ಕ್ಯಾಪಿಟೇಶನ್ ಶುಲ್ಕ ಹೆಚ್ಚಿಗೆ ವಸೂಲಿ ಮಾಡಿದ್ರೆ ಕ್ರಮ: ಡಿಡಿಪಿಐ ಶ್ರೀಧರನ್

ಅನುದಾನ ರಹಿತ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಶಾಲಾ ಕಟ್ಟಡ ನಿರ್ಮಾಣ ಮಾಡುತ್ತಿದ್ದಲ್ಲಿ, ಶಾಲೆಯ ಕಟ್ಟಡವನ್ನು ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಇನ್ನೂ ಹೆಚ್ಚಿಸುತ್ತಿದ್ದಲ್ಲಿ. ಕಂಪ್ಯೂಟರ್‍ಗಳನ್ನು ಖರೀದಿಸಿ, ಅಳವಡಿಸುತ್ತಿದ್ದಲ್ಲಿ, ಪ್ರಯೋಗಾಲದಯ ಉಪಕರಣಗಳ ಅವಶ್ಯಕತೆ ಇದ್ದಲ್ಲಿ ಮಾತ್ರ ಕ್ಯಾಪಟೇಶನ್ ಶುಲ್ಕವನ್ನು ಶಾಲೆಗೆ ಹೊಸದಾಗಿ ಪ್ರವೇಶ ಪಡೆಯಲು ಬಂದ ವಿದ್ಯಾರ್ಥಿಗಳಿಂದ ಒಂದು ಬಾರಿ ಮಾತ್ರ ಬೋಧನಾ ಶುಲ್ಕದಷ್ಟು ವಸೂಲಿ ಮಾಡಬೇಕು. ಹೆಚ್ಚಿಗೆ ವಸೂಲಿ ಮಾಡಿದ್ದು ಕಂಡುಬಂದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಡಿಡಿಪಿಐ ಎ.ಶ್ರೀಧರನ್ ಅವರು ಹೇಳಿದ್ದಾರೆ.

ನಿಗದಿಪಡಿಸಿದ ಶುಲ್ಕವನ್ನು ಹೊರತು ಪಡಿಸಿ ಮಿಕ್ಕ ಯಾವ ಶುಲ್ಕವನ್ನು ಹಾಗೂ ವಂತಿಗೆಯನ್ನು ವಸೂಲಿ ಮಾಡತಕ್ಕದ್ದಲ್ಲ ಹಾಗೂ ವಂತಿಗೆ ಪಡೆಯುವುದನ್ನು  ನಿಷೇಧಿಸಲಾಗಿದೆ. ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ಮಾತ್ರ ವಸೂಲಿ ಮಾಡುವುದಾಗಿ, ಶುಲ್ಕದ ವಿವರಗಳೊಂದಿಗೆ ಸೂಚನಾ ಫಲಕದಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಪ್ರಕಟಿಸಬೇಕು ಎಂದು ಅವರು ಹೇಳಿದ್ದಾರೆ.

ಮಕ್ಕಳಿಗೆ ಪ್ರವೇಶ ನೀಡುವಾಗ ಶಾಲಾ ಮುಖ್ಯಸ್ಥರು/ಆಡಳಿತ ಮಂಡಳಿಯವರು ಅನುಸರಿಸಬೇಕಾದ ಕಾರ್ಯ ವಿಧಾನಗಳು ಮತ್ತು ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಅವರು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಾಲೆಯಲ್ಲಿ ವಸೂಲು ಮಾಡುವಂತಹ ಶುಲ್ಕದ ವಿವರಗಳನ್ನು ಶಾಲೆಯ ಮುಂಭಾಗದಲ್ಲಿ ಬ್ಯಾನರ್ / ಫ್ಲೆಕ್ಸ್ ನಲ್ಲಿ ದಪ್ಪ ಅಕ್ಷರದಲ್ಲಿ ಪ್ರಕಟಿಸಿ, ಸಂಬಂಧಿಸಿದ ವಿವರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಬೇಕು. ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ನೀಡಲು ಒತ್ತಾಯಿಸಿದ ಪ್ರಕರಣಗಳಲ್ಲಿ ಹಾಗೂ ವಂತಿಗೆಯನ್ನು ಸಾರ್ವಜನಿಕ ರಿಂದ ವಸೂಲಿ ಮಾಡುತ್ತಿರುವುದು ಕಂಡುಬಂದಲ್ಲಿ ಅಂತಹ ಶಿಕ್ಷಣ ಸಂಸ್ಥೆಗಳ ಮೇಲೆ ಐ.ಪಿ.ಸಿ.ಸೆಕ್ಷನ್ 418 ಹಾಗೂ 420 ರಂತೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಮತ್ತು ಅಂತಹ ಸಂಸ್ಥೆಗಳ ಮಾನ್ಯತೆಯನ್ನು ರದ್ದುಪಡಿಸಲಾಗುವುದು ಎಂದು ಎಂದು ಡಿಡಿಪಿಐ ಎಚ್ಚರಿಸಿದ್ದಾರೆ.

ಶಾಲೆಗಳಲ್ಲಿ / ಸಂಸ್ಥೆಗಳಲ್ಲಿ / ಶಾಲಾ ಆವರಣದಲ್ಲಿ ಶಾಲಾ ಬ್ಯಾಗ್, ನೋಟ್ ಪುಸ್ತಕ, ಸಮವಸ್ತ್ರ, ಟೈ, ಶೂ ಮತ್ತು ಕಾಲು ಚೀಲಗಳಂತಹ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ.  ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು.

