಡ ದೊಡ್ಡ ಕಂಪನಿಗಳು ಹೂಡಿಕೆ ಮಾಡಿದರೆ ಗ್ರಾಮೀಣ ಕರ್ನಾಟಕ ಸದೃಢವಾಗಿ ನಿಲ್ಲಲು ಸಾಧ್ಯವಿದೆ. ಗ್ರಾಮೀಣ ಯುವಕರು ಧೈರ್ಯವಾಗಿ ತಮ್ಮ ಕಾಲ ಮೇಲೆ ತಾವು ನಿಂತು ಅಭಿವೃದ್ಧಿಯತ್ತ ನಡೆಯಬಹುದು. ಇಷ್ಟೆಲ್ಲಾ ಸತ್ವವಿರುವ ಉದ್ಯೋಗ ಮೇಳದ ಪೂರ್ವಭಾವಿ ಸಭೆಯ ವಿವರ ಇಲ್ಲಿದೆ.

ಉದ್ಯೋಗ ಮೇಳಕ್ಕೆ ನೋಡಲ್ ಅಧಿಕಾರಿಗಳನ್ನು ಹಾಗೂ ಸಹಾಯ ಅಧಿಕಾರಿಗಳನ್ನು ಮಾಡಲಾಗಿದ್ದು ಹೊಂದಾಣಿಕೆಯಿಂದ ಕೆಲಸ ನಿರ್ವಹಿಸಬೇಕು. ಉದ್ಯೋಗಾಕಾಂಕ್ಷಿಗಳನ್ನು ಹೊರತು ಪಡಿಸಿ ಬೇರೆ ಯಾರನ್ನೂ ಒಳಗೆ ಬಿಡಬಾರದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರ ಅವರು ಸೂಚಿಸಿದರು.
ಸಿ.ಬೈರೇಗೌಡ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಉದ್ಯೋಗ ಮೇಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

3 ಕಂಪನಿಗಳಲ್ಲಿ ಸಂದರ್ಶನಕ್ಕೆ ಅವಕಾಶ

ಏ.22 ಮತ್ತು 23 ರಂದು ನಡೆಯಲಿರುವ ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿತರನ್ನು ಒಳಗೆ ಬಿಡಲು ಅವಕಾಶ ಇದೆ. ನಂತರ ಅಧಿಕಾರಿಗಳು, ವಾಲೆಂಟರಿಗಳನ್ನು, ಸಿಬಿಐಟಿ ಸ್ಟಾಪ್ ಮತ್ತು ಅಭ್ಯರ್ಥಿಗಳನ್ನು ಮಾತ್ರ ಒಳಗೆ ಬಿಡಬೇಕು. ಅದನ್ನು ಹೊರತು ಪಡಿಸಿ ಬೇರೆ ಯಾರನ್ನೂ ಸಹ ಒಳಗೆ ಬಿಡಬೇಡಿ ಎಂದು ಡಿವೈಎಸ್ಪಿ ಅಬ್ದುಲ್ ಸತ್ತಾರ್ ಅವರಿಗೆ ನಿರ್ದೇಶನ ನೀಡಿದರು.
ವೇದಿಕೆ ಕಾರ್ಯಕ್ರಮ ಮುಗಿಯುವವರೆಗೆ ಅಭ್ಯರ್ಥಿಗಳನ್ನು ಬಿಲ್ಡಿಂಗ್ ಒಳಗಡೆ ಹೋಗಲು ಬಿಡಬೇಡಿ. ನೋಂದಣಿ ಮಾಡಿಕೊಂಡ ಅಭ್ಯರ್ಥಿಗಳು ಅವರ ಮೊಬೈಲ್ಗೆ ಕಳುಹಿಸಿರುವ ಮೆಸೆಜ್ ತೋರಿಸಿದರೆ ಮಾತ್ರ ಸಂದರ್ಶನಕ್ಕೆ ಹೋಗಲು ಅವಕಾಶ ನೀಡಿ. ಉದ್ಯೋಗ ಮೇಳದ ಜವಾಬ್ದಾರಿಗಳನ್ನು ವಹಿಸಿರುವವರಿಗೆ ವಿವಿಧ ಬಣ್ಣಗಳ ಐಡೆಂಟಿ ಕಾರ್ಡ್ ನೀಡಲು ತಿಳಿಸಿದರು.
ಗೊಂದಲವಾದ್ರೆ ಸ್ಟಾಲ್ :
ನೋಂದಣಿ ಮಾಡಿಕೊಂಡ ಅಭ್ಯರ್ಥಿಗಳಿಗೆ 3 ಕಂಪನಿಗಳಲ್ಲಿ ಸಂದರ್ಶನಕ್ಕೆ ಅವಕಾಶ ಇರುತ್ತದೆ.ಅವರು ಸಂದರ್ಶನ ಮುಗಿಸಿದ ಕಾಲಹರಣ ಮಾಡದೆ ಹೊರ ನಡೆದು ಇತರರಿಗೆ ಅವಕಾಶ ನೀಡಬೇಕು. ಅಭ್ಯರ್ಥಿಗಳಿಗೆ ಗೊಂದಲ ಉಂಟಾದರೆ ಅದನ್ನು ನಿವಾರಿಸಲು ಒಂದು ಸ್ಟಾಲ್ ತೆರೆಯಲು ಸೂಚನೆ ನೀಡಿದರು.
ಸ್ಥಳದಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶವಿದ್ದು ಅಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಒದಗಿಸಬೇಕು. ಮೊದಲ ದಿನ ಹೆಚ್ಚು ಮಂದಿ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವುದರಿಂದ ಸ್ಥಳದಲ್ಲಿ ನೋಂದಣಿ ಮಾಡಿಕೊಂಡವರಿಗೆ ಎರಡನೇ ದಿನ ಸಂದರ್ಶನಕ್ಕೆ ಹೋಗಬಹುದು. ಮೊದಲ ದಿನ ನೋಂದಣಿ ಮಾಡಿಕೊಂಡವರಿಗೆ ಅರ್ಜಿ ನೀಡಲಾಗುವುದು. ಅದನ್ನು ತೆಗೆದುಕೊಂಡು ತೆರಳಬೇಕು. ನಂತರ 2 ನೇ ದಿನ ಬಂದು ಸಂದರ್ಶನಕ್ಕೆ ಹೋಗಬೇಕು ಎಂದು ತಿಳಿಸಿದರು.

