ಏರ್ ಮನ್ ಹುದ್ದೆಗಳಿಗೆ ನೇಮಕಾತಿ ರ್ಯಾಲಿ

 

ವಾಯುಪಡೆಯಲ್ಲಿ ಕೆಲಸ ಮಾಡುವ ಕನಸು ನಿಮಗಿದೆಯಾ ? ಏರ್ ಮನ್ ಆಗೋದು ನಿಮ್ಮ ಜೀವನದ ಗುರಿಯಾಗಿದೆಯಾ ? ಗ್ರೂಪ್ ವೈ ಟ್ರೆಡ್ ಗಳ ಆಟೋ ಮೊಬೈಲ್ ಟೆಕ್ನಿಷಿಯನ್ ನೀವು ಆಗಬಯಸುತ್ತೀರಾ ? , ಗ್ರೌಂಡ್ ಟ್ರೈನಿಂಗ್ ಇನ್ ಸ್ಟ್ರಕ್ಟರ್, ಐಎಎಫ್ ಏರ್ ಮನ್ ಹುದ್ದೆಗಳಿಗೆ ಹುಡುಕುತ್ತಿದ್ದೀರಾ ? ಹಾಗಾದ್ರೆ 27 ರಿಂದ 29 ರವರೆಗೆ ಹಾಸನದಲ್ಲಿ ಆಯ್ಕೆ ನಡೆಯಲಿದೆ. ಈ ಕುರಿತು ಹೆಚ್ಚಿನ ವಿವರ ಹೀಗಿದೆ.

 

ಯಾವ ಪೋಸ್ಟ್ ಗಳು ಖಾಲಿ ಇವೆ ?:

ಹಾಸನದಲ್ಲಿ ಏ.27 ರಿಂದ 29 ರವರೆಗೆ ಭಾರತೀಯ ವಾಯುಪಡೆಯ ಏರ್ ಮನ್ ಹುದ್ದೆಗಳಿಗೆ ನೇಮಕಾತಿ ರ್ಯಾಲಿ ನಡೆಯಲಿದೆ. ಹಾಸನದ ಸಾಲಗಾಮೆ ರಸ್ತೆಯಲ್ಲಿರುವ ಹಾಸನಾಂಬ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ಗ್ರೂಪ್ ವೈ ಟ್ರೈಡ್ ಗಳ ಆಟೋ( ಮೊಬೈಲ್ ಟೆಕ್ನಷಿಯನ್ , ಗ್ರೌಂಡ್ ಟ್ರೈನಿಂಗ್ ಇನ್ ಸ್ಟ್ರಕ್ಟರ್, ಐಎಎಫ್) ಏರ್ ಮನ್ ಹುದ್ದೆಗಳಿಗೆ ಆಯ್ಕೆ ನಡೆಯಲಿದೆ.

 

ಅರ್ಹತೆ ಏನು ?:
1197 ರ ಜುಲೈ 07 ರಿಂದ 2000 ಡಿಸೆಂಬರ್ 20 ರ ನಡುವೆ ಜನಿಸಿದ ಕನಿಷ್ಟ 165 ಸೆಂ.ಮೀ. ಎತ್ತರದ ಕರ್ನಾಟಕ ರಾಜ್ಯದ ಅವಿವಾಹಿತ ಪುರುಷರು ಈ ರ್ಯಾಲಿಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಅಭ್ಯರ್ಥಿಗಳು ಇಂಟರ್ ಮೀಡಿಯೆಟ್, ಪಿಯುಸಿ, 10+2 ಅಥವ ತತ್ಸಮಾನ ಪರೀಕ್ಷೆಗಳಲ್ಲಿ ಕೇಂದ್ರ ಅಥವಾ ರಾಜ್ಯ ಶಿಕ್ಷಣ ಮಂಡಳಿಗಳು ಅನುಮೋದಿಸಿದ ಯಾವುದೇ ವಿಷಯಗಳಲ್ಲಿ ಕನಿಷ್ಠ ಶೇ. 50 ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ವೆಬ್ ಸೈಟ್
http://www.airmenselection.gov.in ಅಥವಾ 7 ಏರ್ ಮೆನ್ ಸೆಲೆಕ್ಷನ್ ಸೆಂಟರ್, ನಂ.1 ಕಬ್ಬನ್ ರಸ್ತೆ, ಬೆಂಗಳೂರು-560001 ಇಲ್ಲಿ ಪಡೆಯಬಹುದು. ಅಥವಾ 080-25592199, co.7asc-ka@gov.in ಇಲ್ಲಿ ಸಂಪರ್ಕಿಸಬಹುದಾಗಿದೆ. ಅಭ್ಯರ್ಥಿಗಳು ತಮ್ಮ ಸಮೀಪದ ಜಿಲ್ಲಾ ಉದ್ಯೋಗಾಧಿಕಾರಿಗಳನ್ನು ಸಹ ಸಂಪರ್ಕಿಸಬಹುದಾಗಿದೆ ಎಂದು ಇಲಾಖಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s