ಕೆನ್ಸಿಂಗ್‍ಟನ್ ಈಜುಕೊಳ ಲೋಕಾರ್ಪಣೆ

 

ನಮ್ಮ ಈಜುಪಟುಗಳು ಮುಂಚೂಣಿ :

ಕರ್ನಾಟಕದ ಈಜುಪಟುಗಳು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ.  ಸುಮಾರು 25 ವರ್ಷಗಳಿಂದ ನಮ್ಮ ಈಜು ಪಟುಗಳು  ಮೊದಲನೇ ಸ್ಥಾನ ಬಿಟ್ಟುಕೊಡದೇ ಪದಕಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಅವರು ತಿಳಿಸಿದರು.

ಬೆಂಗಳೂರು ಹಲಸೂರು ಬಳಿಯಿರುವ ‘ಕೆನ್ಸಿಂಗ್‍ಟನ್ ಈಜುಕೊಳ” ವನ್ನು ಉದ್ಫಾಟಿಸಿ ಮಾತನಾಡಿದ ಅವರು 1971 ರಂದು ನಿರ್ಮಾಣವಾಗಿದ್ದ ಈಜುಕೊಳವು 1995 ರಿಂದ   ಇಲಾಖೆಗೆ ಹಸ್ತಾಂತರಗೊಂಡಿದೆ.  ಈ ಈಜು ಕೊಳವನ್ನು 2008 ರವರೆಗೂ  ನಿಗದಿತವಾಗಿ ನಿರ್ವಹಣೆ ಮಾಡುತ್ತಾ ಮೇಲ್ದರ್ಜೆಗೆ ಆಧುನೀಕರಿಸುತ್ತಾ ನಿರ್ವಹಿಸಲಾಗುತ್ತಿತ್ತು.  ಈಗ 290 ಕೋಟಿ ರೂ. ಗಳ ವೆಚ್ಚದಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.

 

ಉತ್ತಮ ತರಬೇತಿ ಪಡೆಯಿರಿ:

ಸರ್ಕಾರವು ಈ ವರ್ಷದಿಂದ 1000 ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹ ನೀಡುತ್ತಿದೆ. ಆದ್ದರಿಂದ ರಾಜ್ಯದ ಯುವಕ ಯುವತಿಯರು ಉತ್ತಮ ರೀತಿಯ ತರಬೇತಿ ಪಡೆದು ಅಂತರರಾಷ್ಟ್ರೀಯ ಮಟ್ಟದಲ್ಲೂ ಬಹುಮಾನ ಪಡೆಯುವಂತಾಗಬೇಕೆಂದರು. ಈಜುಕೊಳವನ್ನು ಮೋಜು ಹಾಗೂ ಆಟವಾಡಲು ಬಳಸಿಕೊಳ್ಳದೇ ಉತ್ತಮ ತರಬೇತಿಯನ್ನು ಪಡೆದು ರಾಜ್ಯಕ್ಕೆ, ಸರ್ಕಾರಕ್ಕೆ ಒಳ್ಳೆಯ ಕೀರ್ತಿ ತರಬೇಕೆಂದು ನಗರಾಭಿವೃದ್ಧಿ ಹಾಗೂ ಹಜ್ ಸಚಿವ ಆರ್. ರೋಷನ್ ಬೇಗ್ ಅವರು ಯುವಜನತೆಗೆ ಕರೆ ನೀಡಿದರು.

ಈ ಸಮಾರಂಭದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ ಜೆ ಜಾರ್ಜ್, ಬೆಂಗಳೂರು ಕೇಂದ್ರ ಲೋಕಸಭಾ ಪಿ.ಸಿ. ಮೋಹನ್,  ಬಿ.ಬಿ.ಎಂ.ಪಿ. ಸದಸ್ಯೆ ಮಮತಾ ಶರವಣನ್,  ಕರ್ನಾಟಕ ಕ್ರೀಡಾ  ಪ್ರಾಧಿಕಾರದ ಉಪಾಧ್ಯಕ್ಷ ಮೀರ್ ರೋಷನ್ ಅಲಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಅನುಪಮ್ ಅಗರ್‍ವಾಲ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s