ಹನಿ ಹನಿ ನೀರನ್ನೂ ಸಂರಕ್ಷಿಸಿ ಭವಿಷ್ಯಕ್ಕೆ ನೀರುಳಿಸಿ

ರಾಜ್ಯದಲ್ಲಿನ ಪ್ರಸ್ತುತ ನೀರಿನ ಹಾಹಾಕಾರ ಮುಂದೆ ನಮಗೆ ಬರಬಹುದಾದ ಭೀಕರ ಪರಿಸ್ಥಿತಿಯ ಕೈಗನ್ನಡಿ. ನದಿಗಳಲ್ಲಿ ನೀರಿಲ್ಲ. ಉಪ ನದಿಗಳ ಬಾಯಾರಿದೆ. ಹಳ್ಳ ಕೊಳ್ಳ, ಕೆರೆಗಳ ತೊರೆಗಳಿಲ್ಲ. ಅಂತರ್ಜಲದ ಮಟ್ಟ ಪಾತಾಳ ತಲುಪಿಯಾಗಿದೆ. ಜನಕ್ಕೂ ಜಾನುವಾರುಗಳಿಗೂ ನೀರು ಅಕ್ಷರಶಹಃ ಅಮೃತವೇ ಎನ್ನುವಂತಾಗಿದೆ. ನೀರನ್ನು ನಾವು ಅವಶ್ಯಕತೆಯಷ್ಟು ಬಳಸಿಕೊಂಡು ಯತೇಶ್ಚವಾಗಿ ಉಳಿಸಿಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ಬೊಗಸೆ ನೀರೂ ಉಳಿಯೊಲ್ಲ. ಹಾಗಾದ್ರೆ ತುರ್ತಾಗಿ ನಾವು ಮಾಡಬೇಕಿರೋದೇನು ? ರಾಜ್ಯದಲ್ಲಿನ ಪ್ರತಿ ಹಳ್ಳಿಗಳಲ್ಲಿರುವ ಕೆರೆಗಳ ಪುನಶ್ಚೇತನವಾಗಬೇಕು. ಪ್ರತಿ ರೈತನೂ ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳಬೇಕು. ಡ್ಯಾಂಗಳ ಹೂಳೆತ್ತಬೇಕು. ಮಳೆಕೊಯ್ಲು ಪ್ರತಿ ಮನೆಯನ್ನೂ ತಲುಪಬೇಕು. ಸರ್ಕಾರ ಎಲ್ಲದಕ್ಕೂ ಬದ್ಧವಾಗಿದೆ. ನೀರಿನ ಸಂರಕ್ಷಣೆ ಕುರಿತು ಮೈಸೂರಿನಲ್ಲಿ ಸಂವಾದ ಕಾರ್ಯಕ್ರಮ ಅದರ ವಿವರ ಇಲ್ಲಿದೆ.

ದಿನದಿಂದ ದಿನಕ್ಕೆ ಭೂಮಿಯ ಮೇಲೆ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. 100 ರಿಂದ 150 ಅಡಿಗೆ ದೊರೆಯುತ್ತಿದ್ದ ಕೊಳವೆ ಬಾವಿ ನೀರು ಇಂದು 1,000 ದಿಂದ 1,500 ಅಡಿಗೆ ದೊರೆಯುತ್ತಿದೆ. ಇದೇ ರೀತಿ ಮುಂದುವರೆದರೆ ಮುಂದಿನ ಪೀಳಿಗೆಗೆ ನೀರು ಸಿಗುವುದಿಲ್ಲ. ಅಂತರ್ಜಲವನ್ನು ಸಂರಕ್ಷಿಸಿ ನೀರಿನ ಪ್ರಮಾಣ ಹೆಚ್ಚಿಸಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೊಹಮ್ಮದ್ ಮುಜೀರುಲ್ಲಾ ಅವರು ತಿಳಿಸಿದರು.

ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾನೂನು ಸಂಶೋಧನೆ ಹಾಗೂ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ‘ಅಂತರ್ಜಲ ಸಂರಕ್ಷಿಸಲು ಮಾರ್ಗೋಪಾಯಗಳು’ ಕುರಿತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮನುಷ್ಯನಿಗೆ ಮಳೆ ಎಂಬುದು ಪರಿಸರ ಕೊಟ್ಟಿರುವ ಅತ್ಯಂತ ದೊಡ್ಡ ಕೊಡುಗೆ. ಮಳೆ ನೀರನ್ನು ಮಣ್ಣಿನಲ್ಲಿ ಇಂಗಲು ಅವಕಾಶ ನೀಡದೆ ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆ ಡಾಂಬರೀಕರಣ, ಮನೆ ಸುತ್ತಲು ಕಾಂಕ್ರೀಟ್ ನೆಲ ಮಾಡಲಾಗುತ್ತಿದೆ. ಇದರಿಂದ ಭೂಮಿಯಲ್ಲಿ ನೀರು ಇಂಗುತ್ತಿಲ್ಲ. ನೀರು ಇಂಗಲು ಅವಕಾಶ ನೀಡುವುದರ ಜೊತೆಗೆ ಗಿಡ ಮರಗಳನ್ನು ಬೆಳೆಸಬೇಕು. ನೈಸರ್ಗಿಕ ಸಂಪನ್ಮೂಲಗಳನ್ನು ಹೆಚ್ಚಾಗಿ ಬಳಸಿಕೊಳ್ಳಬೇಕು. ಮಳೆನೀರು ಕೊಯ್ಲು ಅನುಸರಿಸುವುದರಿಂದ ನೀರನ್ನು ಸಂರಕ್ಷಿಸಬಹುದು. ಇಂಗು ಗುಂಡಿಯನ್ನು ನಿರ್ಮಿಸಿ ನೀರನ್ನು ಭೂಮಿಯಲ್ಲಿ ಇಂಗಿಸುವುದರಿಂದ ಕೃಷಿ ಪದ್ಧತಿಯನ್ನು ಸಹ ಉತ್ತಮಗೊಳಿಸಬಹುದು.  ಮನೆಗೊಂದು ಗಿಡ ನೆಟ್ಟು ಬೆಳಸುವ ಪ್ರವೃತ್ತಿಯನ್ನು ಮೈಸೂರು ನಗರದ ಜನರು ಬೆಳಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ  ನಾಲ್ವಡಿ ಕೃಷ್ಣ ರಾಜ ಒಡೆಯರ್ ಕಾನೂನು ಸಂಶೋಧನೆ ಮತ್ತು ಅಧ್ಯಯನ ಕೇಂದ್ರದ ಅಧ್ಯಕ್ಷ ಅ.ಮ. ಭಾಸ್ಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ರಾಜು ಆರ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಎಂ.ಜಿ.ಯತೀಶ್ ಹಾಗೂ ನಾಲ್ವಡಿ ಕೃಷ್ಣ ರಾಜ ಒಡೆಯರ್ ಕಾನೂನು ಸಂಶೋಧನೆ ಮತ್ತು ಅಧ್ಯಯನ ಕೇಂದ್ರದ ಕಾರ್ಯದರ್ಶಿ ಶ್ರೀಕಾಂತ್ ಭಟ್ ಅವರುಗಳು ಉಪಸ್ಥಿತರಿದ್ದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s