 

ಪುಸ್ತಕ, ಸಮವಸ್ತ್ರ ಖರೀದಿಗೆ ಕಂಡಿಷನ್ಸ್ ಇಲ್ಲ :

ಕರ್ನಾಟಕ ಶಿಕ್ಷಣ ಕಾಯ್ದೆ 1983ರ ನಿಯಮ-1995 ರ ಕಂಡಿಕೆ 11(3)ರ ಪ್ರಕಾರ ಪಾಲಕ ಪೋಷಕರಿಗೆ ನಿರ್ದಿಷ್ಟಪಡಿಸಿದ ಅಂಗಡಿಯಲ್ಲಿಯೇ ನೋಟ್ ಪುಸ್ತಕ ಮತ್ತು ಸಮವಸ್ತ್ರಗಳನ್ನು ಖರೀದಿಸಬೇಕೆಂದು ಒತ್ತಾಯ ಮಾಡಬಾರದು. ಒಂದು ವೇಳೆ ಪಾಲಕ ಪೋಷಕರಿಗೆ ನಿರ್ದಿಷ್ಟಪಡಿಸಿದ ಅಂಗಡಿಯಲ್ಲಿಯೇ ಖರೀದಿ ಮಾಡಲು ಒತ್ತಾಯಿಸುತ್ತಿರುವುದರ ಬಗ್ಗೆ ದೂರುಗಳು ಬಂದಲ್ಲಿ ಅಂತಹ ಶಾಲೆಗಳ ವಿರುದ್ಧ ನಿಯಮಾನುಸಾರ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಖಾಸಗಿ ಪೂರ್ವಪ್ರಾಥಮಿಕ/ಪ್ರಾಥಮಿಕ/ಪ್ರೌಢಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆಯನ್ನು ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಮಾತ್ರ ಪ್ರಾರಂಭಿಸಬೇಕಾಗಿರುತ್ತದೆ. ರಾಜ್ಯ ಪಠ್ಯ ಕ್ರಮ ಅಳವಡಿಸಿರುವ ಶಾಲೆಗಳಲ್ಲಿ ಇಲಾಖೆಯಿಂದ ಪಡೆದ ಪಠ್ಯ ಪುಸ್ತಕಗಳನ್ನು ಮಾತ್ರ ಮಾರಾಟ ಮಾಡತಕ್ಕದ್ದು. ಮಕ್ಕಳಿಗೆ ದೈಹಿಕ/ಮಾನಸಿಕ/ಲೈಂಗಿಕ ಕಿರುಕುಳ ಇಂತಹ ಪ್ರಕರಣಗಳು ನಡೆಯದಂತೆ ಶಾಲಾ ಮುಖ್ಯಸ್ಥರು/ ಆಡಳಿತ ಮಂಡಳಿಯವರು ಮುನ್ನೆಚ್ಚರಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ವಿವರಿಸಿದ್ದಾರೆ.

ಶಾಲೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಮತ್ತು ಶಾಲಾ ವಾಹನದ ಸುರಕ್ಷತೆ ಬಗ್ಗೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿರುವ ಅವರು, ಖಾಸಗಿ ಅನುದಾನ ರಹಿತ ಶಾಲೆಗಳ ಶಾಲಾ ಮುಖ್ಯಸ್ಥರು / ಆಡಳಿತ ಮಂಡಳಿಯವರು ಪ್ರವೇಶಾತಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಗಾಗಿ ಲಭ್ಯವಿರುವ ವಿದ್ಯಾರ್ಥಿಗಳ ಸೀಟುಗಳ ಸಂಖ್ಯೆ ಪ್ರಕಟಿಸಿರಬೇಕು. ಶಾಲಾ ವ್ಯಾಪ್ತಿಯಲ್ಲಿ ಬರುವ ಮಕ್ಕಳಿಗೆ ದಾಖಲಾತಿಯಲ್ಲಿ ಮೊದಲ ಆದ್ಯತೆ ನೀಡಬೇಕು, ಪ್ರವೇಶ ಅರ್ಜಿಗಳನ್ನು ವಿತರಿಸುವ ಬಗ್ಗೆ ಸೂಚನಾ ಫಲಕದಲ್ಲಿ ಪ್ರಕಟಿಸಿರಬೇಕು. ಅರ್ಜಿಗಳ ವಿತರಣೆ ಮತ್ತು ಅರ್ಜಿಗಳನ್ನು ಸ್ವೀಕರಿಸಿದ ಬಗ್ಗೆ ವಹಿಯನ್ನು ನಿರ್ವಹಿಸಿರಬೇಕು.  ಸದರಿ ವಹಿಯಲ್ಲಿ ದಿನಾಂಕವಾರು ವಿವರಗಳನ್ನು ನಮೂದಿಸಿರಬೇಕು. ಪ್ರವೇಶಕ್ಕಾಗಿ ಯಾವುದೇ ಪ್ರವೇಶ ಪರೀಕ್ಷೆಗಳನ್ನು ನಡೆಸುವಂತಿಲ್ಲ. ಸರಕಾರ ನಿಗದಿಪಡಿಸಿದ ಮಕ್ಕಳ ದಾಖಲಾತಿಯಲ್ಲಿ ಮೀಸಲಾತಿಯನ್ನು ಅನುಸರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s