ಉದಯೋನ್ಮುಖ ವಿಜ್ಞಾನ ಲೇಖಕರ ತರಬೇತಿ ಶಿಬಿರ

ವಿಜ್ಞಾನ ಬರವಣಿಗೆಯಲ್ಲಿ ಆಸಕ್ತಿ ಇರುವ ರಾಜ್ಯದ ಉದಯೋನ್ಮುಖ ವಿಜ್ಞಾನ ಬರಹಗಾರರು ವಿಜ್ಞಾನ ಶಿಕ್ಷಕರು, ಯುವ ಪತ್ರಿಕಾ ವರದಿಗಾರರು, ಪತ್ರಿಕೋದ್ಯಮ ವಿದ್ಯಾರ್ಥಿಗಳು, ಕಾರ್ಯನಿರತ ವಿಜ್ಞಾನ ಪತ್ರಿಕೋದ್ಯಮಿಗಳು-ವರದಿಗಾರರಿಗೆ ಚಿತ್ರ ನಿರೂಪಕರು, ರೇಡಿಯೋ ಭಾಷಣಕಾರರಿಗೆ ಜನಪ್ರಿಯ ವಿಜ್ಞಾನ ಬರವಣಿಗೆಯ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ಯಾರ್ಯಾರ ಸಹಯೋಗ ? :

ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ರಾಜ್ಯದ ಉದಯೋನ್ಮುಖ ವಿಜ್ಞಾನ ಬರಹಗಾರರಿಗೆ, ಕಾರ್ಯನಿರತ ವಿಜ್ಞಾನ ಪತ್ರಿಕೋದ್ಯಮಿಗಳು-ವರದಿಗಾರರಿಗೆ ಜನಪ್ರಿಯ ವಿಜ್ಞಾನ ಬರವಣಿಗೆಯ ತರಬೇತಿ ಶಿಬಿರವನ್ನು ಮೇ. 2017 ರ ಕೊನೆಯ ವಾರದಲ್ಲಿ ಆಯೋಜಿಸಲಾಗಿದೆ.

ಯಾರು ಭಾಗವಹಿಸಬಹುದು ? :

ವಿಜ್ಞಾನ ಬರವಣಿಗೆಯಲ್ಲಿ ಆಸಕ್ತಿ ಇರುವ ವಿಜ್ಞಾನ ಶಿಕ್ಷಕರು, ಯುವ ಪತ್ರಿಕಾ ವರದಿಗಾರರು, ಪತ್ರಿಕೋದ್ಯಮ ವಿದ್ಯಾರ್ಥಿಗಳು, ಚಿತ್ರ ನಿರೂಪಕರು, ರೇಡಿಯೋ ಭಾಷಣಕಾರರು ಶಿಬಿರದಲ್ಲಿ ಭಾಗವಹಿಸಬಹುದಾಗಿದೆ.

ವಿಳಾಸ ಎಲ್ಲಿ ?

ಆಸಕ್ತರು ತಮ್ಮ ಸಂಪೂರ್ಣ ಬಯೋಡೇಟಾ ಮತ್ತು 2 ಕನ್ನಡ ವೈಜ್ಞಾನಿಕ ಲೇಖನಗಳ ಸ್ವ ರಚಿತ ಪ್ರತಿಯೊಂದಿಗೆ ಅರ್ಜಿಯನ್ನು ಗೌರವ ಕಾರ್ಯದರ್ಶಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನಭವನ, ನಂ.24/2, 21 ನೇ ಮುಖ್ಯರಸ್ತೆ, ಬನಶಂಕರಿ 2 ನೇ ಹಂತ, ಬೆಂಗಳೂರು 560070 ಇ-ಮೇಲ್ krvp.info@gmail.com ಈ ವಿಳಾಸಕ್ಕೆ ಮೇ.05 ರೊಳಗಾಗಿ ಸಲ್ಲಿಸಬೇಕು. ಕರಾವಿಪ ಸಂಘಟಿಸಿದ ಲೇಖಕರ ಶಿಬಿರಗಳಲ್ಲಿ ಈಗಾಗಲೇ ಭಾಗವಹಿಸಿದವರು ಅರ್ಜಿ ಸಲ್ಲಿಸುವಂತಿಲ್ಲ.

 

ಹೆಚ್ಚಿನ ಮಾಹಿತಿಗೆ :

ಪರಿಷತ್ತಿನ ಕಚೇರಿಯನ್ನು 080-26718939, 26718962 ಮೂಲಕ ಸಂಪರ್ಕಿಸಬಹುದು. ಅಥವಾ ಶ್ರೀ ದಾನಿ ಬಾಬು ರಾವ್, ರಾಜ್ಯ ಸಂಯೋಜಕರು, 31 ನೇ ಅಖಿಲ ಕರ್ನಾಟಕ ಉದಯೋನ್ಮುಖ ವಿಜ್ಞಾನ ಲೇಖಕರ ತರಬೇತಿ ಶಿಬಿರವನ್ನು 9448568360 ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s