ಬೇಸಿಗೆ ಸಂಭ್ರಮಕೆ ನಾಂದಿ

ರಾಜ್ಯದಲ್ಲಿ ಬರದಿಂಗಾಗಿ ನೀರಿನ ಬವಣೆ ಸಾಮಾನ್ಯವಾಗಿದೆ. ಬಯಲು ಸೀಮೆಗಳಲ್ಲಿ ಸಮಸ್ಯೆ ತೀವ್ರವಾಗಿದೆ. ಉತ್ತರ ಕರ್ನಾಟಕದಲ್ಲಿ ಬಿಸಿಲ ಧಗೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಇನ್ನು ಬೇಸಿಗೆಯಲ್ಲಂತೂ ಕೇಳೋದೇ ಬೇಡ. ಮಕ್ಕಳು ವೃದ್ಧರ ಪಾಡು ದೇವರಿಗೇ ಪ್ರೀತಿ. ಇದನ್ನು ಮನಗಂಡ ಸರ್ಕಾರ ರಾಜ್ಯಾದ್ಯಂತ ಬೇಸಿಗೆಯ ಬಿಡುವಿನಲ್ಲೂ ಆಯ್ದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಧ್ಯಾಹ್ನದ ಉಪಹಾರದ ಜೊತೆಗೆ “ಸ್ವಲ್ಪ ಓದು-ಸ್ವಲ್ಪ ಮೋಜು”ಆಧಾರಿತ ಬೇಸಿಗೆ ಸಂಭ್ರಮವನ್ನು ಆಯೋಜಿಸಿದೆ. ಹಾಗಾಗಿ ರಾಜ್ಯದ ಸರ್ಕಾರಿ ಶಾಲೆಗಳ ಮಕ್ಕಳೀಗ ಶಾಲೆಯಲ್ಲಿಗೇ ಬೇಸಿಗೆ ರಜೆಯನ್ನು ಸ್ವಲ್ಪ ಓದು-ಸ್ವಲ್ಪ ಮೋಜಿನೊಂದಿಗೆ ಹಾಯಾಗಿ ಕಳೆಯಬಹುದು.

ಸರ್ಕಾರದ ಈ ನಡೆ ಬರಪೀಡಿತ ಪ್ರದೇಶಗಳಿಗಂತೂ ಅಕ್ಷಯ ಪಾತ್ರೆ ಅಕ್ಷರದ ಜೊತೆಗೆ. ನಮ್ಮ ರಾಜ್ಯದ ಪೋಷಕರು ತಪ್ಪದೆ ತಮ್ಮ ಮಕ್ಕಳನ್ನು ಈ ಬಾರಿ ಈ ಬೇಸಿಗೆಯ ಸಂಭ್ರಮಕ್ಕೆ ಕಳುಹಿಸಿಕೊಡಿ. ನಿಜಕ್ಕೂ ನಿಮ್ಮ ಮಗುವಿಗೆ ಒಳ್ಳೆಯ ವಿದ್ಯೆಯೊಂದು ದಕ್ಕುತ್ತೆ. ಹೊಸ ಕಲಿಕೆ ಪ್ರಾಪ್ತವಾಗುತ್ತೆ. ಬೇಸಿಗೆ ರಜೆಗೆಂದು ಅಜ್ಜಿ ಮನೆಗೋ, ನೆಂಟರ ಮನೆಗೂ ಹೋಗೋದು ಪ್ರತಿ ವರ್ಷ ಇದ್ದುದ್ದೇ. ಅಂದಹಾಗೆ ಈ ಬೇಸಿಗೆ ಸಂಭ್ರಮ ಕುರಿತು ಹಾವೇರಿ ಜಿಲ್ಲೆಯಿಂದ ವರದಿಯೊಂದು ಬಂದಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.

ಸರ್ಕಾರವು ಹಾವೇರಿ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿರುವುದರಿಂದ ಜಿಲ್ಲೆಯ ಎಲ್ಲ ಬ್ಲಾಕ್‍ಗಳ ಆಯ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಧ್ಯಾಹ್ನದ ಉಪಹಾರ ಯೋಜನೆಯ ಜೊತೆಗೆ 2016-17ನೇ ಸಾಲಿನಲ್ಲಿ 5 ಮತ್ತು 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಂದರೆ 2017-18ನೇ ಸಾಲಿನಲ್ಲಿ 6 ಮತ್ತು 7ನೇ ತರಗತಿಗೆ ದಾಖಲಾಗುವ ಮಕ್ಕಳಿಗೆ “ಸ್ವಲ್ಪ ಓದು-ಸ್ವಲ್ಪ ಮೋಜು” ಆಧಾರಿತ ಬೇಸಿಗೆ ಸಂಭ್ರಮ ಕಲಿಕಾ ಯೋಜನೆಯ ಕಾರ್ಯಕ್ರಮವನ್ನು ಎಪ್ರಿಲ್ 17 ರಿಂದ ಮೇ 28ರವರೆಗೆ ಆಯೋಜಿಸಲಾಗಿದೆ.

ಜಿಲ್ಲೆಯಲ್ಲಿ ಈಗಾಗಲೇ 300 ಶಾಲೆಗಳನ್ನು ಗುರುತಿಸಿದ್ದು, ಪ್ರತಿ ಶಾಲೆಯ ಇಬ್ಬರು ಶಿಕ್ಷಕರಿಗೆ ತರಬೇತಿ ನೀಡಲಾಗಿದೆ ಹಾಗೂ ಕಲಿಕಾ ಸಾಮಗ್ರಿಗಳನ್ನು ಸರಬರಾಜು ಮಾಡಲಾಗಿದೆ. ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಎಸ್.ಡಿ.ಎಂ.ಸಿ.ಸದಸ್ಯರು ಹಾಗೂ ಪೋಷಕರು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಡಯಟ್ ಪ್ರಾಂಶುಪಾಲರು ಕೋರಿದ್ದಾರೆ.

ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಾಲಾ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s