ರೈತರು ಏಳಿಗೆಯಾದರೆ ಮಾತ್ರ ದೇಶ ಅಭಿವೃದ್ಧಿ ಸಾಧ್ಯ

 

ರೈತರು ಅನ್ನದಾತರು ಅವರಿಂದಲೇ ಇಂದು ಜನ ಹಸಿವು ನೀಗಿಸುತ್ತಿದ್ಧಾರೆ ರೈತರ ಏಳಿಗೆಯೆ ದೇಶದ ಅಭಿವೃದ್ದಿ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರೈತರ ಸಬಲೀಕರಣಕ್ಕಾಗಿ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಕೃಷಿ ಮತ್ತು ರೈತರಿಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಹಾಗೂ ಇನೋವಾ ಅಗ್ರಿ ಬಯೋಪಾರ್ಕ್ ಸಂಯುಕ್ತಾಶ್ರಯದಲ್ಲಿ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಕಾರ್ಯಗಾರ ನಡೆಯಿತು. ಈ ಕಾರ್ಯಾಗಾರದ ವರದಿ ಇಲ್ಲಿದೆ.

ಅನ್ನದಾತರಾದ ರೈತರು ದೇಶದ ಬೆನ್ನೆಲುಬಾಗಿದ್ದಾರಲ್ಲದೆ ರೈತರು ಏಳಿಗೆಯಾದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಆರ್. ರಮೇಶ್ ಕುಮಾರ್ ಅವರು ತಿಳಿಸಿದರು.

 

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಇನೋವಾ ಅಗ್ರಿ ಬಯೋಪಾರ್ಕ್ ನಲ್ಲಿ ಬುಧವಾರ ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಹಾಗೂ ಇನೋವಾ ಅಗ್ರಿ ಬಯೋಪಾರ್ಕ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗದ್ದ ರಫ್ತು ಮಾರುಕಟ್ಟೆ ಕುರಿತು ತಾಂತ್ರಿಕ ಕಾರ್ಯಗಾರ ಹಾಗೂ ಅಮೇರಿಕಾ ದೇಶಕ್ಕೇ ಕರ್ನಾಟಕದ ಮಾವು ರಫ್ತಿಗೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.

       

ಕೃಷಿಯೇ ರೈತರಿಗೆ ಮೂಲಾಧಾರ

 

ರೈತರು ತಾವು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ನಿಗಧಿಪಡಿಸುವ ಅಧಿಕಾರ ತನಿಗೆ ಬರುವವರೆಗೂ ರಾಜಕಾರಣಿಗಳು ಯಾವುದೇ ರೀತಿಯ ಪಕ್ಷ ರಾಜಕೀಯಗಳನ್ನು ಮಾಡದೆ ರೈತರ ನೆರವಿಗೆ ನಿಲ್ಲಬೇಕು. ಆಗ ಮಾತ್ರ ರೈತರು ಒಂದಷ್ಟು ಸಂತಸದಿಂದ ಜೀವನ ಸಾಗಿಸಲು ಸಾಧ್ಯ ಎಂದು ಹೇಳಿದರು.

ಭಾರತ ದೇಶದಲ್ಲಿ ಹೆಚ್ಚಾಗಿ ರೈತರು ಇದ್ದಾರೆ. ಕೃಷಿಯೇ ಅವರ ಮೂಲಾಧಾರ, ದೇಶದ ಪ್ರತಿಯೊಬ್ಬರಿಗೂ ಸಹ ರೈತರು ದುಡಿದು, ಬೆಳೆದು ಆಹಾರ ಕೊಡುತ್ತಾರೆ. ಜನರ ಹಸಿವನ್ನು ನೀಗಿಸುತ್ತಾರೆ. ಆದರೆ ಅವರ ಸಮಸ್ಯೆಗಳನ್ನು ಮಾತ್ರ ಇಂದಿಗೂ ಬಗೆಹರಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದರು.

ರೈತರೂ ಸಹ ಬೆಳೆಯನ್ನು ಬೆಳೆಯಲು ಪ್ರಾಯೋಗಾತ್ಮಕ ಪದ್ದತಿಯನ್ನು ಬಳಸಿಕೊಳ್ಳಬೇಕು. ಕೃಷಿಯಲ್ಲಿ ಯಾಂತ್ರಿಕರಣವನ್ನು ಬಳಸಿಕೊಂಡು ಹೆಚ್ಚು ಇಳುವರಿ ಹಾಗೂ ಗುಣಮಟ್ಟದ ಫಸಲು ಪಡೆಯಬೇಕು , ಜೊತೆಗೆ ಉತ್ತಮ ಗುಣಮಟ್ಟದ ಹಾಗೂ ಮಾರುಕಟ್ಟೆಗೆ ಯೋಗ್ಯವಾದ ಹಣ್ಣು ತರಕಾರಿಗಳನ್ನು ಬೆಳೆಯಬೇಕು ಎಂದು ಸಲಹೆ ನೀಡಿದರು.

 

 

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s