ಪ್ರತಿಷ್ಠಿತ ‘ನಾಡೋಜ ಪ್ರಶಸ್ತಿ’ ಡಾ.ಬಿ.ಟಿ.ರುದ್ರೇಶ್ ಮಡಿಲಿಗೆ

ಹಂಪೆಯ ಕನ್ನಡ ವಿಶ್ವವಿದ್ಯಾಲಯ ಪ್ರತಿವರ್ಷ ನೀಡುತ್ತಾ ಬಂದಿರುವ ಪ್ರತಿಷ್ಠಿತ ನಾಡೋಜ ಪ್ರಶಸ್ತಿಗೆ ಈ ಬಾರಿ ಹೋಮಿಯೋಪಥಿ ವೈಧ್ಯಕೀಯ ಕ್ಷೇತ್ರದಲ್ಲಿ ಅನುಪನ ಸೇವೆಗೈದಿರುವ ಡಾ. ಬಿ ಟಿ ರುದ್ರೇಶ್ ಅವರು ಆಯ್ಕೆ ಆಗಿದ್ದಾರೆ. ಹಾಗೆ ನೋಡಿದ್ರೆ ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್ ಅವರ ಶಾಂತಿನಿಕೇತನದಲ್ಲಿ ನೀಡಲಾಗುತ್ತಿರುವ ‘ದೇಶಿಕೋತ್ತಮ’ ಪದವಿಯಿಂದ ಪ್ರೇರಣೆಯಿಂದ ನಮ್ಮ ಕನ್ನಡ ವಿವಿ ಈ ನಾಡೋಜ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ನಾಡೋಜ ಪ್ರಶಸ್ತಿಗೆ 47 ಅರ್ಜಿಗಳಲ್ಲಿ ಮೂರು ಜನರ ಪಟ್ಟಿಯನ್ನು ಅಂತಿಮಗೊಳಿಸಿ ಕನ್ನಡ ವಿವಿಯು ಕಳುಹಿಸಲಾಗಿತ್ತು, ಒಬ್ಬರ ಹೆಸರನ್ನು ಮಾತ್ರ ರಾಜ್ಯಪಾಲರು ಅಂಕಿತಗೊಳಿಸಿದ್ದಾರೆ.

ನಾಡೋಜ ಪ್ರಶಸ್ತಿಗೆ ಭಾಜನರಾದವರು :

ಈವರೆಗೆ ಎಸ್, ಎಲ್ ಬೈರಪ್ಪ,ಕಯ್ಯಾರ ಕಿಞ್ಞಣ್ಣ ರೈ, ಕೆ.ಪಿ ರಾವ್, ಗೀತನಾಗಭೂಷಣ, ಚನ್ನವೀರಕಣವಿ, ಜಿ.ಎಸ್ ಶಿವರುದ್ರಪ್ಪ,ದೇ. ಜವರೇಗೌಡ, ನಿಟ್ಟೆ ಸಂತೋಷ್ ಹೆಗ್ಡೆ, ಪಂಡಿತ್ ಸುಧಾಕರ ಚತುರ್ವೇದಿ, ಪಾಟೀಲ ಪುಟ್ಟಪ್ಪ, ಪುಟ್ಟರಾಜ ಗವಾಯಿ, ಪ್ರೋ.ಜಿ. ವೆಂಕಟ ಸುಬ್ಬಯ್ಯ,ವೀರೇಂದ್ರ ಹೆಗ್ಗಡೆ, ಸಾಲು ಮರದ ತಿಮ್ಮಕ್ಕ, ಸುಭದ್ರಮ್ಮ ಮನ್ಸೂರ್ ಇವರುಗಳೆಲ್ಲ ನಾಡೋಜ ಪ್ರಶಸ್ತಿಗೆ ಬಾಜನರಾದವರು. ಈ ಪ್ರತಿಷ್ಠಿತ ನಾಡೋಜ ಗೌರವ ಪದವಿಯು ಶಾಲು, ಸರಸ್ವತಿ ವಿಗ್ರಹ ಹಾಗೂ ಪ್ರಮಾಣ ಪತ್ರ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ.

ಡಾ. ಟಿ ರುದ್ರೇಶ್ ಪರಿಚಯ :

 

ಈಬಾರಿ ಆಯ್ಕೆಯಾದ ಡಾ. ಟಿ ರುದ್ರೇಶ್ ಅವರ ಪರಿಚಯ ಹೇಳೋದಾದ್ರೆ, ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿಯಲ್ಲಿ 28-03-1956 ರಲ್ಲಿ ಹುಟ್ಟಿದ ಇವರು ಬೆಳವಾಡಿಯಲ್ಲೇ ಪ್ರೈಮರಿ ಸ್ಟಡಿ ಮುಗಿಸಿದ್ದಾರೆ. ಮುಂದೆ ಬೆಂಗಳೂರಿನಲ್ಲಿ ವೈಧ್ಯಕೀಯ ಪದವಿಯನ್ನು ಪಡೆದು ಮುಂಬೈಯಲ್ಲಿರುವ ಆಸ್ಪತ್ರೆಯೊಂದರಲ್ಲಿ ಚೀಫ್ ಮೆಡಿಕಲ್ ಆಫೀಸರ್ ಆಗಿ ಸೇವೆಯನ್ನು ಸೇವೆಯನ್ನು ಆರಂಭಿಸಿದ ಇವರು ನಂತರ ಬೆಂಗಳೂರಿನ ಅಶ್ವಿನಿ ಹೋಮಿಯೋಪಥಿ ಕ್ಲಿನಿಕ್ ನಲ್ಲಿ ಡಾ. ಎ ವಿ ಕೃಷ್ಣಮೂರ್ತಿ ಬಳಿ ಸಹಾಯಕರಾಗಿ ಸೇವೆಗೆ ಸೇರಿದರು. ಅಲ್ಲಿಂದ ಇಲ್ಲಿಯವರೆಗೂ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಅದೇ ಕ್ಲಿನಿಕ್ ನಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯ ನಡುವೆಯೂ ಓದು ಬರಹದತ್ತ ಇವರ ಆಸಕ್ತಿ ಇದೆ.

ಸಂತಾನ ಹೀನತೆ ಮತ್ತು ಅದಕ್ಕೆ ಪರಿಹಾರ ಕುರಿತಂತೆ ಪ್ರಶ್ನೆ ಬಂದಾಗ ಮೊದಲು ಚರ್ಚೆಗೆ ಬರುವ ಹೆಸರು ಬಿ ಟಿ ರುದ್ರೇಶ್ ಹೆಸರು.ದಿನಕ್ಕೆ 200 ರಿಂದ 300 ರೋಗಿಗಳಿಗೆ ಚಿಕಿತ್ಸೆ ನೀಡುವ ಇವರು ಇದುವರೆಗೆ ಸುಮಾರು 15 ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡಿರಬಹುದು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s