ಕೆಡಿಪಿ ಸಭೆಯಲ್ಲಿ ಬರ ಪರಿಹಾರ ಕಾರ್ಯಗಳ ಚರ್ಚೆ

ಇಡೀ ರಾಜ್ಯಾದ್ಯಂತ ಬರ ಪರಿಹಾರ ಕಾಮಗಾರಿಗಳನ್ನು ಪ್ರಾಮಾಣಿಕವಾಗಿ ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ರಾಜ್ಯದ ಎಲ್ಲಾ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.

ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು, ಜಿಲ್ಲಾಡಳಿತ, ತಾಲೂಕು ಆಡಳಿತ, ಗ್ರಾಮ ಮಟ್ಟದ ಅಧಿಕಾರಿಗಳು ಕೂಡಾ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ

ಹಾಸನ ಜಿಲ್ಲಾ ಪಂಚಾಯ್ತಿಯ 2017-18ನೇ ಸಾಲಿನ ಮೊದಲ ಕೆ ಡಿ ಪಿ ಸಭೆ ಜಿಲ್ಲಾ‌ಪಂಚಾಯಿತಿ ಅಧ್ಯಕ್ಷರಾದ ‌ಶ್ವೇತಾ ದೇವರಾಜ್ ಅವರ ಅಧ್ಯಕ್ಷತೆಯಲ್ಲಿ‌ ನಡೆಯಿತು. ಸಭೆಯಲ್ಲಿ 2016-17ನೇ ಸಾಲಿನಲ್ಲಿ‌ ಇಲಾಖಾವಾರು  ಆರ್ಥಿಕ, ಭೌತಿಕ‌ ಸಾಧನೆಗಳ ಬಗ್ಗೆ‌ ಪರಿಶೀಲನೆ‌ ನಡೆಸಲಾಯಿತು.

ಕೃಷಿ, ತೋಟಗಾರಿಕೆ ,ಗ್ರಾಮೀಣ, ಕುಡಿಯುವ ನೀರು ಸರಬರಾಜು,ಸಮಾಜ ಕಲ್ಯಾಣ,ಪಶುಪಾಲನೆ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ,ಶಿಕ್ಷಣ ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ‌,ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ‌ ಮತ್ತಿತರ ಇಲಾಖೆಗಳ‌ ಪ್ರಗತಿಯ ಬಗ್ಗೆ‌ ಸಭೆಯಲ್ಲಿ ಸವಿವರವಾದ ಮಾಹಿತಿ‌ ಪಡೆಯಲಾಯಿತು. 

ಕೆಲಸದಲ್ಲಿ ಸಮನ್ವಯತೆ ಇರಲಿ:             

ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಮುಂದುವರೆದಿರುವುದರಿಂದ ವಿವಿಧ ಇಲಾಖೆಗಳು‌ ಸಮನ್ವಯತೆಯಿಂದ ಕೆಲಸ‌ ಮಾಡಬೇಕು, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ‌ ಸಂಚಾರ ನಡೆಸಿ‌ ಜನ ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ನಿಭಾಯಿಸಬೇಕು.ರೈತರಲ್ಲಿ ‌ಆತ್ಮ ವಿಶ್ವಾಸ ತುಂಬಬೇಕು ‌ಎಂದು‌ ಜಿಲ್ಲಾ‌ಪಂಚಾಯಿತಿ ಅಧ್ಯಕ್ಷರು ತಿಳಿಸಿದರು.

ಬರ ಪೀಡಿತ ಪ್ರದೇಶಗಳ್ಲಿ ಇನ್ನೂ ಹೆಚ್ಚಿನ ಮೇವು ಬ್ಯಾಂಕ್ ತೆರೆಯಬೇಕು. ಯಾವುದೇ ಸಂದರ್ಭದಲ್ಲಿ ಸಮಸ್ಯೆ ಉಲ್ಬಣವಾಗದಂತೆ‌  ನಿಗಾವಹಿಸಿ. ಲಭ್ಯತೆ ಇದ್ದರೆ ಇನ್ನಷ್ಟು ಮೇವಿನ ಬೀಜದ ಮಿನಿಕಿಟ್ ವಿತರಿಸಿ. ಮುಂದಿನ ಇನ್ನೂ‌ ಎರಡು ತಿಂಗಳು ಜಿಲ್ಲೆಯ ಪಾಲಿಗೆ ಸವಾಲಿನ ದಿನಗಳಾಗಿವೆ ಎಂದು ಶ್ವೇತಾ ದೇವರಾಜ್ ಹೇಳಿದರು


ಜಿಲ್ಲೆಯ ಹಿತ ಮುಖ್ಯ :     

ಎಲ್ಲಾ ಅಧಿಕಾರಿಗಳು ಸಂಘಟಿತರಾಗಿ ‌ಶ್ರಮಿಸಿದಾಗ ಮಾತ್ರ ನಿರ್ಧಿಷ್ಟ ಗುರಿ ಸಾಧನೆ ಸಾಧ್ಯ ಹಾಗಾಗಿ ಎಲ್ಲರೂ ಜಿಲ್ಲೆಯ ಹಿತ ಸಾಧನೆಗೆ ದುಡಿಯಬೇಕು, ಸಭೆಯಲ್ಲಿ‌ ಕನ್ನಡ‌ ಅನುಷ್ಠಾನ ವರದಿ ಸಲ್ಲಿಸಲಾಗುತ್ತಿಲ್ಲ ಎಲ್ಲಾ‌ ಜಿಲ್ಲೆಗಳಲ್ಲಿ ಇರುವ ಸಂಪ್ರದಾಯವನ್ನು ಇಲ್ಲಿ ಪಾಲಿಸುತ್ತಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ದಿನೇಶ್ ಅವರು ಜಿಲ್ಲಾ‌ಪಂಚಾಯಿತಿ ಅಧ್ಯಕ್ಷರ ಗಮನಕ್ಕೆ‌ತಂದರು‌. ಕನ್ನಡದ ಸಂಸ್ಕ್ರತಿ ಇಲಾಖೆ ಇದನ್ನು ಸಮನ್ವಯ‌ ಮಾಡ‌ಬೇಕು‌ ಆದರೆ  ‌ಇಲಾಖೆಯ ‌ಪ್ರತಿನಿಧಿಗಳು ‌ಸಭಗೆ ಹಾಜರಾಗುತ್ತಿಲ್ಲ ಈ‌ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ‌ ತರಲಾಗುವುದು ಎಂದು ಜಿಲ್ಲಾ‌ ಪಂಚಾಯಿತಿ‌ ಉಪ ಕಾರ್ಯದರ್ಶಿ ನಾಗರಾಜ್,ಮುಖ್ಯ ಯೋಜನಾಧಿಕಾರಿ ಪರಪ್ಪ ಸ್ವಾಮಿ ತಿಳಿಸಿದರು

ಬೇಸಿಗೆ ಕಾಲ, ಬಿಸಿಲಿನ ತಾಪ ಹೆಚ್ಚುತ್ತಿದ್ದು ಕುಡಿಯುವ ನೀರಿನ ಕೊರತೆ ಇರುವ ಹಿನ್ನಲೆಯಲ್ಲಿ‌ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ  ಕ್ರಮಗಳನ್ನು ಕೈಗೊಳ್ಳಿ, ಸಾರ್ವಜನಿಕರಿಗೆ‌ ಅರಿವು‌ಮೂಡಿಸಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಿದರು

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s