ಆ್ಯಂಬ್ಯುಲೆನ್ಸ್, ಪೈರ್ ಇಂಜಿನ್ ಇರುತ್ತೆ :

ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತವಾಗಿ ನೀರಿನ ವ್ಯವಸ್ಥೆ ಮಾಡಬೇಕು. ಆ್ಯಂಬ್ಯುಲೆನ್ಸ್, ಪೈರ್ ಇಂಜಿನ್ ಸ್ಥಳದಲ್ಲಿ ಸಿದ್ದವಿರಬೇಕು. ಅದೇ ರೀತಿ ಕಂಟ್ರೋಲ್ ರೂಂ ನಿರ್ಮಿಸಿ. ಪಾರ್ಕಿಂಗ್ಗೆ ಪ್ರತ್ಯೇಕ ಸ್ಥಳವನ್ನು ಮಾಡಿ. ಹೆಚ್ಚಿನ ಪೊಲೀಸ್ ಬಂದೋಬಸ್ತ್ ಒದಗಿಸಿ. ಎಲ್ಲಾ ಕಡೆ ಸ್ಪೀಕರ್ಗಳನ್ನು ಅಳವಡಿಸಿ. ಅಷ್ಟೇ ಅಲ್ಲದೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನೀಡಬೇಕು. ಅಧಿಕಾರಿಗಳು ಸೂಕ್ತವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಗಣ್ಯರು ಭಾಗಿ :

ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಸುರೇಶ್ ಮಾತನಾಡಿ, ಉದ್ಯೋಗ ಮೇಳಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ವೇದಿಕೆ ಕಾರ್ಯಕ್ರಮವು ಏ.22 ರಂದು ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಆರ್.ರಮೇಶ್ ಕುಮಾರ್ ಅವರು ಉದ್ಘಾಟಿಸುವರು. ಕೋಲಾರ ವಿಧಾನ ಸಭಾ ಕ್ಷೇತ್ರದ ವರ್ತೂರು ಆರ್. ಪ್ರಕಾಶ್ ಅವರು ಅಧ್ಯಕ್ಷತೆ ವಹಿಸುವರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಸಚಿವರಾದ ಆರ್.ವಿ.ದೇಶಪಾಂಡೆ, ಕಾರ್ಮಿಕ ಸಚಿವರಾದ ಸಂತೋಷ್ ಎಸ್ ಲಾಡ್, ಲೋಕಸಭಾ ಸದಸ್ಯರಾದ ಡಾ.ಕೆ.ಹೆಚ್.ಮುನಿಯಪ್ಪ ಅವರು ಘನ ಉಪಸ್ಥಿತಿ ವಹಿಸುವರು. ಅದೇ ರೀತಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಭಾಗವಹಿಸುವರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s